ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ರಾಜ್ಯ ಸರ್ಕಾರದಿಂದ ಮದುವೆಯಾಗುವವರಿಗೆ ಸಿಗುವ ಸಹಾಯಧನದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಸಿಎಂ ಸಿದ್ದರಾಮಯ್ಯ ಮ್ಯಾರೇಜ್ ಸ್ಕೀಮ್ ಅಡಿಯಲ್ಲಿ ಸರ್ಕಾರದಿಂದ ಎಷ್ಟು ಸಹಾಯಧನವನ್ನು ನೀಡುತ್ತಿದೆ ಅದನ್ನು ಪಡೆದುಕೊಳ್ಳಲು ಯಾರು ಅರ್ಹರು ಮತ್ತು ಅದರ ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ಲಿಂಕ್ ಯಾವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಸಿಎಂ ಸಿದ್ದರಾಮಯ್ಯನವರು ವಿವಾಹಕ್ಕೆ ಪ್ರೇರಣೆ ನೀಡಿದ್ದಾರೆ.!
ಮದುವೆ ಎನ್ನುವುದು ಎರಡು ಜೀವಗಳು ಪರಸ್ಪರವಾಗಿ ಬೆಸೆಯುವ ಸಂಬಂಧವಾಗಿದ್ದು ಆದರೆ ಈಗಿನ ದಿನಗಳಲ್ಲಿ ಮದುವೆ ಎನ್ನುವ ಹೆಸರಿನ ಮೇಲೆ ಸಾಲವನ್ನು ಮಾಡುವವರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಯಾವುದೇ ಒಳ್ಳೆಯ ಕೆಲಸದಲ್ಲಿ ಇಲ್ಲದಿದ್ದರೂ ಲಕ್ಷಗಟ್ಟಲೆ ಸಾಲವನ್ನು ಮಾಡಿಕೊಂಡು ಮದುವೆಗಳನ್ನು ಮಾಡಿಕೊಳ್ಳುವವರನ್ನು ಈಗಿನ ದಿನಮಾನಗಳಲ್ಲಿ ನೋಡಬಹುದು ಆಗಿದೆ. ಈ ರೀತಿ ಸಾಲವನ್ನು ಮಾಡಿ ಸಾಲ ಮರುಪಾವತಿಸದೆ ಸಾಲದ ಸುದ್ದಿಯಲ್ಲಿ ಸಿಕ್ಕು ಒದ್ದಾಡುವಂತಾಗಿದೆ. ಆದರೆ ನೀವು ಸಾಲ ಮಾಡದೆ ಸರ್ಕಾರ ನೀಡುತ್ತಿರುವ ಸಹಾಯಧನ ಮತ್ತು ನಿಮ್ಮ ಹತ್ತಿರ ಇರುವ ಹಣವನ್ನು ಕೂಡಿಸಿ ಸರಳವಾಗಿ ಮದುವೆ ಅನ್ನು ಆಗಬಹುದಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿಕೊಳ್ಳಿರಿ.
ಎಷ್ಟು ಹಣವನ್ನು ಸಹಾಯಧನವಾಗಿ ಪಡೆಯಬಹುದು.??
ರಾಜ್ಯ ಸರ್ಕಾರವು ಸರಳವಾಗಿ ವಿವಾಹವನ್ನು ಮಾಡಿಕೊಳ್ಳುವವರಿಗೆ ಅಥವಾ ಮಾಡಿಕೊಂಡಿರುವಂತಹ ಜೋಡಿಗಳಿಗೆ ಉತ್ತೇಜನ ನೀಡುವ ಸಲುವುದಕ್ಕಾಗಿ 50,000 ರೂ. ಹಣವನ್ನು ಪ್ರೋತ್ಸಾಹ ಧನ ವೆಂದು ಸರ್ಕಾರವು ನೀಡುತ್ತಿದೆ. ದಂಪತಿಗಳು ಈ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಮತ್ತುಅರ್ಹತೆ ಏನು ಎನ್ನುವುದನ್ನು ಈ ಕೆಳಗಡೆ ತಿಳಿಸಲಾಗಿದೆ ನೋಡಿರಿ.
ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹತೆ ಏನು.??
• ಮುಖ್ಯವಾಗಿ ಕರ್ನಾಟಕದ ನಿವಾಸಿ ಆಗಿರಬೇಕು.
• ಸರಳವಾಗಿ ವಿವಾಹವನ್ನು ಮಾಡಿಕೊಳ್ಳಲು ಬಯಸುವಂಥವರು ಮತ್ತು ಈಗಾಗಲೇ ವಿವಾಹವಾಗಿ ಒಂದು ವರ್ಷ ಆಗದೇ ಇದ್ದವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
• ಎರಡನೇ ವಿವಾಹವನ್ನು ಆಗುವಂಥವರಿಗೆ ಸರ್ಕಾರದಿಂದ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪಡೆಯಲು ಸಾಧ್ಯವಿಲ್ಲ. ಮೊದಲನೇ ಸರಿ ವಿವಾಹವಾಗುವಂತವರಿಗೆ ಮಾತ್ರ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು.
• ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಈ ಸರ್ಕಾರದಿಂದ ಸಿಗುವ ಸಹಾಯಧನ ನೆರವಾಗಲಿದೆ.
• ಕುಟುಂಬದ ಆದಾಯವು 2 ಲಕ್ಷಕ್ಕಿಂತ ಹೆಚ್ಚು ಇರಬಾರದು.
• ಪರಿಶಿಷ್ಟ ಜಾತಿಗೆ ಸೇರಿದವರು ಮಾತ್ರ ಈ ಯೋಜನೆಯ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬಹುದಾಗಿದೆ.
• ಅಂತರ್ಜಾತಿ ವಿವಾಹಗಳನ್ನು ಮಾಡಿಕೊಳ್ಳುವವರಿಗೆ ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಲು ಸಾಧ್ಯವಿಲ್ಲ.
ಈ ಯೋಜನೆ ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ಮಾಹಿತಿಗಳು.??
• ದಂಪತಿಗಳ ಆಧಾರ್ ಕಾರ್ಡ್ ಬೇಕಾಗುತ್ತದೆ.
• ದಂಪತಿಗಳ ಇಬ್ಬರ ಜಾತಿ ಪ್ರಮಾಣ ಪತ್ರ ಬೇಕು.
• ಮತ್ತು ಇಬ್ಬರ ಆದಾಯ ಪ್ರಮಾಣ ಪತ್ರ ಬೇಕಾಗುವುದು.
• ದಂಪತಿಗಳ ವಿವಾಹವಾದಂತ ಪ್ರಮಾಣ ಪತ್ರದ ಅಗತ್ಯವಿದೆ.
• ವಿವಾಹವನ್ನು ಮಾಡಿಕೊಂಡಿರುವ ಅಂತಹ ಸಂಸ್ಥೆಗಳಿಂದ ಸಾಮೂಹಿಕವಾಗಿ ಮದುವೆಯಾದಂತಹ ವಿವಾಹನೊಂದಣಿ ಪ್ರಮಾಣ ಪತ್ರದ ಅಗತ್ಯವೂ ಕೂಡ ಇದೆ.
• ದಂಪತಿಗಳಿಗ ಇಬ್ಬರ ಜಂಟಿ ಖಾತೆಯ ಪಾಸ್ ಬುಕ್ ಬೇಕು.
• ಮತ್ತು ಗಂಡ ಹೆಂಡತಿಯರ ಇಬ್ಬರ ಭಾವಚಿತ್ರ ಬೇಕಾಗುತ್ತದೆ.
ಈ ಯೋಜನೆಗೆ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು.??
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತವಾದ ಈ https://swdservices.karnataka.gov.in/ ವೆಬ್ಸೈಟ್ಗೆ ಭೇಟಿಯನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತ್ತು ನೀವು ನೇರವಾಗಿ ಬೇಕಾಗಿರುವಂತಹ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಸಮಾಜ ಕಲ್ಯಾಣ ಇಲಾಖೆಗೆ ಭೇಟಿಯನ್ನು ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಯ ನಂತರ 3 ರಿಂದ 6 ತಿಂಗಳೊಳಗೆ ಈ ಯೋಜನೆ 50,000 ರೂ. ಪ್ರೋತ್ಸಾಹ ಧನವನ್ನು ದಂಪತಿಗಳ ಜಂಟಿ ಖಾತೆಗೆ ಜಮಾ ಮಾಡಲಾಗುವುದು.
ಸ್ನೇಹಿತರೆ, ಈ ಒಂದು ಲೇಖನವು ಸಿಎಂ ಸಿದ್ದರಾಮಯ್ಯ ಮ್ಯಾರೇಜ್ ಸ್ಕೀಮ್ ಅಡಿಯಲ್ಲಿ ಸರ್ಕಾರದಿಂದ ಎಷ್ಟು ಸಹಾಯಧನವನ್ನು ನೀಡುತ್ತಿದೆ ಅದನ್ನು ಪಡೆದುಕೊಳ್ಳಲು ಯಾರು ಅರ್ಹರು ಮತ್ತು ಅದರ ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ಲಿಂಕ್ ಯಾವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.