PM Kisan List Check: ಹೊಸ ರೈತರ ಲಿಸ್ಟ್ ಬಿಡುಗಡೆ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ PM Kisan Samman Nidhi ಹೊಸ ರೈತರ ಲಿಸ್ಟ್ ಬಿಡುಗಡೆಯಾಗಿದೆ ನಿಮ್ಮ ಹೆಸರನ್ನು ಹೇಗೆ ಚಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, PM Kisan ಯೋಜನೆ ಹಣವು ಜಮಾ ಆಗಲು ಏನು ಮಾಡಬೇಕು ಮತ್ತು ಈ ಯೋಜನೆಯ ಹಣ ಜಮಾ ಆಗಿರುವುದನ್ನು ನಿಮ್ಮ ಮೊಬೈಲ್ ನಲ್ಲಿಯೆ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಮಾ ಆಗಬೇಕಾಗಿರುವ 18ನೇ ಕಂತಿನ ಹಣವು ಬಿಡುಗಡೆಯಾಗಬಹುದು ಹಾಗೂ ಯಾವ ತಿಂಗಳಲ್ಲಿ ಬಿಡುಗಡೆಯಾಗುತ್ತದೆ ಅಧಿಕೃತವಾದ ಮಾಹಿತಿ ಇಲ್ಲಿದೆ.

ಹಾಗಾದರೆ ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ಯಾವಾಗ ಜಮಾ ಆಗುತ್ತದೆ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಏನು ಮಾಡಬೇಕು. ಬಿಡುಗಡೆಯಾದ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ನೀವು ನೋಡಿಕೊಳ್ಳಬಹುದು ಆಗಿದೆ.

ಕಳೆದ ಜೂನ್ ತಿಂಗಳಲ್ಲಿ ಒಂದಿಷ್ಟು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಜಮಾ ಮಾಡಲಾಗಿತ್ತು ಇನ್ನು ಹಲವಾರು ರೈತರಿಗೆ ಈ ಒಂದು ಯೋಜನೆಯ ಹಣವನ್ನು ಜಮಾ ಮಾಡಿರಲಿಲ್ಲ. ಇನ್ನು ಮುಂದೆ ಬರುವಂತಹ ಹೊಸ ಲಿಸ್ಟ್ ನಲ್ಲಿ ಈ ಯೋಜನೆಯ ಹಣವು ಜಮಾ ಆಗದೇ ಇರುವವರು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ ಹಣವು ಜಮಾ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿ.!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಿಸ್ಟ್ ನಲ್ಲಿ ನಿಮಗೆ ಹಣವು ಜಮಾ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಲು ಈ ಅಧಿಕೃತವಾದ https://pmkisan.gov.in/Rpt_BeneficiaryStatus_pub.aspx ವೆಬ್ಸೈಟ್ಗೆ ಭೇಟಿ ನೀಡಿ ನಂತರ ಈ ಒಂದು ಯೋಜನೆಯ ಫಲಾನುಭವಿ ಹೆಸರುಗಳನ್ನು ಚೆಕ್ ಮಾಡುವ ಪುಟವು ಕಾಣುತ್ತದೆ.

ಮೊದಲಿಗೆ ನೀವು ಅಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಅದಾದ ನಂತರದಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಮುಂದೆ ನಿಮ್ಮ ಊರನ್ನು ಆರಿಸಿಕೊಳ್ಳಬೇಕು ಮುಂದೆ ಅಲ್ಲಿ ಗೇಟ್ ರಿಪೋರ್ಟ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಆಯ್ಕೆ ಅನ್ನು ಸೆಲೆಕ್ಟ್ ಮಾಡಿದ ನಂತರ ಒಂದು ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಫಲಾನುಭವಿ ಹೆಸರುಗಳ ಪಟ್ಟಿಯು ಗೋಚರವಾಗುತ್ತದೆ. ನಂತರ ಅಲ್ಲಿ A, B, C, ಎಂಬ ಅಕ್ಷರ ಹೆಸರುಗಳ ಪಟ್ಟಿಯನ್ನು ನೋಡಬಹುದು ಅಲ್ಲಿ ನೀವು ಚೆಕ್ ಮಾಡಬೇಕಿರುವ ಹೆಸರಿನ ಮೊದಲ ಅಕ್ಷರ ಯಾವುದಿರುತ್ತದೆಯೋ ಆ ಅಕ್ಷರದ ಮೇಲೆ ಕ್ಲಿಕ್ ಮಾಡಿಕೊಂಡು ಅಲ್ಲಿ ಇರುವ 1, 2, 3, ಎಂಬ ಪೇಜ್ ಗಳ ಆಧಾರದ ಮೇಲೆ ನಿಮಗೆ ಈ ಯೋಜನೆಯ ಹಣವು ಜಮಾ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಈ ಯೋಜನೆಯ ಹಣವು ಜಮಾ ಆಗಲು ರೈತರು ಇಕೆವೈಸಿ ಮಾಡಿಸುವುದು ಕಡ್ಡಾಯ.!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣದ ಪ್ರಯೋಜನವನ್ನು ರೈತರು ಪಡೆದುಕೊಳ್ಳಲು ಇಕೆವೈಸಿ ಅನ್ನು ಕಡ್ಡಾಯವಾಗಿ ಮಾಡಿಸಿರಬೇಕು. ಇಕೆವೈಸಿ ಅನ್ನು ಯಾವ ಯಾವ ರೈತರುಗಳು ಮಾಡಿಸಿಲ್ಲವೋ ಅಂತವರು ಕೂಡಲೆ ಇಕೆವೈಸಿ ಯನ್ನು ಮಾಡಿಸಿಕೊಳ್ಳಿರಿ. ನೀವು ಮಾಡಿಸುವಂತಹ ಇಕೆವೈಸಿ ಯನ್ನು ಕೂಡ ಇಕೆವೈಸಿ ಆಗಿದೆಯಾ ಅಥವಾ ಇಲ್ಲವೋ ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಏನಿದು ಪಿಎಂ ಕಿಸಾನ್ ಯೋಜನೆ.??

ಚಿಕ್ಕ ಮತ್ತು ಅತಿ ಚಿಕ್ಕ ರೈತರಿಗೆ ಆರ್ಥಿಕವಾಗಿ ನೆರವು ನೀಡಬೇಕೆನ್ನುವ ಉದ್ದೇಶದಿಂದ ಈ ಪಿಎಂ ಕಿಸಾನ್ ಯೋಜನೆಯನ್ನು ತಂದಿದ್ದಾರೆ. ಪ್ರತಿ ವರ್ಷವೂ 6,000 ರೂ. ಹಣವನ್ನು ಮೂರು ಕಂತುಗಳನ್ನಾಗಿ ಮಾಡಿ ಈ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೆ 2,000 ರೂ. ಹಣದಂತೆ ಒಂದು ವರ್ಷದಲ್ಲಿ ಒಟ್ಟು 6,000 ಸಾವಿರ ರೂಪಾಯಿಗಳನ್ನು ರೈತರಿಗೆ ನೆರವು ಆಗಲಿ ಎಂದು ಜಮಾ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಯೋಜನೆಗಳಲ್ಲಿ ಈ ಪಿಎಂ ಕಿಸಾನ್ ಯೋಜನೆಯು ಮಹತ್ವದ ಯೋಜನೆಯಾಗಿದೆ. ಈಗಾಗಲೇ ದೇಶಾದ್ಯಂತ 9 ಕೋಟಿಗೂ ಹೆಚ್ಚಿನ ರೈತರುಗಳು ತಮ್ಮ ಹೆಸರನ್ನು ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಟಿಎಂ ಕಿಸಾನ್ ಇಕೆವೈಸಿ ಮಾಡಿಸಿರುವವರು ಅದರ ದಾಖಲೆಗಳಲ್ಲಿ ನಿಮ್ಮ ಹೆಸರು ಎಲ್ಲ ಕಡೆ ಒಂದೇ ರೀತಿಯಾಗಿ ಇರುವುದನ್ನು ಚೆಕ್ ಮಾಡಿಕೊಳ್ಳಿರಿ ಇದರ ಜೊತೆಗೆ ಎಲ್ಲ ರೈತರುಗಳು ಆಧಾರ್ ಸೀಡಿಂಗ್ ಅನ್ನು ತಪ್ಪದೇ ಮಾಡಿಸಿಕೊಳ್ಳಿ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಿಕೊಳ್ಳಲು ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡನ್ನು ಸಲ್ಲಿಸಿ ಸೀಡಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ಸ್ನೇಹಿತರೆ, ಈ ಒಂದು ಲೇಖನವು PM Kisan ಯೋಜನೆ ಹಣವು ಜಮಾ ಆಗಲು ಏನು ಮಾಡಬೇಕು ಮತ್ತು ಈ ಯೋಜನೆಯ ಹಣ ಜಮಾ ಆಗಿರುವುದನ್ನು ನಿಮ್ಮ ಮೊಬೈಲ್ ನಲ್ಲಿಯೆ ಹೇಗೆ ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment