ITBP ಡ್ರೈವರ್ ನೇಮಕಾತಿ 2024 | 545 ಪೋಸ್ಟ್‌ಗಳು | 10ನೇ ತರಗತಿ ಪಾಸ್ ಆದವರು ಆನ್ಲೈನ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿ! 

ITBP ಡ್ರೈವರ್ ನೇಮಕಾತಿ 2024 | 545 ಪೋಸ್ಟ್‌ಗಳು | 10ನೇ ತರಗತಿ ಪಾಸ್ ಆದವರು ಆನ್ಲೈನ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿ!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ITBP ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ 545 ಡ್ರೈವರ್ ಉದ್ಯೋಗಗಳ ನೇಮಕಾತಿಗಾಗಿ ಅಧಿಸೂಚನೆ ಹೊರಬಿದ್ದಿದೆ. 10ನೇ ತರಗತಿ ಪಾಸಾದವರು ಈ ಉದ್ಯೋಗಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನೀವು ಅರ್ಜಿಯನ್ನು ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸಂಬಳದ ವಿವರ, ಪ್ರಮುಖ ದಿನಾಂಕಗಳು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಪೂರ್ತಿಯಾದ ಮಾಹಿತಿಯನ್ನು ಈ ಲೇಖನದಲ್ಲಿ ಸೇರಿಸಲಾಗಿದೆ. ಆದಕಾರಣದಿಂದ ಕೊನೆವರೆಗೂ ಓದಿರಿ.

  • ನೇಮಕಾತಿ ಇಲಾಖೆ: (ITBP) ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್‌.
  • ಲೇಖನಕ್ಕಾಗಿ: ITBP ಡ್ರೈವರ್ ನೇಮಕಾತಿ 2024
  • ಹುದ್ದೆ: ಕಾನ್ಸ್ಟೇಬಲ್ (ಚಾಲಕ)
  • ಒಟ್ಟು ಹುದ್ದೆಗಳು: 545
  • ಕೆಲಸದ ಸ್ಥಳ: ಭಾರತದಾದ್ಯಂತ
  • ನೀವು ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಶೈಕ್ಷಣಿಕ ಅರ್ಹತೆ: 

ಅಧಿಕೃತ ವೆಬ್ಸೈಟ್ನಲ್ಲಿನ ಅಧಿಸೂಚನೆಯ ವಿವರಗಳ ಪ್ರಕಾರ ನೀವು ಈ ITBP ಡ್ರೈವರ್ ಉದ್ಯೋಗಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿದ್ಯಾಲಯದಿಂದಾಗಲಿ, ಮಂಡಳಿಯಿಂದಾಗಲಿ 10ನೇ ತರಗತಿ ಪಾಸ್ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕಾಗಿರುತ್ತದೆ. ಮತ್ತು 10ನೇ ಪಾಸ್ ವಿದ್ಯಾರ್ಹತೆಯೊಂದಿಗೆ ಅರ್ಜಿದಾರರು ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು. ಆಗ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.

ವಯಸ್ಸಿನ ಮಿತಿ: 

ನೀವು ಈ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ 21 ರಿಂದ 27 ವರ್ಷಗಳ ಒಳಗೆ ಇರಬೇಕು. ವಯೋಮಿತಿ ಸಡಿಲಿಕೆಯನ್ನು ಇನ್ನು ಲೆಕ್ಕಾಚಾರ ಮಾಡಿಲ್ಲ. ಲೆಕ್ಕಾಚಾರ ಮಾಡುವ ದಿನಾಂಕ 6 ನವೆಂಬರ್ 2024 ಇಂದು ನಿಗದಿಪಡಿಸಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ:

ಈ ಈ ಉದ್ಯೋಗಗಳಿಗೆ ಮೊದಲು ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನು ಮತ್ತು ದೈಹಿಕ ಗುಣಮಟ್ಟದ ತರಬೇತಿಯನ್ನು ನೀಡಲಾಗುವುದು. ಈ ತರಬೇತಿ ನಂತರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಆಮೇಲೆ ಲಿಖಿತ ಪರೀಕ್ಷೆ ಪಲಿತಾಂಶ ಬಿಡುಗಡೆಯಾದ ಮೇಲೆ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುವುದು ಹಾಗೆ ಡ್ರೈವಿಂಗ್ ಟೆಸ್ಟ್ ಕೂಡ ಮಾಡಲಾಗುತ್ತದೆ. ಮುಂದೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ಮೇಲೆ ಮೆರಿಟ್ ಲಿಸ್ಟ್ ಅನ್ನು ಘೋಷಿಸಲಾಗುತ್ತದೆ.

ಅರ್ಜಿ ಶುಲ್ಕ: 

100 ರೂ ಅರ್ಜಿ ಶುಲ್ಕವನ್ನು ಸಾಮಾನ್ಯ ವರ್ಗ ಮತ್ತು ಓ ಬಿ ಸಿ ವರ್ಗದವರಿಗೆ ನಿಗದಿಪಡಿಸಲಾಗಿದೆ. ST, SC ವರ್ಗದ ಅಭ್ಯರ್ಥಿಗಳು ಈ ITBP ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿರುವುದಿಲ್ಲ.

ಬೇಕಾಗುವಾಗ ದಾಖಲೆಗಳು: 

  •  ಆಧಾರ್ ಕಾರ್ಡ್
  • 10ನೇ ತರಗತಿ ಮಾರ್ಕ್ಸ್ ಕಾರ್ಡ್
  • ಈ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು
  • ಚಾಲನಾ ಪರವಾನಗಿ
  • ವಿಳಾಸ ಪುರಾವೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ

ಪ್ರಮುಖ ದಿನಾಂಕಗಳು: 

  • 08 ಅಕ್ಟೋಬರ್ 2024 ರಂದು ಅಭ್ಯರ್ಥಿಗಳಿಗೆ ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕವಾಗಿರುತ್ತದೆ.
  • 06 ನವೆಂಬರ್ 2024 ರಂದು ITBP ಡ್ರೈವರ್ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸುವುದು: 

ನೀವು ITBP ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ಮಾಡಿ. ಮತ್ತೆ ಕೇಳಲಾಗಿರು ಅಗತ್ಯ ದಾಖಲೆಗಳ ವಿವರವನ್ನು ಹಾಕಿ, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ! 

Leave a Comment