Kisan Credit Card Loan Scheme: ಕಿಸಾನ್ ಕಾರ್ಡ್ ಹೊಂದಿರುವಂತಹ ರೈತರಿಗೆ ಸರ್ಕಾರದ ಕಡೆಯಿಂದ ಮೂರು ಲಕ್ಷ ಸಾಲ ಸೌಲಭ್ಯ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಕಿಸಾನ್ ಕ್ರೆಡಿಟ ಕಾರ್ಡ್ ಲೋನ್ ಯೋಜನೆ ಅಡಿಯಲ್ಲಿ ನೀವು ಸಾಲ ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ವಿತರಣೆಯಾದ ಕೆಸಿಸಿ ಸಾಲದ ಬಗ್ಗೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವಂತಹ ಬ್ಯಾಂಕುಗಳು ಯಾವುವು ಹಾಗೂ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಯೋಜನೆಯನ್ನು ಕೇಂದ್ರ ಸರ್ಕಾರವು ಕೃಷಿ ಮತ್ತು ಪಶು ಸಂಗೋಪನೆಯಂತಹ ಚಟುವಟಿಕೆಗಳನ್ನು ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರಿಗೆ ಕಮ್ಮಿ ಬಡ್ಡಿಯಲ್ಲಿ ಈ ಒಂದು ಯೋಜನೆಯ ಅಡಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ನಿಮ್ಮ ಹತ್ತಿರ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ 3 ಲಕ್ಷದವರೆಗೆ ಕೃಷಿಗಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಈ ನೀಡುತ್ತಿರುವ ಸಾಲವು ಶೇ.4ರ ಬಡ್ಡಿಯಲ್ಲಿ ರೈತರುಗಳಿಗೆ ಕುರಿ ಮೇಕೆ, ಕೋಳಿ, ಮೀನು ಸಾಕಾಣಿಕೆಗೆ ಮತ್ತು ಹೈನುಗಾರಿಕೆಗೆ 2 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತಿದೆ. ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಜಾಗೃತಿಗೆ ಕೃಷಿ ಆಯುಕ್ತರ ಆದೇಶ.!

ರಾಷ್ಟ್ರೀಯ ಬ್ಯಾಂಕು ಹಾಗೂ ಸಹಕಾರ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಯ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಬ್ಯಾಂಕರ್ಸ್ ಸಭೆಯಲ್ಲಿ ( DLBC ) ಬಗ್ಗೆ ಚರ್ಚಿಸಿ ರೈತರಿಗೆ ಅರಿವು ಮೂಡಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಹೇಳಿದ್ದಾರೆ. ಈ ಸಭೆಯಲ್ಲಿ ಕೃಷಿ ಆಯುಕ್ತರಿಗೆ ಕಡಿಮೆ ಬಡ್ಡಿಯ ಸಾಲದ ಪ್ರಯೋಜನವನ್ನು ಪಡೆದುಕೊಳ್ಳಲು ರೈತರಿಗೆ ಅರಿವು ಮೂಡಿಸುವುದಕ್ಕಾಗಿ ರಾಜ್ಯದಲ್ಲಿರುವ ಎಲ್ಲ ಜಿಲ್ಲೆಗಳ ಕೃಷಿಯ ಇಲಾಖೆಯ ಜಂಟಿ ನಿರ್ದೇಶಕರಿಗೆ ಪ್ರಕಟಣೆಯನ್ನು ನೀಡಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವಂತಹ ಬ್ಯಾಂಕುಗಳು.??

( SBI ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ( HDFC) ಎಚ್ ಡಿ ಎಫ್ ಸಿ, ( ICICI ) ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡನ್ನು ಪಡೆಯಬಹುದು. ಸಂಸ್ಕರಣಾ ಶುಲ್ಕಗಳು ಮತ್ತು ಪ್ರೀಮಿಯಂ ವಿಮಾಗಳು ಸೇರಿದಂತೆ ಹಾಗೂ ಬಡ್ಡಿ ದರಗಳು ಕೂಡ ಬ್ಯಾಂಕ್ನಿಂದ ಬ್ಯಾಂಕ್ ಗೆ ಬದಲಾಗುತ್ತವೆ.

ರೈತರುಗಳು 1.60 ಲಕ್ಷದಿಂದ ಹಿಡಿದು 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ. ಸಾಲ ಪಡೆದಿರುವಂತಹ ರೈತರಿಗೆ ಆರೋಗ್ಯದ ವಿಮೆ ಮತ್ತು ಅಪಘಾತದ ವಿಮೆಯ ಸೌಲಭ್ಯ ಇರುತ್ತದೆ. ಸಾಲ ಪಡೆದಿರುವಂತಹ ರೈತರಿಗೆ ಅಪಘಾತದಿಂದ ಅಂಗವೈಕಲ್ಯ ಮತ್ತು ಸಾವಾದರೆ 50 ಸಾವಿರ ವಿಮೆಯ ಸೌಲಭ್ಯವಿರುತ್ತದೆ ಮತ್ತು ಇತರೆ ಸಮಯದಲ್ಲಿ 25 ಸಾವಿರ ವಿಮೆ ಸೌಲಭ್ಯ ವಾಗಿರುತ್ತದೆ. ಬ್ಯಾಂಕನಿಂದ ನಗದು ತೆಗೆದುಕೊಳ್ಳಲು ಪಾಸ್ ಬುಕ್ ನೀಡಲಾಗುವುದು. 25 ಸಾವಿರ ನಗದನ್ನು ತೆಗೆದುಕೊಳ್ಳುವ ಮಿತಿಯೊಂದಿಗೆ ಚೆಕ್ ಬುಕ್ ನೀಡಲಾಗುವುದು. ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವ ರೈತರಿಗೆ ಬಡ್ಡಿಯ ಮೇಲೆ ಸಬ್ಸಿಡಿಯನ್ನು ಕೊಡಲಾಗುತ್ತದೆ.

ಒಂದು ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು.??

ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಗೆ ಅರ್ಜಿ ಸಲ್ಲಿಸಲು ಆಸಕ್ತ ಇರುವಂತಹ ಅಭ್ಯರ್ಥಿಗಳು ಆನ್ಲೈನ್ ಮತ್ತು ಆಫ್ ಲೈನ್ ಅಲ್ಲಿ ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಗೆ ಅರ್ಜಿಯನ್ನು ಹಾಕಬಹುದು ಆಗಿದೆ. ಈ ಮೇಲೆ ತಿಳಿಸಿರುವ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಭರ್ತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ಯೋಜನೆಯ ಹೆಚ್ಚಿನ ಮಾಹಿತಿ ಗೋಸ್ಕರ ನಿಮ್ಮ ಹತ್ತಿರದ ಬ್ಯಾಂಕ್ ಗಳಿಗೆ ಹೋಗಿ ಭೇಟಿ ನೀಡಿರಿ ಅಥವಾ ರಾಜ್ಯ ಕೃಷಿ ಆಯುಕ್ತರು ಕ್ರೆಡಿಟ್ ಕಾರ್ಡ್ ಸಾಲದ ಕುರಿತು ರೈತರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಜಿಲ್ಲೆಗಳ ಕೃಷಿಯ ಇಲಾಖೆಯ ಜಂಟಿ ನಿರ್ದೇಶಕರಿಗೆ ಆದೇಶ ನೀಡಿರುವುದರಿಂದ ಸ್ಥಳೀಯ ಕೃಷಿಯ ಅಧಿಕಾರಿಗಳನ್ನು ಭೇಟಿಯನ್ನು ನೀಡಿ ರೈತರುಗಳು ಕ್ರೆಡಿಟ್ ಕಾರ್ಡ್ ಸಾಲದ ಸದುಪಯೋಗವನ್ನು ಪಡೆದುಕೊಳ್ಳಬಹುದು ಆಗಿದೆ.

ಸ್ನೇಹಿತರೆ, ಈ ಒಂದು ಲೇಖನವು ವಿತರಣೆಯಾದ ಕೆಸಿಸಿ ಸಾಲದ ಬಗ್ಗೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವಂತಹ ಬ್ಯಾಂಕುಗಳು ಯಾವುವು ಹಾಗೂ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment