ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ Ganga Kalyana ಯೋಜನೆ ಅಡಿಯಲ್ಲಿ ಸರ್ಕಾರದಿಂದ ಸಹಾಯಧನವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, Ganga Kalyana ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಕರ್ನಾಟಕ ರಾಜ್ಯ ಸರ್ಕಾರವು ಈ ಗಂಗಾ ಕಲ್ಯಾಣ ಯೋಜನೆಯನ್ನು ರೈತರುಗಳಿಗೆ ಆರ್ಥಿಕವಾಗಿ ನೆರವು ನೀಡುವ ಸಲುವುದಕ್ಕಾಗಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ರೈತರುಗಳು ಉಚಿತ ಬೋರ್ವೆಲ್ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಒಂದು ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆಯುವ ಅರ್ಹತೆ ಮತ್ತು ವಿಧಾನವನ್ನು ತಿಳಿಸಿದ್ದೇವೆ ಆದಕಾರಣ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್.
ಒಂದು ಗಂಗಾ ಕಲ್ಯಾಣ ಯೋಜನೆಯನ್ನು ಕರ್ನಾಟಕ ಮಿನಿ ಡಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆಯ ಅಡಿಯಲ್ಲಿ ಜಾರಿಗೆ ತರಲಾಗಿದೆ. ಈ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೊಳವೆ ಬಾವಿ ಮತ್ತು ತೆರೆದ ಬಾವಿ ಅನ್ನು ಸ್ಥಾಪನೆ ಮಾಡಿಕೊಳ್ಳಲು ಮತ್ತು ಪಂಪ್ಸೆಟ್ಟುಗಳನ್ನು, ಎಕ್ಸೆರಿಸ್ ಗಳನ್ನು ಸ್ಥಾಪಿಸಿಕೊಳ್ಳಲು ಹೊಲಗಳ ಕೃಷಿಯ ಬೆಳೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿಕೊಳ್ಳಬಹುದು.
ಪ್ರತಿಯೊಂದು ಬೋರ್ವೆಲ್ ಹಾಕಿಸುವವರಿಗೆ ರಾಜ್ಯ ಸರ್ಕಾರ 1.50 ಲಕ್ಷದವರೆಗೆ ಉಚಿತ ಸಹಾಯಧನವನ್ನು ನೀಡಲು ತೀರ್ಮಾನ ಮಾಡಲಾಗಿದೆ ಈ ಹಣದಿಂದ ಬೋರ್ವೆಲ್ ಕೊರೆದುಕೊಳ್ಳಲು, ಪಂಪ್ ಸರಬರಾಜುಗೆ ಹಾಗೂ ವಿದ್ಯುತ್ ಉಪಕರಣಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ಅರ್ಬನ್, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ 3.50 ಲಕ್ಷದವರೆಗೆ ಸಹಾಯಧನವನ್ನು ರಾಜ್ಯ ಸರ್ಕಾರವು ನೀಡುತ್ತಿದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ.??
• ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿ ಆಗಿರಬೇಕು.
• ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ಪ್ರಮಾಣದ ಕೃಷಿಕಾರರಾಗಿರಬೇಕು.
• ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷದ ಒಳಗಿನವರ ಆಗಿರಬೇಕು.
• ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 90 ಸಾವಿರ ಮತ್ತು ನಗರ ಪ್ರದೇಶಗಳಲ್ಲಿ 1.03 ಲಕ್ಷ ದಾಟಿರಬಾರದು.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.??
• ಆಧಾರ್ ಕಾರ್ಡ್.
• ಅರ್ಜಿ ಸಲ್ಲಿಕೆದಾರರ ಪ್ರಮಾಣ ಪತ್ರ.
• ಜಾತಿಯ ಪ್ರಮಾಣ ಪತ್ರ.
• ಆದಾಯ ಪ್ರಮಾಣ ಪತ್ರ.
• ಭೂ ಕಂದಾಯ ರಶೀದಿ ಪಾವತಿ.
• ಹೊಲದ ಕೂಡುವಿಕೆಯ ರಸ್ತೆ ಕಡತದ ನಕಲು.
• ಬ್ಯಾಂಕ್ ಪಾಸ್ ಬುಕ್.
• ಸುರಕ್ಷಿತ ಸ್ವಯಂ ಘೋಷಣಾ ಪತ್ರ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.??
• ಈ ಯೋಜನೆಯ ಅರ್ಜಿಯನ್ನು ಸಲ್ಲಿಸಲು https://kmdc.karnataka.gov.in/31/ganga-kalyana-schmeme/en ಈ ಅಧಿಕೃತವಾದ ವೆಬ್ ಸೈಟಿಗೆ ಹೋಗಿ.
• ಗಂಗಾ ಕಲ್ಯಾಣ ಯೋಜನೆಯ ಪುಟವನ್ನು ಆರಿಸಿರಿ.
• ಈ ಒಂದು ಯೋಜನೆಯ ಅರ್ಜಿಗೆ ಸಂಬಂಧ ಇರುವ ಪುಟವನ್ನು ನೋಡುತ್ತೀರಿ.
• ಕೇಳುವಂತಹ ಎಲ್ಲಾ ಅಗತ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತುಂಬಿರಿ.
• ಕೆಲವು ಕೇಳಿರುವಂತಹ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿರಿ.
• ನಂತರ ಸಬ್ಮಿಟ್ ಎನ್ನುವ ಆಯ್ಕೆಯನ್ನು ಆರಿಸಿರಿ.
ಸ್ನೇಹಿತರೆ, ಈ ಒಂದು ಲೇಖನವು Ganga Kalyana ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.