ನಿಮ್ಮ ಮೊಬೈಲ್ ನಲ್ಲಿಯೇ ಜಮೀನು, ಪ್ಲಾಟ್, ಮನೆ ಜಾಗವನ್ನು ಅಳತೆ ಮಾಡುವ ವಿಧಾನ ಇಲ್ಲಿದೆ ನೋಡಿ.!

Measure Your Land In Mobile: ಎಲ್ಲ ಸ್ನೇಹಿತರಿಗೂ ನಮಸ್ಕಾರ, ಕೆಲವು ಸಲ ನಿಮ್ಮ ಪಹಣಿಯಲ್ಲಿರುವಂತೆ ನಿಖರವಾದ ಜಮೀನಿನ ಅಳತೆ ಇರುವುದಿಲ್ಲ. ಹಲವಾರು ರೈತರ ಜಮೀನು ಹೆಚ್ಚು ಕಡಿಮೆ ಇರುತ್ತದೆ. ಆದ್ದರಿಂದ ನಿಮ್ಮ ಪಹಣಿಯಲ್ಲಿರುವಂತಹ ಜಮೀನಿನ ಅಳತೆಯು ಸರಿಯಾಗಿದೆಯೋ ಇಲ್ಲವೋ ಹೆಚ್ಚು ಕಡಿಮೆ ಇದೆಯಾ ಎನ್ನುವುದನ್ನು ಮತ್ತು ತಮ್ಮ ಬಳಿ ಇರುವಂತಹ ಎಲ್ಲಾ ಸರ್ವೆ ನಂಬರಗಳ ಅಳತೆಯನ್ನು ಹೇಗೆ ಮಾಡುವುದು ಅದು ನಿಮ್ಮ ಮೊಬೈಲ್ ನಲ್ಲಿ ಹೇಗೆ ಅಳತೆ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಒಂದು ಲೇಖನದಲ್ಲಿ ತಿಳಿಸಿದ್ದೇವೆ ಆದ ಕಾರಣದಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. 

ತಮ್ಮ ಜಮೀನು ನಿಖರವಾಗಿ ಎಷ್ಟು ಇದೆ ಎಂದು ರೈತರಿಗೆ ಗುರುತಿರುವುದಿಲ್ಲ. ಅಂತಹ ರೈತರುಗಳು ಯಾರ ಸಹಾಯವನ್ನು ಕೋರದೆ ಯಾರ ಬಲಳಿಯೂ ಹೋಗುವ ಅಗತ್ಯವಿಲ್ಲ. ರೈತರು ತಮ್ಮ ಹತ್ತಿರ ಇರುವಂತಹ ಸ್ಮಾರ್ಟ್ ಫೋನ್ ನಲ್ಲಿಯೇ ತಮ್ಮ ಜಮೀನಿನ ನಿಖರವಾದ ಅಳತೆಯನ್ನು ಮಾಡಿಕೊಳ್ಳಬಹುದು ಆಗಿದೆ. ಅದನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿ ಅಳತೆ ಮಾಡಿಕೊಳ್ಳುವುದು ಎನ್ನುವುದನ್ನು ಈ ಕೆಳಗಡೆ ತಿಳಿಸಲಾಗಿದೆ.

Measure Your Land In Mobile: ಮೊಬೈಲ್ ನಲ್ಲಿ ರೈತರು ತಮ್ಮ ಜಮೀನಿನ ಅಳತೆಯನ್ನು ಮಾಡಿಕೊಳ್ಳುವುದು ಹೇಗೆ.?

 

 

• ನೀವು ಮೊದಲು ಈ ಕೆಳಗಡೆ ನೀಡಿರುವಂತಹ ಲೆಂತ್ ಮೇಲೆ ಕ್ಲಿಕ್ ಮಾಡಿಕೊಂಡು Dishaank ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಅನ್ನು ಮಾಡಿಕೊಳ್ಳಿ.

• https://play.google.com/store/apps/details?id=com.ksrsac.sslr&hl=en_IN

• ಇನ್ಸ್ಟಾಲ್ ಮಾಡಿಕೊಂಡ ನಂತರ ಕನ್ನಡ ಭಾಷೆಯನ್ನು ಮೊದಲು ನೀವು ಆರಿಸಿಕೊಳ್ಳಿ.

• ಮುಂದೆ ನಿಮ್ಮ ಹೆಸರು ಹಾಗೂ ಮೇಲ್ ಐಡಿಯನ್ನು ಹಾಕಿರಿ.

• ಅದಾದ ನಂತರ ನಿಮ್ಮ ಮೊಬೈಲ್ ನಂಬರನ್ನು ಹಾಕಿ OTP ಬರುತ್ತೆ ಅದನ್ನು ಭರ್ತಿ ಮಾಡಿ.

• ಮುಂದೆ ನೀವು ಯಾವ ನಿಂತಿರುವ ಸರ್ವೇ ನಂಬರಿನ ಪಾಯಿಂಟ್ ಕಾಣುತ್ತದೆ.

• ಹಾಗೆ ನೀವು ನಿಮ್ಮ ಮೊಬೈಲ್ ನಲ್ಲಿ ಜೂಮ್ ಹಾಕಿ ನೋಡಿದರೆ ನೀನು ಎಲ್ಲಿ ನಿಂತಿರುತ್ತೀರಿ ಎನ್ನುವುದನ್ನು ನೋಡಬಹುದು.

• ಮುಂದೆ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

• ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ನಿಮಗೆ ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ತಾಲೂಕು ಮತ್ತು ಜಿಲ್ಲೆಯನ್ನು ನೋಡಬಹುದಾಗಿದೆ.

• ಮುಂದೆ ಅಲ್ಲಿರುವ ಹೆಚ್ಚಿನ ವಿವರಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ.

• ನಂತರ ಸರ್ವ ಸಂಖ್ಯೆಯಲ್ಲಿ ಸ್ಟಾರ್ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿದ ನಂತರ ಕಿಸ್ಸಾ ನಂಬರ್ ನಿಮಗೆ ಗೊತ್ತಿದ್ದರೆ ಕಿಸ್ಸಾ ನಂಬರನ್ನು ಸೆಲೆಕ್ಟ್ ಮಾಡಿಕೊಳ್ಳಿರಿ.

• ಅದಾದ ಮೇಲೆ ಮಾಲೀಕರು ಎನ್ನುವುದನ್ನು ಒತ್ತಿರಿ ಹಾಗೆ ಮಾಡಿದ ತಕ್ಷಣ ನೀವು ನಿಂತುಕೊಂಡಿರುವ ಜಮೀನಿನ ಮಾಲೀಕರು ಯಾರು ಆಚೆ ನೀನು ಎಷ್ಟು ಎಕರೆಯನ್ನು ಹೊಂದಿದೆ ಎನ್ನುವುದನ್ನು ನೋಡಿಕೊಳ್ಳಬಹುದಾಗಿದೆ.

 

ಜಮೀನು ಅಳತೆ ಮಾಡುವುದು ಹೇಗೆ.??

ಸ್ನೇಹಿತರೆ, ನೀವು ನಿಮ್ಮ ಜಮೀನನ್ನು ಅಳತೆ ಮಾಡಿಕೊಳ್ಳಲು ಅಲ್ಲಿರುವಂತಹ ಮಾಪನ ಸಾಧನಗಳು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ ಸೆಲೆಕ್ಟ್ ಮಾಡಿದ ನಂತರ ಮೂರು ಆಯ್ಕೆಗಳನ್ನು ನೋಡಬಹುದು ಅದರಲ್ಲಿ ಲೈನ್ಸ್ ಸೆಲೆಕ್ಟ್ ಮಾಡಿಕೊಳ್ಳಿ ಅದಾದ ನಂತರ ನೀವು ನಿಂತುಕೊಂಡಿರುವ ಜಮೀನು 4 ಭಾಗಗಳಾಗಿ ವಿಂಗಡಣೆಯಾಗುತ್ತದೆ.

ಅದರಲ್ಲಿ ನೀವು ಯಾವುದಾದರೂ ಒಂದು ಮೂಲೆಯಲ್ಲಿ ಕ್ಲಿಕ್ ಮಾಡಿಕೊಳ್ಳಿ ಅದೇ ರೀತಿಯಾಗಿ ಮತ್ತೊಂದು ಮೂಲೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು ಹಾಗೆ 4 ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಿರಿ. ನೀವು ಒಂದೊಂದು ಮೂಲೆಯನ್ನು ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಎಷ್ಟು ಉದ್ದ ಇದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಮೀಟರ್, ಪೀಟರ್ ಮತ್ತು ಕಿಲೋಮಿಟರ್ ಎನ್ನುವ ಮೂರು ಆಯ್ಕೆಗಳು ಇರುತ್ತವೆ ಆ ಮೂರು ಆಯ್ಕೆಗಳಲ್ಲಿ ನೀವು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಅಳತೆಯನ್ನು ಮಾಡಿಕೊಳ್ಳಬಹುದಾಗಿದೆ.

ಸ್ನೇಹಿತರೆ, ಈ ಒಂದು ಲೇಖನವು ರೈತರುಗಳು ತಮ್ಮ ಮೊಬೈಲ್ ನಲ್ಲಿ ಜಮೀನು ಸೈಟ್ ಮತ್ತು ಮನೆ ಜಾಗಗಳ ಅಳತೆಗಳನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment