ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಕೇಂದ್ರ ಸರ್ಕಾರದಿಂದ ಪಿಂಚಣಿ ದಾರರಿಗೆ ಇನ್ಮುಂದೆ ಮಾಸಿಕ ವೇತನವನ್ನು ಎಷ್ಟು ನೀಡಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಪಿಂಚಣಿಯ ಮುಖ್ಯ ಉದ್ದೇಶ ಏನು ಈ ಪಿಂಚಣಿ ಮಾಸಿಕ ಹಣವು ಎಷ್ಟು ಲಕ್ಷ ಜನರಿಗೆ ಸಿಗಲಿದೆ ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಪ್ರತಿಯೊಬ್ಬರ ಜೀವನದಲ್ಲಿಯೂ ನಿವೃತ್ತಿ ಯೋಜನೆ ಎನ್ನುವುದು ನಿರ್ನಾಯಕವಾದ ವಿಷಯವಾಗಿದೆ. ಹೆಚ್ಚಿಗೆ ಆಗುತ್ತಿರುವ ಹಣದ ಮಟ್ಟ ಹಾಗೂ ಹಿರಿಯ ನಾಗರಿಕರುಗಳು ಸಾಮಾಜಿಕ ಕ್ರಮಗಳನ್ನು ಅರಿತು ನೀವು ನಿವೃತ್ತಿಯನ್ನು ಹೊಂದುವ ಮೊದಲೇ ಯೋಚಿಸಲು ಆರಂಭ ಮಾಡುವುದು ಮುಖ್ಯ ಅಂಶವಾಗಿದೆ. ಈಗ ಎಲ್ಲರೂ ತಮ್ಮ ನಿವೃತ್ತಿ ಹೊಂದಿರುವಂತಹ ಜೀವನಕ್ಕೆ ತುಂಬಾ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಹಲವಾರು ನಿವೃತ್ತಿ ಹೊಂದಿರುವಂತಹ ಜನರು ತಮ್ಮ ನಿವೃತ್ತಿ ಜೀವನವು ಸುಖಕರವಾಗಿರಬೇಕೆಂದು ಮುಂದಾಲೋಚನೆಯಿಂದ ಅವರ ಉದ್ಯೋಗದ ಸಮಯದಲ್ಲಿಯೇ ಹಲವಾರು ಯೋಜನೆಗಳಿಗೆ ಇನ್ವೆಸ್ಟ್ ಅಥವಾ ಹೂಡಿಕೆಯನ್ನು ಮಾಡಿಟ್ಟಿರುತ್ತಾರೆ. ಆದ ಕಾರಣದಿಂದ ಅವರು ಹೂಡಿಕೆ ಮಾಡಿರುವ ಹಣದಿಂದ ತಮ್ಮ ನಿವೃತ್ತಿ ಸಮಯದಲ್ಲಿ ಆ ಹಣವನ್ನು ಸದುಪಯೋಗ ಪಡೆದುಕೊಳ್ಳುತ್ತಾರೆ. ಹಾಗೆ ಇನ್ನೂ ಒಂದಿಷ್ಟು ಜನಕ್ಕೆ ತಮ್ಮ ಕೆಲಸದ ಪೆನ್ಷನ್ ಸಿಗುತ್ತದೆ.
ತಮಗೆ ಸಿಗುವ ಅಲ್ಪಮಟ್ಟದ ಪೆನ್ಷನ್ ಹಣವನ್ನು ಪಡೆದುಕೊಂಡು ತಮ್ಮ ಜೀವನವನ್ನು ನಡೆಸಿಕೊಳ್ಳುತ್ತಿದ್ದಾರೆ. ಹಾಗೆಯೇ ಈಗ ಪಿಂಚಣಿ ದಾರರಿಗೆ ಕೇಂದ್ರ ಸರ್ಕಾರದಿಂದ ಕನಿಷ್ಠ 7,500 ರೂ. ಹಣವು ಸಿಗುತ್ತಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
Government Pension: ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಇನ್ಮುಂದೆ ಮಾಸಿಕ 7,500 ರೂ. ಪೆನ್ಷನ್ ಲಭ್ಯ ಇಲ್ಲಿದೆ ಪೂರ್ತಿ ವಿವರ.!
ಪಿಂಚಣಿಯ ಮುಖ್ಯ ಉದ್ದೇಶವೇನು.??
ಬದುಕಲು ಕಷ್ಟವಾಗುತ್ತಿರುವ ವೃದ್ಧ ದಂಪತಿಗಳಿಗೆ ಈ ಪಿಂಚಣಿಯ ಹಣವು ನೆರವಾಗಲಿ ಎಂದು ಮತ್ತು ಪಿಂಚಣಿ ದಾರರ ಬಾಳ ಸಂಗಾತಿಗೆ ಹುಟ್ಟಿಬತ್ತೆ ಹಾಗೂ ವೈಯಕ್ತಿಕ ಆರೋಗ್ಯದ ಸೌಲಭ್ಯಗಳು ದೊರಕಲಿ ಎಂದು ಕೇಂದ್ರ ಸರ್ಕಾರವು ಈ ಪಿಂಚಣಿಯ ಹಣವನ್ನು ನೀಡಲಾಗುತ್ತಿದೆ.
ಹೆಚ್ಚು ಕಡಿಮೆ ಮಾಸಿಕ 1,450 ರೂ. ಅನ್ನು ಪ್ರಸ್ತುತ ಪಿಂಚಣಿ ದಾರರಿಗೆ ನೀಡುತ್ತಿದೆ. ಮಾಸಿಕ ರೂ.1,000 ಕ್ಕಿಂತ ಕಡಿಮೆ 36 ಲಕ್ಷ ಪಿಂಚಣಿದಾರರಿಗೆ ಸಿಗುತ್ತಿದ್ದು ಈ ಪಿಂಚಣಿಯನ್ನು 7,500 ಕ್ಕೆ ಹೆಚ್ಚಳ ಮಾಡಿದರೆ ಭದ್ರತೆ ಜೀವನ ನಡೆಸಲು ಅನುಕೂಲವಾಗುತ್ತದೆ ಎನ್ನುವುದು ಇದರ ಮುಖ್ಯ ಉದ್ದೇಶವಾಗಿದೆ.
78 ಲಕ್ಷ ಪಿಂಚಣಿ ದಾರರಿಗೆ ಮಾಸಿಕ 7,500 ರೂ. ಹಣ.??
ಸಹಕಾರಿ, ಖಾಸಗಿ, ಕೈಗಾರಿಕೆ, ಸಾರ್ವಜನಿಕ ಮುಂತಾದ ವಲಯದಲ್ಲಿರುವ 78 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ಕನಿಷ್ಠ 7,500 ರೂ. ಹಣವನ್ನು ನೀಡುವುದರ ಬಗ್ಗೆ ಆಲೋಚನೆ ನಡೆಸಿ ಈ ಪಿಂಚಣಿ ಹಣದ ಬಗ್ಗೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಹಾಗೂ ಕಳೆದ ವಾರ ನವ ದೆಹಲಿಯಲ್ಲಿ ಪಿಂಚಣಿ ಹೆಚ್ಚಳಕ್ಕೆ ಹೋರಾಟವನ್ನು ಕೈಗೊಳ್ಳಲಾಗಿತ್ತು ಕೇಂದ್ರ ಕಾರ್ಮಿಕ ಸಮಿತಿಯ ಪ್ರತಿನಿಧಿಗಳು ಮತ್ತು ಉದ್ಯೋಗ ಸಚಿವರಾಗಿರುವಂತಹ ಮನ್ ಸುಖ್ ಮಾಂಡವಿಯಾ ಅವರ ಜೊತೆಗೆ ಚರ್ಚೆ ನಡೆಸಿದ್ದು. ಸಚಿವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಬೇಕಿರುವಂತಹ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಾಸಿಕ ಪಿಂಚಣಿ ಹೆಚ್ಚಳಕ್ಕಾಗಿ ಪ್ರತಿಭಟನೆ.!!
ರಾಷ್ಟ್ರೀಯ ರಾಜಧಾನಿಯ ಜಂತರ್ ಮಂತರ್ ನಲ್ಲಿ ಇಪಿಎಸ್ 95 ವ್ಯಾಪ್ತಿಗೆ ಒಳಪಡುವಂತಹ ಪಿಂಚಣಿದಾರರು ಮತ್ತು ಹಲವು ತರಹದ ಉದ್ಯೋಗಿಗಳು ಕನಿಷ್ಠ ತಿಂಗಳಿಗೆ ಮಾಸಿಕ 7,500 ರೂ. ನಾವು ಪಿಂಚಣಿ ದಾರಿಗೆ ಸಿಗಬೇಕೆಂದು ಇಪಿಎಸ್ 95 ರಾಷ್ಟ್ರೀಯ ಆಂದೋಲನ ಸಮಿತಿಯು ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಲವು ವರ್ಷಗಳಿಂದ ಹೆಚ್ಚು ಕಡಿಮೆ 7.8 ಮಿಲಿಯನ್ ಪಿಂಚಣಿದಾರರು ಪಿಂಚಣಿಯನ್ನು ಹೆಚ್ಚಳ ಮಾಡಿ ಎಂದು ಇಪಿಎಫ್ಒ ಬಾಗಿಲ ಬಳಿ ಹೋದರು ಸರ್ಕಾರವು ಅವರ ಬೇಡಿಕೆಗಳನ್ನು ಪರಿಹಾರ ಮಾಡಲು ಮುಂದಾಗಿಲ್ಲ ಎಂದು ಇಪಿಎಸ್ 95 ರಾಷ್ಟ್ರೀಯ ಆಂದೋಲನ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.
ಸ್ನೇಹಿತರೆ, ಈ ಒಂದು ಲೇಖನವು ಪಿಂಚಣಿಯ ಮುಖ್ಯ ಉದ್ದೇಶ ಏನು ಈ ಪಿಂಚಣಿ ಮಾಸಿಕ ಹಣವು ಎಷ್ಟು ಲಕ್ಷ ಜನರಿಗೆ ಸಿಗಲಿದೆ ಮಾಸಿಕ ಪಿಂಚಣಿ ಹೆಚ್ಚಳಕ್ಕಾಗಿ ಇಪಿಎಸ್ 95 ರಾಷ್ಟ್ರೀಯ ಆಂದೋಲನ ಸಮಿತಿಯು ಏನು ಪ್ರತಿಭಟನೆಯನ್ನು ಕೈಗೊಂಡಿದೆ ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.