ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ 16 ಲಕ್ಷ ರೈತ ಕುಟುಂಬಗಳಿಗೆ ನೀಡುತ್ತಿರುವ ಬರ ಪರಿಹಾರ ಹಣದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ರೈತರಿಗೆ ಬರ ಪರಿಹಾರ ನೀಡಲು ಎಷ್ಟು ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಏನು ಕ್ರಮಗಳನ್ನು ಕೈಗೊಂಡಿದ್ದಾರೆ ಹಾಗೂ ಯಾವ ಯಾವ ಬೆಳೆಗಳಿಗೆ ಎಷ್ಟು ಹಣವನ್ನು ಬರ ಪರಿಹಾರವಾಗಿ ನೀಡಲಿದ್ದಾರೆ ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಸರ್ಕಾರವು ರೈತರಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ ಎಂದೆನ್ನಬಹುದು. ಹೌದು, 3,454 ಕೋಟಿ ಬರ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ರಾಜ್ಯದಲ್ಲಿರುವ 32 ಲಕ್ಷಕ್ಕೂ ಹೆಚ್ಚಿನ ರೈತರುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವರಾಗಿರುವಂತಹ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ರೈತ ಕುಟುಂಬಗಳಿಗೆ ತಲಾ 3,000 ರೂ. ದಂತೆ 16 ಲಕ್ಷ ರೈತ ಕುಟುಂಬಗಳಿಗೆ ಬರ ಪರಿಹಾರ ಹಣವನ್ನು ನೀಡುವುದಕ್ಕೆ ಮುಂದಾಗಿದೆ.
ಕರ್ನಾಟಕಕ್ಕೆ 3,454 ಕೋಟಿ ಹಣವನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಯೋಜನೆ ಅಡಿಯಲ್ಲಿ ಈ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ 32 ಲಕ್ಷ ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ ಆದರೆ ಕೆಲವು ಕಾರಣಾಂತರಗಳಿಂದ ಇನ್ನು 2 ಲಕ್ಷ ರೈತ ಕುಟುಂಬದವರಿಗೆ ಬರ ಪರಿಹಾರದ ಹಣವು ಜಮಾ ಆಗಿಲ್ಲ ಈ ಒಂದು ಸಮಸ್ಯೆಯನ್ನು ಶೀಘ್ರವಾಗಿ ಪರಿಹಾರ ಮಾಡಲು ಸರ್ಕಾರವು ಎಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದೆ. ಮುಂದಿನ ವಾರದೊಳಗೆ ಉಳಿದಿರುವಂತಹ ಎಲ್ಲ ರೈತ ಕುಟುಂಬದವರಿಗೆ ಬರಬೇಕಾದ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗುವುದು.
Drought Relief: 16 ಲಕ್ಷ ರೈತ ಕುಟುಂಬಗಳಿಗೆ 3,000 ಬರ ಪರಿಹಾರ ಹಣ ಜಮಾ.!
ರೈತರಿಗೆ 460 ಕೋಟಿ ಹಣ ಪರಿಹಾರ ಘೋಷಣೆ.!!
ಬರಗಾಲ ಬಾದಿತ ರಾಜ್ಯಗಳ 16 ಲಕ್ಷ ಚಿಕ್ಕ ಹಾಗೂ ಅತಿ ಚಿಕ್ಕ ವನ ಬೇಸಾಯ ರೈತ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡಲು ರಾಜ್ಯ ಸರ್ಕಾರವು ತೀರ್ಮಾನ ಮಾಡಿದೆ. ಆದಕಾರಣ ಈ ರೈತ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 3,000 ರೂ. ಅನ್ನು ನೀಡುತ್ತದೆ. ಈ ಒಂದು ಯೋಜನೆಗೆ 460 ಕೋಟಿ ಹಣವನ್ನು ನೀಡಲಿದೆ ಮತ್ತು ಎನ್ ಡಿ ಆರ್ ಎಫ್ NDRF, ಎಸ್ ಡಿ ಆರ್ ಎಫ್ SDRF ಇಂದ ಕೂಡ ಹಣವನ್ನು ಒದಗಿಸಲಾಗುವುದು ಎಂದು ತಿಳಿಸಿದೆ.
ಬರದ ಬಿರುಗಾಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಹಾನಿಯನ್ನು ಉಂಟು ಮಾಡುತ್ತಿದ್ದು ನಮ್ಮ ರಾಜ್ಯದ 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ತಿಳಿಸಿದೆ. ಇದರ ಪೈಕಿ 196 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಿದ್ದಾರೆ.
ರೈತರಿಗೆ ಬರದ ಕಾರಣದಿಂದ ದಯ ನಷ್ಟ ಆಗಿರುವುದಕ್ಕಾಗಿ 44 ಲಕ್ಷ ರೈತ ಕುಟುಂಬಗಳಿಗೆ ಬರ ಪರಿಹಾರ ನೀಡಬೇಕೆಂದು ಪಟ್ಟಿಯನ್ನು ಮಾಡಿದೆ. ಪಟ್ಟಿಯಲ್ಲಿ ಸೇರ್ಪಡೆ ಮಾಡಲಾರದ ಹಲವಾರು ತಾಲೂಕುಗಳಲ್ಲಿ ಮಳೆಯು ಇಲ್ಲದ ಕಾರಣ ಬೆಳೆ ಹಾನಿ ಹೊಂದಿದವರನ್ನು ಗಮನದಲ್ಲಿಟ್ಟುಕೊಂಡು ಮಳೆಯಾಧಾರಿತ ಬೆಳೆಗಳಿಗೂ ಕೂಡ ಪರಿಹಾರ ಹಣವನ್ನು ನೀಡಬೇಕೆಂದು ನಿರ್ಧರಿಸಿದೆ.
ಈ ಒಂದು ಬರ ಪರಿಹಾರ ಯೋಜನೆ ಅಡಿಯಲ್ಲಿ 1.63 ಲಕ್ಷ ಅರ್ಹ ರೈತರಿಗೆ ಪರ ಪರಿಹಾರದ ಹಣವನ್ನು ನೀಡಬೇಕು ಎಂದು ಅಂದುಕೊಂಡಿದ್ದಾರೆ. 2 ಲಕ್ಷ ನೀರಾವರಿ ಹೆಕ್ಟರ್ ಪ್ರದೇಶವನ್ನು ಈ ಒಂದು ಯೋಜನೆಯು ಒಳಗೊಂಡಿದೆ. ರಾಜ್ಯದಲ್ಲಿರುವ ಬರಪೀಡಿತ ರೈತರುಗಳಿಗೆ ಈ ಮಾಡಿರುವಂತಹ ಘೋಷಣೆಯು ಆರ್ಥಿಕವಾಗಿ ಸಹಾಯವಾಗಲಿದೆ ಎಂದು ಸರ್ಕಾರವು ಭಾವಿಸಿದೆ.
ಬೆಳೆ ನಷ್ಟ ಪರಿಹಾರ.??
• ನೀರಾವರಿಯ ಪ್ರದೇಶಗಳ ಬೆಳೆಗಳಿಗೆ – 8,500 ರೂ.
• ಮಳೆಯಾಸ್ರಿತಗಳ ಬೆಲೆಗಳಿಗೆ – 17,000 ರೂ.
• ದೀರ್ಘಾವಧಿಯ ”ತೋಟಗಾರಿಕೆ” ಬೆಳೆಗಳಿಗೆ – 22,500 ರೂ.
ಈ ಕೆಳಗಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ.
• ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು18,172 ಕೋಟಿ ಹಣವನ್ನು ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ.
• NDRF ಮತ್ತು SDRF ನಿಯಮಗಳ ಅನುಗುಣವಾಗಿ ಬರ ಪರಿಹಾರ ನೀಡುವ ರೈತರುಗಳ ವೆಚ್ಚ ಗಳಿಗೆ ರಾಜ್ಯ ಸರ್ಕಾರವು ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದೆ.
• ಈ ಬರ ಪರಿಹಾರವನ್ನು ನೀಡುವ ನಿಬಂಧನೆಯನ್ನು ತಿರಸ್ಕರಿಸುವಂತೆ ಗೃಹ ಸಚಿವರಿಗೆ ರಾಜ್ಯ ಸರ್ಕಾರವು ಮನವಿಯನ್ನು ಕೋರಲಾಗಿದೆ.
ಸ್ನೇಹಿತರೆ, ಈ ಒಂದು ಲೇಖನವು ರೈತರಿಗೆ ಬರ ಪರಿಹಾರ ನೀಡಲು ಎಷ್ಟು ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಏನು ಕ್ರಮಗಳನ್ನು ಕೈಗೊಂಡಿದ್ದಾರೆ ಹಾಗೂ ಯಾವ ಯಾವ ಬೆಳೆಗಳಿಗೆ ಎಷ್ಟು ಹಣವನ್ನು ಬರ ಪರಿಹಾರವಾಗಿ ನೀಡಲಿದ್ದಾರೆ ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.