ITBP Recruitment 2024: ITBP ಕಾನ್ಸ್ಟೇಬಲ್ ನೇಮಕಾತಿ! 819 ಹುದ್ದೆಗಳಿಗೆ ಅಧಿಸೂಚನೆ ಹೊರಬಿದ್ದಿದೆ! ಆನ್ಲೈನಲ್ಲಿ ಅರ್ಜಿ ಸಲ್ಲಿಸಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ITBP ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ 819 ಅಡುಗೆ ಸೇವೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಲಾಗಿರುವ ITBP ಹುದ್ದೆಗಳ ಅಧಿಸೂಚನೆಯನ್ನು ಸರ್ಕಾರಿ ಉದ್ಯೋಗ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದಾಗಿದೆ.
ಅದಕ್ಕಿಂತ ಮುಂಚೆ ಈ ITBP ಕಾನ್ಸ್ಟೇಬಲ್ ಅಡುಗೆ ಸೇವೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹೇಗೆ, ಬೇಕಿರುವ ಅಗತ್ಯ ದಾಖಲೆಗಳು ಯಾವುವು ಮತ್ತು ಆನ್ಲೈನ್ ನಲ್ಲಿ ಅರ್ಜಿ ಹೇಗೆ ಸಲ್ಲಿಸುವುದು ಎನ್ನುವುದರ ಪೂರ್ತಿಯಾದ ಮಾಹಿತಿಯನ್ನು ತಮಗೆಲ್ಲರಿಗೂ ಈ ಒಂದು ಲೇಖನದ ಮೂಲಕ ತಿಳಿಸಲಾಗಿದೆ. ಆದ್ದರಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಕೊನೆಯವರೆಗೂ ತಪ್ಪದೆ ಓದಿರಿ.
ಶೈಕ್ಷಣಿಕ ಅರ್ಹತೆ:
ITBP ಕಾನ್ಸ್ಟೇಬಲ್ ಅಡುಗೆ ಸೇವೆ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಯು ವಿದ್ಯಾಲಯದಿಂದಾಗಲಿ ಅಥವಾ ಮಂಡಳಿಯಿಂದಾಗಲಿ 10ನೇ ತರಗತಿಯಲ್ಲಿ ಮಾನ್ಯತೆ ಪಡೆದಿರಬೇಕಾಗಿರುತ್ತದೆ. ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಆಹಾರ ಉತ್ಪಾದನೆಯ ಅಥವಾ ಅಡುಗೆ ಮನೆಯಲ್ಲಿ NSQF 1ನೇ ಹಂತದ ಕೋರ್ಸ್ ಅನ್ನು ಮುಗಿಸಿರಬೇಕು. ಆಗ ಮಾತ್ರ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯಸ್ಸಿನ ಮಿತಿ ಮತ್ತು ಅರ್ಜಿ ಶುಲ್ಕ:
ಈ ITBP ಅಡಿಗೆ ಸೇವೆ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಹಾಕಲು 18 ರಿಂದ 25 ವರ್ಷದ ಒಳಗೆ ಇರಬೇಕಾಗಿರುತ್ತದೆ. ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕುವ ಅಭ್ಯರ್ಥಿಗಳು ಸಾಮಾನ್ಯ ಯುವಾರ್ ಮತ್ತು ಒಬಿಸಿ ವರ್ಗದವರು ರೂ 100 ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ವೇತನ:
ಅರ್ಹ ಅಭ್ಯರ್ಥಿಗಳನ್ನು ಈ ITBP ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಲಿಖಿತ ಪರೀಕ್ಷೆ, ದೈಹಿಕ ದಕ್ಷತೆಯ ಪರೀಕ್ಷೆ ಹಾಗೂ ದೈಹಿಕ ಗುಣಮಟ್ಟದ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ITBP ಪೊಲೀಸ್ ಕಾನ್ಸ್ಟೇಬಲ್ ಅಡಿಗೆ ಸೇವೆ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ರೂ 21,700 ಇಂದ 69,100 ರೂ ವರೆಗೆ ಪೇ ಸ್ಕೇಲ್ ನ 3ರ ಹಂತದ ಪ್ರಕಾರ ಮಾಸಿಕ ವೇತನವನ್ನು ಕೊಡಲಾಗುವುದು.
ಅಗತ್ಯ ದಾಖಲೆಗಳು?
- ಕಾಯಂ ನಿವಾಸ ಪ್ರಮಾಣ ಪತ್ರ
- ಡಿಸ್ಚಾರ್ಜ್ ಪ್ರಮಾಣ ಪತ್ರ (ಮಾಜಿ ಸೈನಿಕರಿಗೆ)
- NCC ಪ್ರಮಾಣ ಪತ್ರ (ಅನ್ವಯಿಸಿದವರಿಗೆ ಮಾತ್ರ)
- ನಿರಕ್ಷೇಪನ ಪ್ರಮಾಣ ಪತ್ರ (ಸರ್ಕಾರಿ ಅಥವಾ ಆರೇ ಸರ್ಕಾರಿ ಕೆಲಸದಲ್ಲಿ ಇರುವವರಿಗೆ)
- ಇತ್ತೀಚಿನ 4 ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸುವುದು?
ಮೊದಲು ಈ ಕೆಳಗಡೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಹೋಗಿ ನಾವು ಈ ಮೇಲೆ ತಿಳಿಸಲಾಗಿರು ಅಗತ್ಯ ದಾಖಲೆಗಳ ವಿವರವನ್ನು ಭರ್ತಿ ಮಾಡಿ. 2 ಸಪ್ಟಂಬರ್ 2024 ದಿನಾಂಕದಿಂದ ಅಭ್ಯರ್ಥಿಗಳು 1 ಅಕ್ಟೋಬರ್ 2024 ರವರಿಗೆ ಈ ITBP ಅಡಿಗೆ ಸೇವೆ ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದಾಗಿದೆ.