Adhaar Card Authentication History: ನಿಮ್ಮ ಆಧಾರ್ ಕಾರ್ಡ್ ಯಾರು ಎಲ್ಲಿ ಬಳಕೆ ಮಾಡಿದ್ದಾರೆ ಎನ್ನುವುದನ್ನು ನೀವು ಹೀಗೆ ಚೆಕ್ ಮಾಡಿ.!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಇವಾಗ ಪ್ರತಿಯೊಂದರ ಲಾಭವನ್ನು ಸದುಪಯೋಗ ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ. ಉದಾಹರಣೆಗೆ ಯಾವುದಾದರೂ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು, ವೋಟರ್ ಐಡಿ, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗಳಿಗೆ, ಹೊಸ ಸಿಮ್ ಗಳನ್ನು ಖರೀದಿ ಮಾಡಲು ಹೀಗೆ ಹಲವಾರು ತರಹದ ದಾಖಲೆಗಳಿಗೆ ಆಧಾರ್ ಕಾರ್ಡ್ ಬಹುಮುಖ್ಯವಾಗಿ ಅಗತ್ಯವಾಗಿದೆ.
Adhaar Card Authentication History: ಸ್ನೇಹಿತರೆ, ಇಂದಿನ ದಿನಮಾನಗಳಲ್ಲಿ ಬೇರೆಯವರ ಆಧಾರ್ ಕಾರ್ಡನ್ನು ಅವರಿಗೆ ಗೊತ್ತಾಗದ ರೀತಿಯಲ್ಲಿ ಹಲವರು ಹಲವಾರು ರೀತಿಯಲ್ಲಿ ಬಯಕೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ನಿಮ್ಮ ಒಂದು ಆಧಾರ್ ಕಾರ್ಡನ್ನು ಯಾರಾದರೂ ಎಲ್ಲಿಯೂ ಆದರೂ ಬಳಕೆಯನ್ನು ಮಾಡಿದ್ದಾರೋ ಇಲ್ಲವೋ ಮತ್ತು ಎಲ್ಲೆಲ್ಲಿ ಬಳಕೆಯಾಗಿದೆ ಎನ್ನುವುದನ್ನು ನಿಮ್ಮ ಮೊಬೈಲ್ ನಲ್ಲಿಯೇ ಕೇವಲ ಎರಡು ನಿಮಿಷಗಳಲ್ಲಿ ಪರಿಶೀಲನೆ ಅಥವಾ ಚೆಕ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿದ್ದೇವೆ ಆದ ಕಾರಣದಿಂದ ಈ ಲೇಖನವನ್ನು ಪೂರ್ತಿಯಾಗಿ ತಪ್ಪದೆ ಓದಿರಿ.
ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುವ ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು.?
- ಮೊದಲನೆಯದಾಗಿ ನೀವು ಈ ಕೆಳಗಡೆ ನಾವು ನಿಮಗೆ ನೀಡಿರುವ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿರಿ.
- https://uidai.gov.in/en
- ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಆಧಾರ್ ಕಾರ್ಡ್ ನ ಪೇಜ್ ತೆರೆಯುತ್ತದೆ.
- My Adhaar ಎನ್ನುವ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು.
- ಹಾಗೆ ಮಾಡಿದ ನಂತರ Adhaar Services ಎನ್ನುವ ಆಸೆ ನಿಮಗೆ ಕಾಣಲಾಗುವುದು. ಹಾಗೆ ಅದರ ಕೆಳಗಡೆ ಇನ್ನು ಹಲವು ಆಯ್ಕೆಗಳು ಕಾಣುತ್ತವೆ ಆ ಆಯ್ಕೆಗಳಲ್ಲಿ Adhaar Card Authentication History ಎನ್ನುವಂತಹ ಆಯ್ಕೆ ಮೇಲೆ ಕ್ಲಿಕ್ ನ ಮಾಡಿ.
- ಹಾಗೆ ಮುಂದೆ ಅಲ್ಲಿ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ ನೀವು ಅಲ್ಲಿ Login ಎಂಬುವುದರ ಮೇಲೆ ವತ್ತಿರಿ. ನಂತರ ಮತ್ತೊಂದು ಪೇಜ್ ತೆರೆದುಕೊಳ್ಳಲಾಗುವುದು.
- ಮುಂದೆ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಕೇಳಲಾಗುತ್ತದೆ ಅದನ್ನು ಹಾಕಿ ಕೊಂಡು ಮತ್ತೆ ಅಲ್ಲಿರುವಂತಹ ಕ್ಯಾಪ್ಚಾವನ್ನು ಹಾಕುವುದರ ಮೂಲಕ Login With OTP ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರಲಾಗುತ್ತದೆ. ಆ OTP ಯನ್ನು ಹಾಕಿಕೊಂಡು ಮತ್ತೆ Login ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಹಾಗೆ ಮಾಡಿದ ನಂತರ Fetch Authentication History ಎನ್ನುವ ಆಯ್ಕೆ ಮೇಲೆ ಪ್ರೆಸ್ ಮಾಡಿ.
- ಮುಂದೆ ನಿಮಗೆ ನಿಮ್ಮ ಆಧಾರ್ ಕಾರ್ಡನ್ನು ಬಳಸಿ ಕಳೆದು ಆರು ತಿಂಗಳಿನಿಂದ ಯಾವ ಯಾವ ಕೆಲಸಕ್ಕೆ ಬಳಕೆಯಾಗಿದೆ ಎನ್ನುವ ಸಂಪೂರ್ಣವಾದ ಮಾಹಿತಿಯ ವಿವರವನ್ನು ನೀವು ನೋಡಬಹುದಾಗಿದೆ.
ಹೌದು ಸ್ನೇಹಿತರೆ, ಇತ್ತೀಚಿನ ದಿನಮಾನಗಳಲ್ಲಿ ಬೇರೆಯವರ ಆಧಾರ್ ಕಾರ್ಡ್ ಅನ್ನು ಅವರಿಗೆ ತಿಳಿಯಾದ ಹಾಗೆ ಹಲವಾರು ರೀತಿಯ ಕೆಲಸಗಳಿಗೆ ದುರ್ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನೀವು ನಿಮ್ಮ ಮೊಬೈಲ್ ನಲ್ಲಿ ಈ ರೀತಿಯಾಗಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಹೀಗೆ ನೀವು ಅವಾಗವಾಗ ಚೆಕ್ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರೆ ಅದು ನಿಮಗೆ ತಿಳಿಯುತ್ತದೆ.