Shed Subsidy: ಕುರಿ, ಕೋಳಿ, ದನದ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ ₹57000 ಸಹಾಯಧನ! ಅರ್ಜಿ ಸಲ್ಲಿಸುವ ಪೂರ್ತಿ ಮಾಹಿತಿ ಇಲ್ಲಿದೆ! 

Shed Subsidy: ಕುರಿ, ಕೋಳಿ, ದನದ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ ₹57000 ಸಹಾಯಧನ! ಅರ್ಜಿ ಸಲ್ಲಿಸುವ ಪೂರ್ತಿ ಮಾಹಿತಿ ಇಲ್ಲಿದೆ! 

ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಕೃಷಿಯಲ್ಲಿ ತೊಡಗಿರುವ ರೈತರಿಗೆ ಕೃಷಿಯ ಜೊತೆಗೆ ಕುರಿ, ದನ, ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ₹57000 ಸಹಾಯಧನವನ್ನು ನೀಡಲಾಗುತ್ತಿದೆ. ಅರ್ಹ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವ ರೈತರು ಅರ್ಹರು ಹಾಗೂ ಅರ್ಜಿಗೆ ಬೇಕಾಗುವ ಪ್ರಮುಖ ದಾಖಲಾತಿಗಳು ಯಾವವು ಮತ್ತು ಅರ್ಜಿಯನ್ನು ಎಲ್ಲಿ ಸಲ್ಲಿಸುವುದು ಎನ್ನುವುದರ ಪೂರ್ತಿಯಾದ ಮಾಹಿತಿಯನ್ನು ತಿಳಿಸಿದ್ದೇವೆ. ಆದ ಕಾರಣದಿಂದ ಈ ಒಂದು ಲೇಖನವನ್ನು ನೀವೆಲ್ಲರೂ ಕೊನೆಯವರೆಗೂ ತಪ್ಪದೆ ಓದಿರಿ.

ರೈತರಿಗೆ ಕೃಷಿಯ ಜೊತೆಗೆ ಆರ್ಥಿಕ ನೆರವು ನೀಡುವುದರ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರ್ಕಾರವು ಕುರಿ, ದನ, ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳಲಿ ಎಂದು ಈ ಸಹಾಯಧನವನ್ನು ನೀಡುತ್ತಿರುವುದು ಮುಖ್ಯ ಉದ್ದೇಶವಾಗಿದೆ. ನೀವು ಈ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಇರಬೇಕಾದ ಜಾಗದ ಅಳತೆ 18 ಅಡಿ ಉದ್ದ, ಇರಬೇಕಾದ ಜಾಗದ ಅಗಲ 10 ಅಡಿ, ಮತ್ತು 5 ಅಡಿ ಎತ್ತರದ ಮೇವಿನ ತೊಟ್ಟಿಯನ್ನು ನಿರ್ಮಾಣ ಮಾಡಿಕೊಳ್ಳಲು ಈ ಸಹಾಯಧನವನ್ನು ಸರ್ಕಾರ ನೀಡಲಾಗುತ್ತಿದೆ. ಈ ಯೋಜನೆ ಅಡಿ ನೀಡುವ ಸಹಾಯಧನದಲ್ಲಿ 10,500 ರೂ ಕೂಲಿ ವೆಚ್ಚವಾಗಿರುತ್ತದೆ, ಉಳಿದಿರುವಂತಹ ಹಣವು ಸಾಮಗ್ರಿ ವೆಚ್ಚವಾಗಿರುತ್ತದೆ.

ಯಾರು ಅರ್ಹರು? 

  • ಈ ಯೋಜನೆಯ ಅಡಿ ಸಹಾಯಧನ ಪಡೆದುಕೊಳ್ಳಲು ಜಾಬ್ ಕಾರ್ಡ್ ಹೊಂದಿರಬೇಕು.
  • 4 ಜಾನುವಾರುಗಳನ್ನು ಹೊಂದಿರುವ ರೈತರುಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ
  • BPL ಹೊಂದಿರುವ ಎಲ್ಲ ರೈತರು.
  • ಗ್ರಾಮೀಣ ಭಾಗದಲ್ಲಿ ವಾಸಿಸುವ ಎಲ್ಲ ರೈತರು.
  • ಪಶು ವೈದ್ಯರಿಂದ ಪಡೆದ ಪಶು ದೃಢೀಕರಣ ಪತ್ರ ಇರಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ರೈತರುಗಳು ಈ ಉದ್ಯೋಗ ಖಾತ್ರಿ ಯೋಜನೆ ಅಡಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಬೇಕಿರುವ ದಾಖಲೆಗಳು?

  • ಆಧಾರ್ ಕಾರ್ಡ್
  • ಜಾಬ್ ಕಾರ್ಡ್
  • ರೇಷನ್ ಕಾರ್ಡ್
  • ಜಾನುವಾರುಗಳ ಸಾಕಾಣಿಕೆ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು? 

ಈ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೈತರುಗಳು ನಿರ್ಮಾಣ ಮಾಡಿಕೊಳ್ಳಲು ನಾವು ಈ ಮೇಲೆ ತಿಳಿಸಲಾಗಿರುವ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮ ಪಂಚಾಯಿತಿಗೆ ಬೇಟಿಯನ್ನು ನೀಡಿ, ಅರ್ಹ ರೈತರುಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

Leave a Comment