ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ನಿಮ್ಮ ಹತ್ತಿರ ಇರುವ ಸಿಮ್ ಅನ್ನು ಬಿಎಸ್ಎನ್ಎಲ್ ಸಿಮ್ ಗೆ ಪೋರ್ಟ್ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಿಮ್ಮ ಹತ್ತಿರ ಇರುವ ಜಿಯೋ ಅಥವಾ ಏರ್ಟೆಲ್ ಸಿಮ್ ಅನ್ನು ಬಿಎಸ್ಎನ್ಎಲ್ ಗೆ ಯಾವ ರೀತಿ ಪೋರ್ಟ್ ಮಾಡಿಕೊಳ್ಳುವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
BSNL SIM PORT: ಇವಾಗ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ಬಳಕೆ ಮಾಡುತ್ತಿರುವ ಸಿಮ್ ಕಂಪನಿಗಳೆಂದರೆ ಅವುಗಳು ಜಿಯೋ ಮತ್ತು ಏರ್ಟೆಲ್ ಸಿಮ್ ಗಳು ಆದರೆ ಈಗ ಇವೆರಡು ಸಿಮ್ ಕಂಪನಿಗಳು ರಿಚಾರ್ಜ್ ಮಾಡಿಕೊಳ್ಳುವ ಹಣವನ್ನು ಏರಿಕೆ ಮಾಡಿವೆ. ಮಾಡಿರುವಂತಹ ಈ ಏರಿಕೆ ದರವನ್ನು ಜನರು ಚಿಂತಾಭ್ರಾಂತರಾಗಿದ್ದಾರೆ. ಮೊದಲನೇಕ್ಕಿಂತ ಶೇಕಡ 20% ರಷ್ಟು ಜಿಯೋ ಮತ್ತು ಏರ್ಟೆಲ್ ಸಿಮ್ ಕಂಪನಿಗಳು ರಿಚಾರ್ಜ್ ಮಾಡಿಕೊಳ್ಳುವಂತಹ ಹಣವನ್ನು ಹೆಚ್ಚಳ ಮಾಡಿರುವ ಕಾರಣದಿಂದ ಜೀವ ಮತ್ತು ಏರ್ಟೆಲ್ ಸಿಮ್ ಗಳ ಬಳಕೆದಾರರು ಹೆಚ್ಚಳ ಮಾಡಿರುವಂತಹ ದರವನ್ನು ನೋಡಿ ಬಿಎಸ್ಎನ್ಎಲ್ ಸಿಮ್ ಗೆ ಆಗಬೇಕು ಅಂದುಕೊಂಡಿದ್ದಾರೆ. ಈ ರೀತಿ ಸಿಮ್ ಪೋರ್ಟ್ ಮಾಡಿಕೊಳ್ಳ ಬೇಕು ಎನ್ನುವವರಿಗೆ ಇಲ್ಲಿದೆ ವಿವರ.
ನಿಮ್ಮ ಹತ್ತಿರ ಇರುವ ಸಿಮ್ ಅನ್ನು BSNL ಸಿಮ್ ಗೆ ಪೋರ್ಟ್ ಮಾಡಿಕೊಳ್ಳಬೇಕೆ.??
BSNL ಸಿಮ್ ಕಂಪನಿ ತನ್ನ ಬಳಕೆದಾರರಿಗೆ ಕಡಿಮೆ ದರದ ರಿಚಾರ್ಜ್ ಯೋಜನೆಗಳನ್ನು ನೀಡುವುದರ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲಾಗುತ್ತಿದೆ. 5g ನೆಟ್ವರ್ಕ್ ಅನ್ನು ಹೊಂದಿಲ್ಲದಿದ್ದರೂ 2g, 3g, ಹಾಗೂ 4g ನೆಟ್ವರ್ಕ್ ಸೇವೆಯನ್ನು ಒದಗಿಸುತ್ತಿದೆ. ಜಿಯೋ ಮತ್ತು ಏರ್ಟೆಲ್ ಸಿಮ್ ಗಳ ಬಳಕೆದಾರರು ತಮ್ಮ ಸಿಮ್ ಗಳ ರಿಚಾರ್ಜ್ ಸೇವೆಗಳ ಹಣವು ಏರಿಕೆ ಆದ್ದರಿಂದ ಹಲವಾರು ಗ್ರಾಹಕರು ತಮ್ಮ ಸಿಮ್ ಅನ್ನು ಬಿಎಸ್ಎನ್ಎಲ್ ಸಿಮ್ ಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ. ನೀವು ಕೂಡ ಬಿಎಸ್ಎನ್ಎಲ್ ಸಿಮ್ ಗೆ ಪೋರ್ಟ್ ಆಗಬೇಕೆಂದರೆ ಹೆಚ್ಚಿಗೆ ಯೋಚಿಸುವ ಅವಶ್ಯಕತೆ ಇಲ್ಲ ನಾವು ಈ ಲೇಖನದಲ್ಲಿ ಬಿಎಸ್ಎನ್ಎಲ್ ಸಿಮ್ ಗೆ ಮಾಡಿಕೊಳ್ಳುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ.
BSNL SIM PORT: ನಿಮ್ಮ ಹತ್ತಿರ ಇರುವ ಸಿಮ್ ಅನ್ನು BSNL ಗೆ ಪೋರ್ಟ್ ಮಾಡಬೇಕೆ ಇಲ್ಲಿದೆ ಪೂರ್ತಿ ವಿವರ.!!
ಈ ಕೆಳಗಡೆ ತಿಳಿಸಿರುವ ಅಂತಹ ಹಂತಗಳ ಅನುಗುಣವಾಗಿ ನಿಮ್ಮ ಒಂದು ಸಿಮ್ ಅನ್ನು BSNL ಸಿಮ್ ಗೆ ಓಟ್ ಮಾಡಿಕೊಳ್ಳಬಹುದು.
• ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿರುವ ಮೆಸೇಜ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ಓಪನ್ ಮಾಡಿದ ಮೇಲೆ ಅಲ್ಲಿ 1900 ನಂಬರ್ ಗೆ ಹೋಗಿ PORT ಎಂದು ಟೈಪ್ ಮಾಡಿ ಪೋರ್ಟ್ ಎನ್ನುವುದರ ಮುಂದೆ ನಿಮ್ಮ ಒಂದು ಅಧಿಕೃತವಾದ ಮೊಬೈಲ್ ನಂಬರನ್ನು ಟೈಪ್ ಮಾಡಿ ಸಂದೇಶವನ್ನು ಕಳುಹಿಸಿ. ನಂತರ ನಿಮಗೆ UPC CODE ಕಳುಹಿಸಲಾಗುತ್ತದೆ.
• ನೀವು ಏನಾದರೂ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಅನ್ನು ಬಳಕೆ ಮಾಡುತ್ತಿದ್ದರೆ ಮೆಸೇಜ್ ಕಳಿಸುವ ಬದಲಿಗೆ ನೇರವಾಗಿ 1900 ಕ್ಕೆ ಕರೆಯನ್ನು ಮಾಡಬೇಕು.
• ನಿಮಗೆ ಕಳುಹಿಸಿರುವ UPC CODE 15 ದಿನಗಳು ಅಥವಾ ಮತ್ತೊಂದು ಸಿಮ್ ಕಂಪನಿಯ ಆಪರೇಟರ್ ಗೆ ಪೋರ್ಟ್ ಮಾಡುವವರೆಗೆ ಮಾನ್ಯತೆ ಹೊಂದಿರುತ್ತದೆ.
• ಜಮ್ಮು-ಕಾಶ್ಮೀರ, ಅಸ್ಸಾಂ ಮತ್ತು ಮುಂತಾದ ಈಶಾನ್ಯ ರಾಜ್ಯಗಳಲ್ಲಿ UPC CODE 30 ದಿನಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ.
• ನಿಮ್ಮ ಸಿಮ್ POSTPAID ಇದ್ದಲ್ಲಿ ಬಾಕಿ ಇರುವ ಎಲ್ಲಾ BILL ಗಳ ಪಾವತಿ ನೀಡಿದ್ದೀರಿ ಎಂದು ಖಚಿತ ಮಾಡಿಕೊಳ್ಳಿ.
• UPC CODE ಅನ್ನು ಸ್ವೀಕರಿಸಿದ ಮೇಲೆ ನಿಮ್ಮ ಹತ್ತಿರದ BSNL ಸೇವಾ ಕೇಂದ್ರಗಳಿಗೆ ಹೋಗಿ ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿರಿ.
• ನಿಮ್ಮ ಫೋಟೋವನ್ನು ನೀಡಿರಿ ಹಾಗೂ ನಿಮ್ಮ ಆಧಾರ್ ಕಾರ್ಡ್ ನ ವಿವರವನ್ನು ಒದಗಿಸಿ.
• ನಂತರ ನೀವು ಸ್ವೀಕರಿಸಿರುವಂತಹ UPC CODE ಅನ್ನು ಹಾಕಿರಿ.
• ಪೋರ್ಟಿಂಗಾಗಿ ಇರುವ ಹಣವನ್ನು ಪಾವತಿ ಮಾಡಿ.
• ಈ ಪೋರ್ಟಿಂಗ ಪ್ರಕ್ರಿಯೆ ಮುಗಿದ ನಂತರ BSNL SIM CARD ಅನ್ನು ನೀಡುತ್ತಾರೆ.
• ಅದಾದ ನಂತರ ನೀವು ಪೋರ್ಟ್ ಮಾಡಿಸಿರುವ ಸಿಮ್ 3, 4 ದಿನಗಳಲ್ಲಿ ರದ್ದು ಆಗುತ್ತದೆ ಆವಾಗ ನಿಮಗೆ ನೀಡಿರುವಂತಹ ಹೊಸ BSNL SIM CARD ಅನ್ನು ಫೋನಿನಲ್ಲಿ ಹಾಕಿ ಅದಾದ 15 ನಿಮಿಷದಲ್ಲಿ ನಿಮ್ಮ ಸಿಮ್ ಚಾಲನೆಗೊಳ್ಳುತ್ತದೆ.
ಸ್ನೇಹಿತರೆ, ಈ ಒಂದು ಲೇಖನವು ನಿಮ್ಮ ಹತ್ತಿರ ಇರುವ ಜಿಯೋ ಅಥವಾ ಏರ್ಟೆಲ್ ಸಿಮ್ ಅನ್ನು ಬಿಎಸ್ಎನ್ಎಲ್ ಗೆ ಯಾವ ರೀತಿ ಪೋರ್ಟ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.