Adhaar Card Download: ನಿಮ್ಮ ಮೊಬೈಲ್ ನಲ್ಲಿಯೇ ‘ಆಧಾರ್ ಕಾರ್ಡ್’ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ ನೋಡಿ..!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಭಾರತೀಯ ನಾಗರಿಕರ ಗುರುತಿಗೆ ‘ಆಧಾರ್ ಕಾರ್ಡ್’ ಪ್ರಮುಖವಾದ ದಾಖಲೆಯಾಗಿದೆ. ಇವಾಗ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೇವೆಗಳನ್ನು ಪಡೆಯಲಾಗುವುದಿಲ್ಲ. ಅದರಲ್ಲೂ ಬ್ಯಾಂಕ್ ಖಾತೆಗಳು, ಪಿಂಚಣಿ ಖಾತೆಗಳು, ಮ್ಯೂಚುಯಲ್ ಫಂಡ್ ಗಳು ಮತ್ತು ಆದಾಯ ತೆರಿಗೆಗೆ ಹಾಗೂ ಭವಿಷ್ಯ ನಿಧಿಗಳಿಗೆ ಹಾಗೆ ಬ್ಯಾಂಕಿಂಗ್ ನಿಂದ ಹಿಡಿದು ಸಿಲಿಂಡರ್ ಅರ್ಜಿ ಸಲ್ಲಿಸುವವರೆಗೆ ಈ ಎಲ್ಲ ದಾಖಲೆಗಳಿಗೆ ಆಧಾರ್ ಲಿಂಕ್ ಆಗಿಯೇ ಇರಬೇಕು.

 

ಇನ್ನು, ಹಲವಾರು ಬಾರಿ ಹೊರಗಿದ್ದಲ್ಲಿ ಕೈಯಲ್ಲಿ ಆಧಾರ್ ಕಾರ್ಡ್ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಆಧಾರ್ ಗುರುತನ್ನು ಪರಿಶೀಲನೆ ಮಾಡಬೇಕಿದ್ದಲ್ಲಿ ಆಧಾರ್ ಕಾರ್ಡ್ ಇರದ ಕಾರಣ ಆ ಪರಿಶೀಲನೆ ಅಥವಾ ಕೆಲಸ ನಿಲ್ಲಬಾರದೆಂದು ನಾವು ಈ ಒಂದು ಲೇಖನದ ಮೂಲಕ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡನ್ನು Download ಮಾಡುವ ವಿಧಾನವನ್ನು ತಿಳಿಸಲು ಹೊರಟಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ಅವಾಗ ಮಾತ್ರ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂದು ಗೊತ್ತಾಗುತ್ತದೆ.

 

ಹೌದು ಸ್ನೇಹಿತರೆ, ಪ್ರತಿಯೊಬ್ಬ ಭಾರತೀಯ ನಾಗರಿಕನಾದವನು ತನ್ನ ಆಧಾರ್ ಕಾರ್ಡನ್ನು ಆಧಾರ್ ಗುರುತಿನ ಅಧಿಕೃತ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳ ಬಹುದು. ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಮತ್ತು ಅದಕ್ಕೆ ಇಂಟರ್ನೆಟ್ ಸೌಲಭ್ಯವನ್ನು ನೀವು ಹೊಂದಿದ್ದರೆ ಹೊರಗಡೆ ಎಲ್ಲಿಯೂ ಇದ್ದರೂ ಅಲ್ಲಿಯೇ ಆ ಸಮಯದಲ್ಲಿಯೇ ತಕ್ಷಣ ಡೌನ್ಲೋಡ್ ಮಾಡಿಕೊಳ್ಳ ಬಹುದು.

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ.?

 

• ಮೊದಲು ನೀವು ಗೂಗಲ್ ಓಪನ್ ಮಾಡಿಕೊಳ್ಳಿ ಅಲ್ಲಿ ಯುಐಡಿಎಐ ಎಂದು ಸರ್ಚ್ ಮಾಡಿ.

 

ಆಮೇಲೆ ನಿಮಗೆ ಆಧಾರ್ ಗುರುತಿನ https://uidai.gov.in/hi/ ಅಧಿಕೃತ ವೆಬ್ಸೈಟ್ ಬರುತ್ತದೆ.

 

• ಆ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದ ಮೇಲೆ ವೆಬ್ಸೈಟ್ನ ಮುಖ್ಯಪುಟವು ನಿಮಗೆ ಕಾಣಿಸುತ್ತದೆ.

 

• ಆಮೇಲೆ ನೀವು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಯಾವುದಾದರೂ ಒಂದು ಭಾಷೆಯನ್ನು ಆರಿಸಿ ಮುಂದೆ ಹೋಗಿ.

 

• ನಂತರ ಕೆಳಗಡೆ ಬನ್ನಿ ಅಲ್ಲಿ Get Adhaar ಅಂತ ಇರುತ್ತದೆ ಅದನ್ನು ಬಿಟ್ಟು ಅದರ ಕೆಳಗಡೆ Download Adhaar ಅಂತ ಇರುತ್ತೆ ನೋಡಿ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.

 

• ಮತ್ತೆ ನೀವು ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಗೂ ಕ್ಯಾಪ್ಚಾವನ್ನು ಅಲ್ಲಿ ಭರ್ತಿ ಮಾಡಿ.

 

• ಆಮೇಲೆ Send OTP ಅಂತ ಇರುತ್ತಲ್ಲ ಅಲ್ಲಿ ಕ್ಲಿಕ್ ಮಾಡಿ.

 

• ಇವಾಗ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ಬಂದಿರುವಂತಹ OTP ಯನ್ನು ನಮೂದಿಸಿ.

 

• ನಂತರ ಕೆಲವು ಸೆಕೆಂಡ್ ಗಳಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಪಿಡಿಎಫ್ ಮುಖಾಂತರ ಡೌನ್ಲೋಡ್ ಮಾಡಲಾಗುವುದು.

 

ಪಿಡಿಎಫ್ ತೆರೆಯಲು ಪಾಸ್ವರ್ಡ್ ಏನುರುತ್ತೆ.?

 

ನಂತರ ನೀವು ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಖಾಸಗಿ ದಾಖಲೆಯಾಗಿದೆ ಎಂದು ಉಲ್ಲೇಖಿಸಿರಿ. ಅವಾಗ ಮಾತ್ರ ಆ ಫೈಲ್ ಅನ್ನು ಬೇರೆ ಪಾಸ್ವರ್ಡ್ ನೊಂದಿಗೆ ತೆರೆಯಬಹುದು. ಅದಕ್ಕಾಗಿ ಆಧಾರ್ ಕಾರ್ಡ್ ಹೊಂದಿರುವವರು ಏನು ಮಾಡಬೇಕೆಂದರೆ ನಿಮ್ಮ ಹೆಸರಿನಲ್ಲಿರುವ ಮೊದಲಿನ 4 ಅಕ್ಷರಗಳು ಮತ್ತು ನಿಮ್ಮ ಹುಟ್ಟಿದ ವರ್ಷದ ದಿನಾಂಕವನ್ನು ಸೇರಿಸಿ 8 ಅಕ್ಷರಗಳನ್ನಾಗಿ ಮಾಡಿ ಆಮೇಲೆ ಪಾಸ್ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.

ಉದಾಹರಣೆಯಾಗಿ: ಆಧಾರ್ ಕಾರ್ಡ್ ಹೊಂದಿರುವವರ ಹೆಸರು – SURESH

ಹುಟ್ಟಿದ ದಿನಾಂಕ – 26 ಜುಲೈ 1999

SURE1999 – ಅನ್ನು ಆಧಾರ್ ಪಾಸ್ವರ್ಡ್ ಆಗಿ ಬಳಸಬೇಕು.

 

ಆನ್ಲೈನ್ ನಲ್ಲಿ ಆಧಾರ್ ಕಾರ್ಡನ್ನು ಡಿವೈಸಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ.?

 

• ಆಧಾರ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

 

• ‘ಆಧಾರ್’ ನಂಬರ್ ಅಂತ ಇರುವ ಆಯ್ಕೆಯನ್ನು ಆರಿಸಿಕೊಳ್ಳಿ.

 

• ಆಧಾರ್ ಕಾರ್ಡನ 12 ಅಂಕಿ ಆಧಾರ್ ಸಂಖ್ಯೆಯನ್ನು ಮತ್ತು ಪಾಸ್ವರ್ಡ್ ನಮೂದಿಸಿ.

 

• Send OTP ಇರುವಲ್ಲಿ ಕ್ಲಿಕ್ ಮಾಡಿಕೊಳ್ಳಿ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ OTP ಬರುತ್ತದೆ ಅದನ್ನ ತುಂಬಿರಿ.

 

• ‘ಮಾಸ್ಕ್ ಆದ ಆಧಾರ್’ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಲು ಆಯ್ಕೆ ಮಾಡಿಕೊಳ್ಳಿ.

 

• ನೀವು ಮತ್ತೊಂದು OTP ಪಡೆದ ನಂತರ ಆ ಒಟಿಪಿಯನ್ನು ವೇರಿಫೈ ಮಾಡಿಕೊಂಡು ಡೌನ್ಲೋಡ್ ಅಂತ ಇರುವಲ್ಲಿ ಕ್ಲಿಕ್ ಮಾಡಿ.

 

• ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆಗಿರುವ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ನ ಫೋಲ್ಡರ್ ಅಲ್ಲಿ ಇರುತ್ತದೆ.

Leave a Comment