ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗುವ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತಿಲ್ಲವೇ.! ಮೆಸೇಜ್ ಬರಲು ಹೀಗೆ ಮಾಡಿ.!

Pm Kisan mobile number update: ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಮೂಲಕ ಕರ್ನಾಟಕದ ಸಮಸ್ತ ರೈತರುಗಳಿಗೆ ತಿಳಿಸುವುದೇನೆಂದರೆ ನಮ್ಮ ದೇಶದ ಪ್ರಧಾನ ಮಂತ್ರಿ ಆಗಿರುವಂತಹ ನರೇಂದ್ರ ಮೋದಿಯವರ ಕನಸಿನ ಯೋಜನೆ ಎನ್ನಬಹುದಾದಂತಹ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತರುಗಳಿಗೆ 17ನೇ ಕಂತಿನವರೆಗೆ ಈ ಯೋಜನೆಯ ಹಣವು ಖಾತೆಗೆ ಜಮಾ ಆಗಿದೆ. ಇನ್ನು ಅರ್ಹ ಫಲಾನುಭವಿ ರೈತರುಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 

ಹೌದು ಸ್ನೇಹಿತರೆ, ಈಗ ಬಿಡುಗಡೆ ಆಗಿರುವಂತಹ ಪಟ್ಟಿಯಲ್ಲಿ ಹೆಸರಿರುವ ಫಲಾನುಭವಿ ರೈತರುಗಳಿಗೆ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣವು ಜಮಾ ಆಗುತ್ತದೆ. ಬಿಡುಗಡೆ ಆಗಿರುವಂತಹ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಅಂತಹ ರೈತರಗಳು ಮುಂದಿನ ಯಾವ ಕಂತುಗಳ ಹಣವನ್ನು ಪಡೆದುಕೊಳ್ಳಲು ಆಗುವುದಿಲ್ಲ. ಇದರ ಕುರಿತಾದ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಸಂಪೂರ್ಣವಾಗಿ ಓದಿರಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.!

ಇಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತರುಗಳಿಗೆ ಈಗಾಗಲೇ ಬಿಡುಗಡೆ ಮಾಡಿರುವಂತಹ 17 ಕಂತಿನ ಒಟ್ಟು 34,000 ರೂ. ಹಣವನ್ನು ಅರ್ಹ ರೈತರುಗಳಿಗೆ ಜಮಾ ಮಾಡಲಾಗಿದೆ. ರೈತರುಗಳ ಆರ್ಥಿಕ ಸ್ಥಿತಿಯಿಂದ ನೆರವಾಗಲಿ ಎನ್ನುವ ದೃಷ್ಟಿಕೋನದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಹಲವಾರು ಆರ್ಥಿಕವಾಗಿ ದುರ್ಬಲ ಹೊಂದಿರುವಂತಹ ರೈತರುಗಳಿಗೆ ಒಳ್ಳೆಯ ವರದಾನವಾಗಿದೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿ ರೈತರುಗಳ ಖಾತೆಗೆ ರೂ.2000 ಹಣವು ಜಮಾ ಆಗುತ್ತದೆ. ಪ್ರತಿ ವರ್ಷದಲ್ಲಿ ಮೂರು ಕಂತುಗಳನ್ನಾಗಿ ಮಾಡಿ ಕೇಂದ್ರ ಸರ್ಕಾರವು ರೈತರ ಖಾತೆಗೆ ಒಟ್ಟು 6,000 ಹಣವನ್ನು ಜಮಾ ಮಾಡತ್ತಿದೆ.

ಈಗಾಗಲೇ 17ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣ ಫಲಾನುಭವಿ ರೈತರುಗಳ ಖಾತೆಗೆ ಜಮಾ ಆಗಿದೆ. ಆದರೆ ಇನ್ನೂ ಹಲವರ ಖಾತೆಗೆ ಈ ಯೋಜನೆಯ 17ನೇ ಕಂತಿನ ಹಣವು ಜಮಾ ಆಗಿಲ್ಲ ಎನ್ನುವ ದೂರು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇನ್ನು ಹಲವು ರೈತರಿಗೆ ಹಣ ಜಮಾ ಆಗಿದ್ದರೂ ಕೂಡ ತಮ್ಮ ಮೊಬೈಲ್ ನಂಬರ್ ಗೆ ಮೆಸೇಜ್ ಬಾರದಿದ್ದರಿಂದ ಇನ್ನೂ ತಮ್ಮ ಖಾತೆಗೆ 17ನೇ ಕ್ರಾಂತಿನ ಹಣವು ಜಮಾ ಆಗಿದೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿರಬಹುದು. ಅಂತಹ ರೈತರಿಗೆ ಮೆಸೇಜ್ ಬಾರದಿದ್ದಕ್ಕೆ ಕಾರಣವೇನೆಂದರೆ ನಿಮ್ಮ ಮೊಬೈಲ್ ನಂಬರ್ ಈ ಪಿಎಂ ಕಿಸಾನ್ ಯೋಜನೆಗೆ ಅಪ್ಡೇಟ್ ಮಾಡದಿರುವುದು ಮುಖ್ಯ ಕಾರಣವಾಗಿದೆ.

ಆದ್ದರಿಂದ ಈ ಒಂದು ಸಮಸ್ಯೆಯನ್ನು ಪರಿಹಾರ ಮಾಡಲು ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ಪೋರ್ಟಲ್ ನಲ್ಲಿ ನಿಮ್ಮ ಒಂದು ಮೊಬೈಲ್ ನಂಬರನ್ನು ಅಪ್ ಡೇಟ್ ಮಾಡಿಕೊಳುವ ಹಾಗೆ ಹೊಸದಾದ ಫ್ಯೂಚರ್ ಅಥವಾ ಆಯ್ಕೆಯನ್ನು ನೀಡಲಾಗಿದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ ಅಪ್ಡೇಟ್ ಅನ್ನು ಸರಳವಾಗಿ ಮಾಡಿಕೊಂಡು ಮುಂದೆ ಜಮಾ ಆಗುವ ಕಂತಿನ ಹಣದ ಮೆಸೇಜನ್ನು ನಿಮ್ಮ ಮೊಬೈಲ್ ಗೆ ಬರುವಂತೆ ಮಾಡಿಕೊಳ್ಳಬಹುದಾಗಿದೆ.

ಪಿಎಂ ಕಿಸಾನ್ ಯೋಜನೆಗೆ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡುವುದು ಹೇಗೆ.??

  • ನೀವು ಮೊದಲು ಈ ಕೆಳಗೆ ನೀಡಿರುವ ಅಂತಹ ಅಧಿಕೃತವಾದ ಕೇಂದ್ರ ಸರ್ಕಾರದ ವೆಬ್ಸೈಟ್ ಗೆ ಹೋಗಿ.
  • https://pmkisan.gov.in/MobileUpdation_Pub.aspx
  • ನಂತರ ನೀವು ಅಲ್ಲಿ ಕೆಳಗೆ ಸ್ಕ್ರೋಲ್ ಮಾಡುತ್ತಿದ್ದಂತೆ ಅಪ್ಡೇಟ್ ಮೊಬೈಲ್ ನಂಬರ್ ಅನ್ನು ಆಯ್ಕೆಯನ್ನು ನೋಡಬಹುದಾಗಿದೆ. ಅಲ್ಲಿ ನೀವು ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಅಥವಾ ಆಧಾರ್ ಕಾರ್ಡ್ ನಂಬರನ್ನು ಹಾಕಿಕೊಂಡು ಅದರ ಕೆಳಗಡೆ ಇರುವಂತಹ ಕ್ಯಾಪ್ಚ ತುಂಬಿ ಸರ್ಚ್ ಅನ್ನುವುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಅದಾದ ನಂತರ ನಿಮ್ಮ ಆಧಾರ್ ಕಾರ್ಡ್ ಯಾವ ನಂಬರ್ ಗೆ ಲಿಂಕ್ ಇರುತ್ತದೆಯೋ ಆ ನಂಬರ್ಗೆ OTP ಬರುತ್ತದೆ ಹಾಕಿಕೊಳ್ಳಿ ಹಾಗೇನೆ ಕೆಳಗೆ ನಿಮ್ಮ ಅನುಮತಿಯನ್ನು ಕೇಳಲಾಗುತ್ತದೆ ನೀವು ರೈಟ್ ಮಾರ್ಕ್ ಮೇಲೆ ಒತ್ತಿರಿ.
  • ಮುಂದೆ ಅಲ್ಲಿ ಹೊಸ ಪುಟ್ಟ ಒಂದು ತೆರೆದುಕೊಳ್ಳುತ್ತದೆ ನಂತರ ನೀವು ಅಲ್ಲಿ ಅಪ್ಡೇಟ್ ಮಾಡಿಕೊಳ್ಳಬೇಕು ಎನ್ನುವ ಮೊಬೈಲ್ ನಂಬರ್ ಅನ್ನು ಹಾಕಿ ಅಪ್ಡೇಟ್ ಮೊಬೈಲ್ ನಂಬರ್ ಎನ್ನುವ ಆಯ್ಕೆಯನ್ನು ಆರಿಸಿದ ನಂತರ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಆಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಂಬರನ್ನು ಅಪ್ಡೇಟ್ ಮಾಡಿದ ಮೇಲೆ ಅಪ್ಡೇಟ್ ಮಾಡಿರುವಂತಹ ನಂಬರಿಗೆ ಮುಂದೆ ಜಮ ಆಗುವ ಮೆಸೇಜ್ ಬರುತ್ತದೆ. ಹೀಗೆ ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಲ್ಲಿ ಪಿ ಎಮ್ ಕಿಸಾನ್ ಯೋಜನೆಗೆ ಮೊಬೈಲ್ ನಂಬರನ್ನು ಅಪ್ಡೇಟ್ ಮಾಡಿಕೊಳ್ಳಬಹುದು ಆಗಿದೆ.

ಸ್ನೇಹಿತರೆ, ಈ ಒಂದು ಲೇಖನವು ನೀವು ನಿಮ್ಮ ಮೊಬೈಲ್ ನಲ್ಲಿಯೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಜಮಾ ಆಗುವ ಮೆಸೇಜನ್ನು ಬರುವಂತೆ ಮಾಡಿಕೊಳ್ಳಲು ಈ ಯೋಜನೆಗೆ ಮೊಬೈಲ್ ನಂಬರನ್ನು ಅಪ್ಡೇಟ್ ಮಾಡಿಕೊಳ್ಳುವುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment