Adhaar Card: ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಿಸುವ ವಿಧಾನ ಇಲ್ಲಿದೆ ನೋಡಿ.!!

 ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಿಸುವ ವಿಧಾನದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ ನಾವು ನಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡಿನಲ್ಲಿ ಫೋಟೋ ಬದಲಿಸುವುದು ಹೇಗೆ ಮತ್ತು ಆಧಾರ್ ಕಾರ್ಡನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹಾಗೂ ಫೋಟೋವನ್ನು ಎಲ್ಲಿ ಬದಲಿಸಬಹುದು ಎಂಬುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿರಿ.

ನಮ್ಮ ಭಾರತೀಯ ನಾಗರಿಕರ ಗುರುತಿಗೆ ‘ಆಧಾರ್ ಕಾರ್ಡ್’ ಮುಖ್ಯವಾದ ದಾಖಲೆಯಾಗಿದೆ. ಈಗ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೇವೆಗಳನ್ನು ಪಡೆಯಲಾಗುವುದಿಲ್ಲ. ಇವಾಗ ಆದಾಯ ತೆರಿಗೆಗೆ ಹಾಗೂ ಬ್ಯಾಂಕ್ ಮತ್ತು ಪಿಂಚಣಿ ಖಾತೆಗಳು ಹಾಗೂ ಭವಿಷ್ಯದ ನಿಧಿಗಳಿಗೆ ಹಾಗೂ ಸರ್ಕಾರಿ ಮತ್ತು ಖಾಸಗಿ ಯೋಜನೆಗಳಿಗೆ ಆಧಾರ್ ಲಿಂಕ್ ಆಗಿಯೇ ಇರಬೇಕು.

ಸ್ನೇಹಿತರೆ, ಸರ್ಕಾರಿ ಏಜೆನ್ಸಿಗಳು ಹಾಗೂ ಖಾಸಗಿ ಏಜೆನ್ಸಿ ಗಳು ನೀಡುವಂತಹ ಯೋಜನೆಗಳು ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯವಾದ ಅಂತಹ ದಾಖಲೆಗಳಲ್ಲಿ ಪ್ರಮುಖವಾಗಿದೆ. ನೀವು ತುಂಬಾ ವರ್ಷಗಳ ಹಿಂದೆಯೇ ಆಧಾರ್ ಕಾರ್ಡನ್ನು ಪಡೆದುಕೊಂಡಿರುತ್ತೀರಿ ಆದಕಾರಣ ನೀವು ಮಾಡಿಸಿರುವಂತಹ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಫೋಟೋ ಸ್ಪಷ್ಟವಾಗಿ ಕಾಣುತ್ತಿರುವುದಿಲ್ಲ ಹಾಗೂ ತುಂಬಾ ವರ್ಷದ ಹಿಂದಿನ ಫೋಟೋ ಆಗಿರುತ್ತದೆ ಆದ್ದರಿಂದ ನಾವು ಈ ಕೆಳಗೆ ನೀಡಿರುವಂತಹ ಹಂತಗಳ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಸರಳವಾಗಿ ಬದಲಾಯಿಸಿಕೊಳ್ಳಬಹುದಾಗಿದೆ ಅದಕ್ಕೆ ಈ ಲೇಖನವನ್ನು ಪೂರ್ತಿಯಾಗಿ ನೋಡಿ.

Adhaar Card: ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಿಸುವ ವಿಧಾನ ಇಲ್ಲಿದೆ ನೋಡಿ.!!

 

ಆಧಾರ್ ಕಾರ್ಡ್ ನಲ್ಲಿ ಹೇಗೆ ಫೋಟೋ ಬದಲಾಯಿಸುವುದು.??

• ಯಾವುದಾದರೂ ಹತ್ತಿರದ ಆಧಾರ್ ನೊಂದಣಿ ಕೇಂದ್ರಕ್ಕೆ ಹೋಗಿರಿ ಅಥವಾ ಸೇವಾ ಕೇಂದ್ರಕ್ಕೆ ಭೇಟಿಯನ್ನು ನೀಡಿ.

• https://ssup.uidai.gov.in/ssup/ ವೆಬ್ಸೈಟ್ ಇಂದ ನಿಮ್ಮ ಆಧಾರ್ ನೋಂದಣಿಯ ಅಪ್ಡೇಟ್ ಫಾರ್ಮನ್ನು ಡೌನ್ಲೋಡ್ ಮಾಡಿಕೊಳ್ಳಿ.

• ಅಲ್ಲಿ ಮುಖಪುಟದಲ್ಲಿ Enrollment ಆಧಾರ್ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ.

• ನಿಮ್ಮ ಆಧಾರ್ ಫೋಟೋ ಬದಲಾಯಿಸುವುದರ ಬಗ್ಗೆ ಅಲ್ಲಿರುವಂತಹ ಫಾರ್ಮ್ ನಲ್ಲಿ ಕೇಳಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ.

• ನಂತರ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿಯನ್ನು ನೀಡಿ ತುಂಬಿರುವಂತಹ Application ಅನ್ನು ಕೊಡಿ.

• ಹಾಗೆ ಅಲ್ಲಿ ನಿಮ್ಮ ಬಯೋಮೆಟ್ರಿಕ್ ಮತ್ತು ಹೊಸ ಫೋಟೋವನ್ನು ನೀಡಬೇಕಾಗುತ್ತದೆ.

• ಅಲ್ಲಿ ಆಧಾರ್ ಸೇವಾ ಕೇಂದ್ರದಲ್ಲಿ 50 ರೂ. ಅನ್ನು ಶುಲ್ಕವಾಗಿ ಕೊಡಬೇಕು.

• ನಿಮ್ಮ ಫಾರ್ಮನ್ನು ಸಲ್ಲಿಸಿದ ಮೇಲೆ ನಿಮಗೆ ವಿನಂತಿ ಸಂಖ್ಯೆಯ ಅಪ್ಡೇಟ್ ಚೀಟಿಯನ್ನು ಕೊಡಲಾಗುವುದು.

• ರಿಕ್ವೆಸ್ಟ್ ನಂಬರ್ ಅಪ್ಡೇಟ್ ಸಮ್ಮತಿ ಸ್ಲೀಪ್ ನ್ನು ನೀಡುತ್ತಾರೆ.

• ಒಂದು ವಾರದಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಪಡೆದುಕೊಳ್ಳಬಹುದು.

• ಹಾಗೂ ಅಧಿಕೃತ ಯು ಐ ಡಿ ಎ ಐ ಪೋರ್ಟಲ್ ನಿಂದ ಡೌನ್ಲೋಡ್ ಅನ್ನು ಮಾಡಿಕೊಳ್ಳಬಹುದು.

 

ಈ ವಿಷಯಗಳು ನೆನಪಿನಲ್ಲಿರಲಿ.!!

• ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಚಿತ್ರವನ್ನು ನೀವು ಬದಲಾಯಿಸಲು ಯಾವುದೇ ತರಹದ ದಾಖಲೆಗಳು ಬೇಕಿಲ್ಲ.

• ಆಧಾರ್ ಕಾರ್ಡ್ ನಲ್ಲಿ ನೀವು ನೀಡಿರುವಂತಹ ವಿವರವನ್ನು ಅಪ್ಡೇಟ್ ಮಾಡಲು ಸುಮಾರು 90 ದಿನಗಳ ಕಾಲಾವಕಾಶ ತೆಗೆದುಕೊಳ್ಳಬಹುದು.

• ನೀಡಿರುವಂತಹ ಆನ್ಲೈನ್ URN ಅನ್ನು ಬಳಸಿ ಆಧಾರ್ ಅಪ್ಡೇಟ್ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

• ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸುವ ಪ್ರಕ್ರಿಯೆಯನ್ನು ಸೆಲ್ಫ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಬೆಂಬಲಿಸುತ್ತಿರುವುದಿಲ್ಲ.

 

ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ.??

• UIDAI ಅಧಿಕೃತ ವೆಬ್ಸೈಟ್ಗೆ ಹೋಗಿರಿ.

• My Adhaar ಎಂದು ಇರುವ ಟ್ಯಾಬ್ ಅನ್ನು ಓಪನ್ ಮಾಡಿ ಡೌನ್ಲೋಡ್ ಆಧಾರ್ ಎಂಬ ಇರುವ ಆಯ್ಕೆಯನ್ನು ಆರಿಸಿ.

• ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ನೀಡಿ ಹಾಗೂ ಕ್ಯಾಪ್ಚಾವನ್ನು ನೀಡಿ.

• OTP Send ಆಯ್ಕೆ ಮೇಲೆ ಒತ್ತಿ.

• ಆನಂತರ ನಿಮ್ಮ ಒಂದು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ನಂಬರ್ಗೆ OTP ಯು ಬರುತ್ತದೆ.

• ಬಂದಿರುವಂತಹ OTP ಅನ್ನು ಹಾಕಿ ಲಾಗಿನ್ ಮಾಡಿರಿ.

• ಅಪ್ಡೇಟ್ ಆಗಿರುವಂತಹ ನಿಮ್ಮ ಆಧಾರ್ ಕಾರ್ಡನ್ನು ‘ಡೌನ್ಲೋಡ್ ಆಧಾರ್’ ಎಂಬುದರ ಮೇಲೆ ಕ್ಲಿಕ್ ಮಾಡಿಕೊಂಡು ಆಧಾರ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

Leave a Comment