RRC NCR ಅಪ್ರೆಂಟಿಸ್ ನೇಮಕಾತಿ 2024: 10ನೇ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ 1679 ಹುದ್ದೆಗಳಿಗೆ ನೇರ ನೇಮಕಾತಿ! ಹೀಗೆ ಅರ್ಜಿ ಸಲ್ಲಿಸಿ.

RRC NCR ಅಪ್ರೆಂಟಿಸ್ ನೇಮಕಾತಿ 2024: 10ನೇ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ 1679 ಹುದ್ದೆಗಳಿಗೆ ನೇರ ನೇಮಕಾತಿ! ಹೀಗೆ ಅರ್ಜಿ ಸಲ್ಲಿಸಿ.

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ರೈಲ್ವೆ ನೇಮಕಾತಿ ಸೆಲ್ RRC NCR 1679 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತವಾಗಿ ಇಲಾಖೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ನೀವು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಕ್ಕಿಂತ ಮುಂಚೆ ನೀವು ಈ ಹುದ್ದೆಗಳಿಗೆ ಅರ್ಜಿ ಹಾಕಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಸಂಬಳದ ವಿವರ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಆದಕಾರಣದಿಂದ ಎಲ್ಲ ಸ್ನೇಹಿತರುಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಿರಿ.

  • ಇಲಾಖೆಯ ಹೆಸರು: ರೈಲ್ವೆ ನೇಮಕಾತಿ RRC NCR
  • ಹುದ್ದೆ ಹೆಸರು: ಅಪ್ರೆಂಟಿಸ್
  • ಖಾಲಿ ಹುದ್ದೆಗಳು: ಪ್ರಯಾಗ್ರಾಜ್ ವಿಭಾಗ 364, ಎಲೆಕ್ಟ್ ಇಲಾಖೆ 339, ಝಾನ್ಸಿ ವಿಭಾಗ 528, ಕಾರ್ಯಾಗಾರ ಝಾನ್ಸಿ 170, ಆಗ್ರಾ ವಿಭಾಗ 296, ಒಟ್ಟು 1679 ಹುದ್ದೆಗಳು
  • ಕೆಲಸದ ಸ್ಥಳ: ಭಾರತದಾದ್ಯಂತ
  • ವರ್ಗ: ಸರ್ಕಾರಿ ಉದ್ಯೋಗಗಳು
  • ನೀವು ಈ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಶೈಕ್ಷಣಿಕ ಅರ್ಹತೆ: 

ಈ ಹುದ್ದೆಗಳ ನೇಮಕಾತಿಗಾಗಿ ಬಿಡುಗಡೆ ಮಾಡಲಾಗಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ. ಆಗ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿರುತ್ತದೆ.

 ವಯಸ್ಸಿನ ಮಿತಿ: 

ಆಹ್ವಾನಿಸಲಾಗಿರುವ RRC NCR ಉದ್ಯೋಗಗಳ ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ 15 ರಿಂದ 24 ವರ್ಷದ ಒಳಗೆ ವಯಸ್ಸಿನ ಮಿತಿಯು ಇರಬೇಕು ಎಂದು ಇಲಾಖೆಯು ಬಿಡುಗಡೆ ಮಾಡಿರುವಂತಹ ಅಧಿಸೂಚನೆಯಲ್ಲಿ ಹೊರಡಿಸಿದೆ. ಈ ವಯಸ್ಸಿನವರು ಅರ್ಜಿ ಹಾಕಿದರೆ ಮಾತ್ರ ಸ್ವೀಕರಿಸಲಾಗುತ್ತದೆ.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರ ವಿಭಿನ್ನ ರೀತಿಯಲ್ಲಿ ಜಾತಿ ವರ್ಗದ ಮೇಲೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. Gen, OBC, EWS ವರ್ಗದ ಅಡಿಯಲ್ಲಿರುವ ಅಭ್ಯರ್ಥಿಗಳಿಗೆ 100 ರೂ ಇರಿಸಲಾಗಿದೆ. ನೀವು SC, ST, PWD ಅಥವಾ ಮಹಿಳಾ ವರ್ಗದಲ್ಲಿದ್ದರೆ ಈ ಒಂದು ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ನಿಮ್ಮ 10ನೇ ಮತ್ತು ಐಟಿಐ ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಇದರ ನಂತರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಕೊನೆಯದಾಗಿ ವೈದ್ಯಕೀಯ ಪರೀಕ್ಷೆಯನ್ನು ನಡೆಸುವುದರ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಂಬಳದ ವಿವರ:

RRC NCR ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅರ್ಹ ಅಭ್ಯರ್ಥಿಗಳಿಗೆ 7,000 ದಿಂದ 10,000 ಸಂಬಳವಾಗಿ ಇಲಾಖೆಯ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • 16 ಸೆಪ್ಟೆಂಬರ್ 2024 ನೀವು ಈ RRC NCR ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕವಾಗಿರುತ್ತದೆ.
  • 15 ಅಕ್ಟೋಬರ್ 2024 ಈ ದಿನಾಂಕವು ಅರ್ಜಿಯನ್ನು ಸಲ್ಲಿಸಲು ನಿಮಗೆ ಕೊನೆಯ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸುವುದು: 

ನೀವು ಮೊದಲು ಈ ಕೆಳಗಡೆ ನಾವು ನೀಡಲಾಗಿರುವಂತಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿರಿ. ಅಲ್ಲಿ ಕೇಳಲಾಗಿರುವ ಅಗತ್ಯ ದಾಖಲೆಗಳ ಮಾಹಿತಿಯನ್ನು ಭರ್ತಿ ಮಾಡಿ ನೀವು ಈ ಉದ್ಯೋಗದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ! 

Leave a Comment