ಗ್ರಹಲಕ್ಷ್ಮಿ ಯೋಜನೆಗೆ ಸೆಡ್ಡು ಹೊಡೆಯಲು ಬಂತು ಕೇಂದ್ರದ ಹೊಸ ಯೋಜನೆ ಗೃಹಲಕ್ಷ್ಮಿ ಹಣ ಸಿಗದವರು ಅರ್ಜಿ ಸಲ್ಲಿಸಿ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಸೆಡ್ಡು ಹೊಡೆಯಲ್ಲ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರದಿಂದ ಬಂದಿರುವಂತಹ ಹೊಸ ಯೋಜನೆಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ಬಂದಿರುವಂತಹ ಹೊಸ ಯೋಜನೆ ಯಾವುದು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು ಹಾಗೂ ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲೆಗಳಾವುವು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆಯು ನಮ್ಮ ರಾಜ್ಯದಲ್ಲಿ ಬಹಳ ಪ್ರಚಾರದಲ್ಲಿದೆ ಈ ಯೋಜನೆಯ ಹಣವನ್ನು ಸದುಪಯೋಗ ಪಡಿಸಿಕೊಂಡು ಫಲಾನುಭವಿ ಮಹಿಳೆಯರು ಚಿನ್ನ ಮತ್ತು ಮೊಬೈಲ್ ಇತ್ಯಾದಿ ವಸ್ತುಗಳನ್ನು ಖರೀದಿಯನ್ನು ಮಾಡುತ್ತಿದ್ದಾರೆ. ಈ ಯೋಜನೆಗೆ ಮಹಿಳೆಯರು ಸಕ್ರಿಯವಾಗಿ ಉತ್ತಮ ಪ್ರಕ್ರಿಯೆಯನ್ನು ನೀಡುತ್ತಾ ಬಂದಿದ್ದಾರೆ.

ಪ್ರತಿ ತಿಂಗಳು ಮನೆಯ ಫಲಾನುಭವಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2 ಸಾವಿರ ಹಣವನ್ನು ನೀಡುವ ಮೂಲಕ ರಾಜ್ಯ ಸರ್ಕಾರವು ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲಿ ಎಂದು ಹಣವನ್ನು ಜಮಾ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿರುವ ಎಲ್ಲ ಮಹಿಳೆಯರು ಈ ಯೋಜನೆಗೆ ನೊಂದಣಿಯನ್ನು ಮಾಡಿ ಮಹಿಳಾ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಹತ್ತನೇ ಕಂತಿನವರೆಗೆ ಹಣವನ್ನು ಜಮಾ ಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್ ಬಂದಿದೆ ಕೇಂದ್ರ ಸರ್ಕಾರದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಇವಾಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಮಹಿಳೆಯರ ಉದ್ಯೋಜನಕ್ಕಾಗಿ ಹಲೋ ರೀತಿಯಾದ ಬೆಂಬಲಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಉದ್ಯೋಗವಂತರಾಗಲಿ ಎಂದು ಸ್ವ ಉದ್ಯಮ ತರಬೇತಿಯನ್ನು ನಡೆಸಲು ಸರ್ಕಾರಗಳು ಸಹಾಯಧನ ಮತ್ತು ಇತ್ಯಾದಿಗಳನ್ನು ಒದಗಿಸುತ್ತಿದೆ. ಮಹಿಳೆಯರು ಮನೆಯಲ್ಲಿ ಸ್ವಂತ ಉದ್ಯಮವನ್ನು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಈ ಒಂದು ಯೋಜನೆಯ ಪ್ರಯೋಜನವನ್ನು ಹಲವಾರು ಮಹಿಳೆಯರು ಪಡೆದುಕೊಂಡಿದ್ದಾರೆ.

ಟೈಲರಿಂಗ್ ನಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಪ್ರತಿಭೆ ಇರುವಂತವರು ಹಲವಾರು ಮಹಿಳೆಯರು ಇದ್ದಾರೆ. ಆದರೆ ಎಲ್ಲ ಮಹಿಳೆಯರಿಗೂ ಹೊಲಿಗೆ ಯಂತ್ರಗಳನ್ನು ಖರೀದಿಸಲು ಆಗುವುದಿಲ್ಲ. ಆದ್ದರಿಂದ ಆಸಕ್ತ ಮತ್ತು ಪ್ರತಿಭೆ ಹೊಂದಿರುವಂತಹ ಅರ್ಹ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಹಿಳೆಯರಿಗೆ ಈ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಹೊಲಿಗೆ ಯಂತ್ರಗಳನ್ನು ಖರೀದಿಸಲು 15,000 ರೂ. ವರೆಗೆ ಸಹಾಯಧನವನ್ನು ಕೇಂದ್ರ ಸರ್ಕಾರವು ನೀಡುತ್ತಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದಂತಹ ಅರ್ಹತೆ.?

• ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ ದೇಶದ ನಾಗರಿಕರಾಗಿರಬೇಕು.

• ಪಿಎಂ ವಿಶ್ವಕರ್ಮ ಯೋಜನೆಯ ಅಡಿ ಟೈಲರ್ ಆಗಿ ಕೆಲಸ ಮಾಡುವಂಥವರು ಅರ್ಜಿಯನ್ನು ಹಾಕಬಹುದು.

• ಅಭ್ಯರ್ಥಿಗಳು 18 ವರ್ಷ ದಾಟಿದವರಾಗಿರಬೇಕು.

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಡತನದ ರೇಖೆಗಿಂತ ಕೆಳಗಿನವರಾಗಿರಬೇಕು.

• ಅಭ್ಯರ್ಥಿಗಳ ಕುಟುಂಬದ ಆದಾಯ 12,000 ರೂ. ಗಿಂತ ಕಡಿಮೆ ಇರಬೇಕಾಗಿರುತ್ತದೆ.

ಈ ಒಂದು ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು ಯಾವುವು.?

• ಆಧಾರ್ ಕಾರ್ಡ್.

• ರೇಷನ್ ಕಾರ್ಡ್.

• ಹೊಲಿಗೆ ತರಬೇತಿ ಪ್ರಮಾಣ ಪತ್ರ.

• ಪಾಸ್ಪೋರ್ಟ್ ಸೈಜ್ ಫೋಟೋ.

• ಜಾತಿ ಪ್ರಮಾಣ ಪತ್ರ.

• ಆದಾಯ ಪ್ರಮಾಣ ಪತ್ರ.

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

https://pmvishwakarma.gov.in

ಸ್ನೇಹಿತರೆ, ಈ ಒಂದು ಲೇಖನವು ಕೇಂದ್ರ ಸರ್ಕಾರದಿಂದ ಬಂದಿರುವಂತಹ ಹೊಸ ಯೋಜನೆ ಯಾವುದು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು ಹಾಗೂ ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲೆಗಳಾವುವು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment