CISF Constable recruitment 2024: 1,130 ಅಗ್ನಿಶಾಮಕ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಪೂರ್ತಿ ವಿವರ.!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸ ಹೊರಟಿರುವ ವಿಷಯವೇನೆಂದರೆ ( CISF ) ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ 1,130 ಫೈರ್ ಮ್ಯಾನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಸಲಾಗಿದ್ದು. ಒಟ್ಟು 36 ರಾಜ್ಯಗಳಲ್ಲಿ ಹುದ್ದೆಗಳ ಬರ್ತಿಗಾಗಿ ಅರ್ಜಿ ಕರೆಯಲಾಗಿದೆ. ಅದರಲ್ಲಿ ನಮ್ಮ ಕರ್ನಾಟಕದಲ್ಲಿಯೂ ಹುದ್ದೆಗಳಿವೆ. ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅದಕ್ಕಿಂತ ಮುಂಚೆ ಈ ಹುದ್ದೆಗಳಿಗೆ ಯಾರು ಅರ್ಹರು, ವಯಸ್ಸಿನ ಮಿತಿ ಎಷ್ಟಿರಬೇಕು, ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು, ಸಂಬಳದ ವಿವರ, ಈ ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗಡೆ ತಿಳಿಸಲಾಗಿದೆ ಆದಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಸಂಪೂರ್ಣವಾಗಿ ತಪ್ಪದೆ ಓದಿರಿ.
ಅಗ್ನಿಶಾಮಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ದಿನಾಂಕಗಳು.?
- ಅರ್ಹ ಅಭ್ಯರ್ಥಿಗಳು ಈ CISF ಫೈರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 31 ಆಗಸ್ಟ್ 2024 ಪ್ರಾರಂಭದ ದಿನಾಂಕವಾಗಿರುತ್ತದೆ.
- 30 ಸೆಪ್ಟೆಂಬರ್ 2024 ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿರುತ್ತದೆ.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಪ್ಪುಗಳನ್ನು ಮಾಡಿರುವಂತಹ ಅರ್ಜಿದಾರರಿಗೆ 10 ರಿಂದ 12 ಅಕ್ಟೋಬರ್ 2024 ವರೆಗೆ ಸರಿಪಡಿಸಿಕೊಳ್ಳುವ ದಿನಾಂಕವಾಗಿದೆ.
ಅರ್ಜಿ ಶುಲ್ಕ.?
- ಮಾಜಿ ಸೈನಿಕ ಅಭ್ಯರ್ಥಿಗಳು ಹಾಗೂ SC, ST ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ.
- ಉಳಿದ UR, OBC, EWS ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು 100 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ವಯಸ್ಸಿನ ಮಿತಿ.?
18 ರಿಂದ 23 ವರ್ಷದವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತ್ತು SC, ST ಅಭ್ಯರ್ಥಿಗಳಿಗೆ 5 ವರ್ಷದವರೆಗೆ ವಯೋಮಿತಿ ಸಡಿಲಿಕೆಯು ಕೂಡ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ.!
- ದಹಿಕ ದಕ್ಷತೆ ಪರೀಕ್ಷೆ
- ದೈಹಿಕ ಪ್ರಮಾಣೀತ ಪರೀಕ್ಷೆ
- ಲಿಖಿತ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
ದಹಿಕ ದಕ್ಷತೆಯ ಪರೀಕ್ಷೆ.!
24 ನಿಮಿಷದಲ್ಲಿ ಅಭ್ಯರ್ಥಿಗಳು 5 ಕಿ.ಮೀ ಊಟವನ್ನು ಪೂರ್ಣಗೊಳಿಸಬೇಕಾಗಿರುತ್ತದೆ.
ದೈಹಿಕ ಪ್ರಮಾಣೀತ ಪರೀಕ್ಷೆ.!
ಅಭ್ಯರ್ಥಿಗಳ ಎತ್ತರ 170 cm ಮತ್ತು ಅಭ್ಯರ್ಥಿಗಳ ಎದೆ 80 ರಿಂದ 85 cm ಇರಬೇಕಾಗಿರುತ್ತದೆ.
ಲಿಖಿತ ಪರೀಕ್ಷೆ.!
ಈ ಪರೀಕ್ಷೆಯಲ್ಲಿ 100 ಅಂಕಗಳಿಗೆ ಜನರಲ್ ಇಂಟೆಲಿಜೆನ್ಸ್, ರಿಸನಿಂಗ್, ಆಪ್ಟಿಟ್ಯೂಡ್, ಇಂಗ್ಲಿಷ್ ಹಾಗೂ ಜನರಲ್ ಅವೇರ್ನೆಸ್ ಈ ಎಲ್ಲ ವಿಷಯಗಳಿಂದ ಒಟ್ಟು ನೂರು ಪ್ರಶ್ನೆಗಳನ್ನು ಕೇಳಿರಲಾಗಿರುತ್ತದೆ.
ಸಂಬಳದ ವಿವರ.!
ಈ ಹುದ್ದೆಗಳಿಗೆ ಹಂತ ಮೂರರ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.35,000 ವೇತನವನ್ನು ನೀಡಲಾಗುತ್ತದೆ. ಹಾಗೆ ಇದರ ಭತ್ಯೆ ಕೂಡ ನೀಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ.?
ನಾವು ಈ ಕೆಳಗಡೆ ನಿಮಗೆ ನೀಡಿರುವ ಈ ಹುದ್ದೆಗಳ ಅಧಿಕೃತ ವೆಬ್ಸೈಟ್ಗೆ ಹೋಗುವುದರ ಮೂಲಕ ನೀವು ಆನ್ಲೈನ್ ನಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.