ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದಲ್ಲಿ ನಾವು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೇ ಇರುವ ವಿಚಾರದ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಲೇಖನವನ್ನು ಪೂರ್ತಿಯಾಗಿ ಓದಿರಿ ಅವಾಗ ಮಾತ್ರ ಈ ವಿಷಯದ ಮಾಹಿತಿ ಸಂಪೂರ್ಣವಾಗಿ ನಿಮಗೆ ದೊರೆಯುತ್ತದೆ.
ಸ್ನೇಹಿತರೆ, ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಪ್ರಮುಖ ಗ್ಯಾರಂಟಿ ಆದಂತಹ ಗ್ರಹಲಕ್ಷ್ಮಿ ಯೋಜನೆಯ ವಿಚಾರವಾಗಿ ಕಳೆದ ಎರಡು ತಿಂಗಳಗಳಿಂದ ಚರ್ಚೆಗೆ ಒಳಗೊಂಡಿದೆ ಎಂದು ನಿಮಗೀಗಾಗಲೇ ಗೊತ್ತಿದೆ. ಸಾಕಷ್ಟು ದಿನಗಳಿಂದ ಗ್ರಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲ ಎಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಆರೋಪಿಸುತ್ತಿದ್ದಾರೆ.
ಸಾಕಷ್ಟು ಕಡೆಗಳಿಂದ ತಿಳಿದು ಬಂದಿರುವಂತಹ ಮಾಹಿತಿ ಪ್ರಕಾರ 6,000 ರೂ. ಹಣವನ್ನು ಒಂದೇ ಸಲಕ್ಕೆ ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ,6000 ರೂ. ಅಂದರೆ ಮೂರು ಕಂತಿನ ಹಣವನ್ನು ಪಾವತಿ ಅಥವಾ ಜಮಾ ಮಾಡಬೇಕಾಗಿದೆ. ಇನ್ನು ಹಲವಾರು ಮಹಿಳೆಯರ ಖಾತೆಗೆ 10 ನೆ ಕಂತಿನವರೆಗೆ ಹಣ ಜಮಾ ಆಗಿದೆ ಮತ್ತು 11 & 12 ನೆ ಕಂತಿನ ಹಣ ಖಾತೆಗೆ ಜಮಾ ಆಗಬೇಕಿದೆ.
Gruhalakshmi Scheme: ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!!
ಈ ಎಲ್ಲ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆ, ಸ್ಥಗಿತ ಆಗುವ ಸಾಧ್ಯತೆಗಳಿವೆ ಎಂಬ ಅನುಮಾನಗಳು ಎಲ್ಲಾ ಕಡೆ ಮೂಡುತ್ತಿವೆ. ಈ ಕಾರಣದಿಂದ ಮುಖ್ಯಮಂತ್ರಿಗಳಾಗಿರುವಂತಹ ಸಿಎಂ ಸಿದ್ದರಾಮಯ್ಯನವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಇರದಿದ್ದರೂ ಗೃಹಲಕ್ಷ್ಮಿ ಯೋಜನೆ ಅಥವಾ ಪಂಚೆ ಗ್ಯಾರಂಟಿಗಳಲ್ಲಿ ಒಂದನ್ನು ಕೂಡ ಸ್ತಗಿತಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ
ಈಗಾಗಲೇ ಬಾಕಿ ಉಳಿದಿರುವಂತಹ ಮೂರು ಕಂತಿನ ಹಣವನ್ನು ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ. ಬರಬೇಕಾದಂತಹ ಒಟ್ಟು 6,000 ಗೃಹಲಕ್ಷ್ಮಿ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ನೇರವಾಗಿ ಜಮಾ ಮಾಡುತ್ತಿವೆ ಎಂದು ತಿಳಿಸಲಾಗಿದೆ. ಈ 3 ಕಂತಿನ ಹಣ ಜಮಾ ಆಗುತ್ತಿದ್ದಂತೆ ಮುಂದೆ ಹಂತ ಹಂತವಾಗಿ ಪ್ರತಿ ತಿಂಗಳು 2,000 ರೂ. ಹಣವನ್ನು ಫಲಾನುಭವಿ ಮಹಿಳೆಯ ಬ್ಯಾಂಕ್ ಖಾತೆಗೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ತಗಿತವಾಗುತ್ತದೆ ಎಂದು ವಿರುದ್ಧವಾಗಿ ಮಾತನಾಡುತ್ತಿರುವವರಿಗೆ ಹಾಗೂ ಅನುಮಾನ ಪಟ್ಟವರಿಗೆ ಪ್ರತಿಯೊಬ್ಬರಿಗೂ ಕೂಡ ಈ ಉತ್ತರ ನೀಡಿದ್ದಾರೆ.
ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿಯಾದ ಅಧಿಕೃತ ಮಾಹಿತಿಯನ್ನು ನೀಡಿರುವುದರಿಂದ ಮಹಾಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಸಮಾಧಾನ ನೀಡಿದೆ ಎನ್ನಬಹುದು. ಮುಂದೆ ಬರುವ ದಿನಗಳಲ್ಲಿ ಬಾಕಿ ಉಳಿದಿರುವ ಮೂರು ಕಂತಿನ ಹಣವನ್ನು ಜಮಾ ಮಾಡಿದ ಮೇಲೆ ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡಿ ಜಮಾ ಆಗಬಹುದು ಎಂದು ಹೇಳಬಹುದು.