AIESL Notification 2024: ವಿಮಾನ ನಿಲ್ದಾಣ ಗಳಲ್ಲಿ ನೇಮಕಾತಿ ಅಧಿಸೂಚನೆ ಬಿಡುಗಡೆ! ಸೂಪರ್ವೈಸರ್ ಹುದ್ದೆಗಳು! ಪದವಿ ಮುಗಿಸಿದವರು ಅರ್ಜಿ ಸಲ್ಲಿಸಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಏರ್ಪೋರ್ಟ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಇಂದ ಅರ್ಹ ಪುರುಷ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಹಾಯಕ ಮೇಲ್ವಿಚಾರಕರು ಮತ್ತು ಪ್ರಾದೇಶಿಕ ಭದ್ರತಾ ಹುದ್ದೆಗಳ ನೇಮಕಾತಿಗಾಗಿ ಆದಿ ಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವ ಮೊದಲು ನೀವು ಈ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಸಂಬಳದ ವಿವರ, ಅರ್ಜಿ ದಿನಾಂಕಗಳು ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಲಾಗಿದ್ದು. ಆದ್ದರಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿರಿ.
ಹುದ್ದೆಗಳ ವಿವರ:
ಪ್ರಾದೇಶಿಕ ಭದ್ರತಾಧಿಕಾರಿ: ಯಾವುದೇ ವಿಶ್ವವಿದ್ಯಾಲಯದಿಂದ, ಮಂಡಳಿಗಳಿಂದ ಅಥವಾ ಕಾಲೇಜಿನಿಂದ 3 ವರ್ಷಗಳ ಪದವಿ ಮಾನ್ಯತೆ ಪಡೆದಿರುವಂತಹ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಹಾಗೂ ಸ್ಥಳಿಯ ಭಾಷೆ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತನಾಡಬೇಕಿರುತ್ತದೆ.
ಸಹಾಯಕ ಮೇಲ್ವಿಚಾರಕ: ಈ ಹುದ್ದೆಗಳಿಗೂ ಕೂಡ ಸ್ಥಳೀಯ ಭಾಷೆ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಮಾತನಾಡಬೇಕು ಹಾಗೂ ವಿದ್ಯಾಲಯದಿಂದಾಗಲಿ, ಮಂಡಳಿಗಳಿಂದಾಗಲು ಅಥವಾ ಕಾಲೇಜಿನಿಂದಾಗಲಿ 3 ವರ್ಷಗಳ ಪದವಿ ಮಾನ್ಯತೆಯನ್ನು ಪಡೆದಿರಬೇಕಾಗಿರುತ್ತದೆ.
ವಯಸ್ಸಿನ ಮಿತಿ:
ಈ ಏರ್ಪೋರ್ಟ್ ಆಹ್ವಾನಿಸಲಾಗಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕೆಂದರೆ ಅಭ್ಯರ್ಥಿಗಳಿಗೆ 18 ವರ್ಷದಿಂದ 49 ವರ್ಷದ ಒಳಗೆ ವಯಸ್ಸು ಇರಬೇಕಾಗಿರುತ್ತದೆ. 5 ವರ್ಷಗಳ ವಯೋಮಿತಿ ಸಡಿಲಿಕೆ SC, ST ಎಸ್ ಸಿ, ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ ಇರಲಾಗುವುದು. 3 ವರ್ಷಗಳ ವಯೋಮಿತಿ ಸಡಿಲಿಕೆಯು OBC ಓಬಿಸಿ ಅಭ್ಯರ್ಥಿಗಳಿಗೆ ಇರಲಾಗುವುದು.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ SC, ST ಎಸ್ ಸಿ, ಎಸ್ ಟಿ ವರ್ಗದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿರುವುದಿಲ್ಲ. 1,000 ರೂ ಅರ್ಜಿ ಶುಲ್ಕವನ್ನು ಉಳಿದಂತಹ ಎಲ್ಲಾ ಅಭ್ಯರ್ಥಿಗಳು ಪೇ ಮಾಡಬೇಕಿರುತ್ತದೆ.
ಆಯ್ಕೆ ಪ್ರಕ್ರಿಯೆ:
ಅರ್ಜಿಯನ್ನು ಹಾಕಿರುವಂತಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ಮತ್ತು ಮೆರಿಟ್ ಅಂಕಗಳ ಆಧಾರದ ಮೇಲೆ ಈ ಉದ್ಯೋಗಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ಸಂಬಳದ ವಿವರ:
ಪ್ರಾದೇಶಿಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳಿಗೆ 47,600 ರೂ ವೇತನವನ್ನು ನೀಡಲಾಗುವುದು. ಸೂಪರ್ವೈಸರ್ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅರ್ಹ ಅಭ್ಯರ್ಥಿಗಳಿಗೆ 28,000 ರೂ ವೇತನವನ್ನು ನೀಡಲಾಗುತ್ತದೆ.
ಅರ್ಜಿ ದಿನಾಂಕಗಳು:
- 8 ಸಪ್ಟೆಂಬರ್ 2024 ಈ ದಿನಾಂಕವು ಈ ಏರ್ಪೋರ್ಟ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆರಂಭದ ದಿನಾಂಕ ವಾಗಿರುತ್ತದೆ.
- 24 ಸಪ್ಟೆಂಬರ್ 2024 ಈ ದಿನಾಂಕವು ಅಭ್ಯರ್ಥಿಗಳು ಏರ್ಪೋರ್ಟ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು:
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಆಫ್ಲೈನ್ ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಈ ಹುದ್ದೆಗಳ ಅರ್ಜಿಯನ್ನು ಮುಖ್ಯಮಾನವ ಸಂಪನ್ಮೂಲ ಅಧಿಕಾರಿ AI ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ನವದೆಹಲಿ ಇವರಿಗೆ ಕಳಿಸಬೇಕಿರುತ್ತದೆ. ಹೆಚ್ಚಿನ ಮಾಹಿತಿಗಾಗಿ AIESL ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿರಿ.