ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಿಮಗೆ ತಿಳಿದಿರುವ ಹಾಗೆ ಜೂನ್ ತಿಂಗಳ ಹಾಗೂ ಜುಲೈ ತಿಂಗಳ ( Gruhalakshmi Scheme ) ಗ್ರುಹಲಕ್ಷ್ಮೀ ಯೊಜನೆಯ ಹಣ ಇನ್ನು ಯಾರ ಖಾತೆಗೆ ಜಮಾ ಆಗಿಲ್ಲ ಈ ಎರಡು ತಿಂಗಳ ಹಣ ನಿಮ್ಮ ಖಾತೆಗೆ ಯಾವಾಗ ಬರಲಿದೆ..? ಮತ್ತು ( DBT Karnataka App ) ಅಲ್ಲಿ ( Status Check ) ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗಡೆ ತಿಳಿಸಿದ್ದೇವೆ ಓದಿರಿ.
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ‘ಗ್ರಹಲಕ್ಷ್ಮಿ ಯೋಜನೆ’ ಅನ್ನು ರೂಪಿಸಿದ್ದಾರೆ ಮಹಿಳೆಯರ ಆರ್ಥಿಕ ಸಬಲೀಕರಣದ ದ್ರುಷ್ಠಿಕೊನದಿಂದ ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಯಲ್ಲಿ ತಂದಿದ್ದಾರೆ ಮನೆ ಯಜಮಾನಿಯ ಪಾತ್ರ ಕುಟುಂಬದ ನಿರ್ವಹಣೆಯಲ್ಲಿ ತುಂಬಾ ದೊಡ್ಡದಾಗಿದೆ ಆದ ಕಾರಣದಿಂದ ಮನೆಯನ್ನು ನಡೆಸಲು ಅನುಕೂಲ ಆಗುವಂತೆ ಸರ್ಕಾರವು ಮನೆಯ ಯಜಮಾನ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಹಣವನ್ನು ಜಮಾ ಮಾಡಬೇಕು ಅಂತ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗ್ರಹಲಕ್ಷ್ಮಿ ಯೋಜನೆಯ ಮೂಲಕ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಅನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಈ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ ಈ ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರಿದಿಸುತ್ತಿದ್ದಾರೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ 4,000 ರೂ. ಹಣವು ಯಾವಾಗ ಜಮಾ ಆಗುತ್ತದೆ ಎಂದು ಫಲಾನುಭವಿ ಗೃಹಲಕ್ಷ್ಮಿಯರು ಕಾಯುತ್ತಿದ್ದಾರೆ.
ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣಕ್ಕಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲ ಗ್ರಹಲಕ್ಷ್ಮಿಯರಿಗೆ ಒಳ್ಳೆ ಸುದ್ದಿಯನ್ನು ನೀಡಿದ್ದಾರೆ ಈ ಜೂನ್ ಜುಲೈ ಎರಡು ತಿಂಗಳ ಒಟ್ಟು 4,000 ಹಣ ಶೀಘ್ರವೇ ಬಿಡುಗಡೆ ಆಗಲಿದೆಯಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಟ್ವಿಟರ್ ಅಕೌಂಟ್ ಅಲ್ಲಿ ವಿತ್ ಪ್ರೂಫ್ ಆಗಿ ತಿಳಿಸಿದ್ದಾರೆ ಅದೇ ರೀತಿ ಇತ್ತೀಚಿಗೆ ಆಗಿರುವ ಲೋಕಸಭಾ ಚುನಾವಣೆ ನೀತಿ ಸಂಹಿತೆಯಿಂದಾಗಿ 11ನೇ ಕಂತಿನ ಹಣ ತಡವಾಗಿದೆ ಎಂದು ಸ್ವತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಅದೇ ರೀತಿಯಾಗಿ ಜುಲೈ ತಿಂಗಳದ್ದು 15ನೇ ತಾರೀಖಿನ ಮುಂದೆ ಬಿಡುಗಡೆ ಮಾಡುತ್ತೇವೆ ಎಂದು ಸ್ವತಹ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಯಾರಿಗೆ ಜಮಾ ಆಗಿಲ್ಲ ಅವರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ ಆಮೇಲೆ ಬ್ಯಾಂಕಿಗೆ ಭೇಟಿ ನೀಡಿ ಈ ಕೆವೈಸಿ ಸಂಬಂಧಿತ ತೊಂದರೆಗಳನ್ನು ಬ್ಯಾಂಕ್ ಗಳಲ್ಲಿ ಪರಿಹಾರ ಮಾಡಿಕೊಳ್ಳಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮತ್ತು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಹೆಸರು ಎರಡು ಕಡೆ ಹೊಂದಾಣಿಕೆ ಆಗಿದೆಯಾ ಅಂತ ನೋಡಿ ಈ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ ಅವಾಗ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡುತ್ತಾರೆ.
ಗೃಹಲಕ್ಷ್ಮಿ ಯೋಜನೆಯ 4,000 ರೂ. ಹಣ ನಿಮ್ಮ ಖಾತೆಗೆ ಬಂದಿದೆಯಾ..? ನಿವು ಗ್ರಹಲಕ್ಷ್ಮಿ DBT Status Check ಮಾಡಬೇಕಾಗಿದೆಯಾ..? ಹಾಗಾದರೆ ಈ ಕೆಳಗಿನ ಲೇಖನವನ್ನು ಮತ್ತು ಹಂತಗಳನ್ನು ಓದಿ ಗೃಹಲಕ್ಷ್ಮಿ ಯೋಜನೆಯ DBT Status Check ಮಾಡುವುದನ್ನು ತಿಳಿದುಕೊಳ್ಳಿ.
ಹೌದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಆಗಿದೆಯಾ ಎಂದು ಹೇಗೆ ತಿಳಿದುಕೊಳ್ಳುವುದೆಂದು ತುಂಬಾ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಹೇಗೆ ಚೆಕ್ ಮಾಡಬೇಕು ಅಂತ ಗೊಂದಲದಲ್ಲಿದ್ದಾರೆ ಅದಕ್ಕೆ ನಾವು ಈ ಲೇಖನದಲ್ಲಿ ನಿಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ DBT Status Check ಮಾಡುವುದು ಹೇಗೆ ಎಂದು ಸಂಪೂರ್ಣ ಮಾಹಿತಿ ಮೂಲಕ ನಿಮಗೆ ತಿಳಿಸುತ್ತಿದ್ದೇವೆ.
ಗೃಹಲಕ್ಷ್ಮಿ DBT Status Check
ಗೃಹಲಕ್ಷ್ಮಿ ಯೋಜನೆಯ 4,000 ರೂ. ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆದಂತಹ DBT Karnataka App ನ ಮೂಲಕ ಈ ಕೆಳಗೆ ನೀಡಿರುವಂತಹ ಹಂತಗಳನ್ನು ಅನುಸರಿಸಿ ನಿಮ್ಮ ಗೃಹಲಕ್ಷ್ಮಿ DBT Status Check ಮಾಡಿಕೊಳ್ಳಿ.
ಹಂತ 1:- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ Google Play Store ನಾ ಓಪನ್ ಮಾಡಿಕೊಳ್ಳಿ ಆಮೇಲೆ DBT Karnataka ಅಂತ ಸರ್ಚ್ ಮಾಡಿ ಮತ್ತೆ DBT Karnataka App ನಾ Install ಮಾಡಿಕೊಳ್ಳಿ.
ಹಂತ 2:- App ನಾ ಓಪನ್ ಮಾಡಿಕೊಳ್ಳಿ ಓಪನ್ ಮಾಡಿದ ತಕ್ಷಣ Enter Adhaar Number ಅಂತ ಬರುತ್ತದೆ ಅಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ ಆಮೇಲೆ. GET OTP ಅಂತ ಇರುತ್ತದೆ ಇಲ್ಲಿ ಕ್ಲಿಕ್ ಮಾಡಿ.
ಹಂತ 3:- ಗೃಹಲಕ್ಷ್ಮಿ ಯೋಜನೆ ಫಲಾನುಭವಿಯ ಆಧಾರ್ ಸಂಖ್ಯೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ OTP ಬರುತ್ತೆ. ಆಮೇಲೆ ಅಲ್ಲಿ Enter OTP ಎಂದು ಇರುವಲ್ಲಿ ಮೊಬೈಲ್ ನಂಬರಿಗೆ ಬಂದಿರುವ 6 ಸಂಖ್ಯೆಯ OTPಯನ್ನು ಎಂಟರ್ ಮಾಡಿ. VERIFY OTP ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 4:- ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯ ವೈಯಕ್ತಿಕ ವಿವರವೂ ನಿಮಗೆ ಕಾಣುತ್ತದೆ ಮತ್ತೆ ಅಲ್ಲಿ ನಿಮ್ಮ ಮೊಬೈಲ್ ನಂಬರನ್ನು ಎಂಟರ್ ಮಾಡಲು ಸೂಚಿಸುರುತ್ತದೆ ಫಲಾನುಭವಿಯ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರನ್ನು Add ಮಾಡಿ ಮತ್ತೆ ಅಲ್ಲಿ OK ಬಟನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 5:- ಮುಂದೆ Create mPIN ಅಂತ ಇರುತ್ತೆ ಅಲ್ಲಿ Enter mPIN ಅಂತ ಇದ್ದಲ್ಲಿ ನಿಮ್ಮ ನೆಚ್ಚಿನ ಅಥವಾ ನಿಮಗೆ ನೆನಪಿನಲ್ಲಿ ಉಳಿಯುವ ಯಾವುದಾದರೂ ನಾಲ್ಕು ಅಂಕಿಗಳನ್ನು ಎಂಟರ್ ಮಾಡಿ ಮತ್ತೆ ಕೆಳಗಡೆ Conform mPIN ಎಂಬಲ್ಲಿ ಆ ನಾಲ್ಕು ಅಂತಿಗಳನ್ನು ಮತ್ತೆ ಎಂಟರ್ ಮಾಡಿ.
ಹಂತ 6:- ಅದೇ ಮುಂದೆ ಅಲ್ಲಿ Select Beneficiary ಅಂತ ಬರುತ್ತದೆ ಆಮೇಲೆ ನೀವು ಸೇರಿಸಿರುವಂತಹ ಗ್ರಹ ಲಕ್ಷ್ಮಿ ಯೋಜನೆ ಫಲಾನುಭವಿಯನ್ನು ಆಯ್ಕೆ ಮಾಡಿ Add ಮಾಡಿಕೊಳ್ಳಿ.
ಹಂತ 7:- ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನು ಆಯ್ಕೆ ಮಾಡಿದ ಮೇಲೆ Create ಮಾಡಿರುವಂತಹ mPIN ಅನ್ನು ಅಲ್ಲಿ ಎಂಟರ್ ಮಾಡಿಕೊಳ್ಳಿ ಆಮೇಲೆ ಅಲ್ಲಿ LOGIN ಬಟನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 8:- ಮೊದಲನೇ ಆಯ್ಕೆಯಾಗಿ ಅಲ್ಲಿ Payment Status ಅಂತ ಇರುತ್ತದೆ ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 9:- ಅಲ್ಲಿ ನಿಮ್ಮ ಮುಂದೆ ಕಾಣುತ್ತದೆ Gruhalakshmi DBT Status Check ಮಾಡುವ ಆಯ್ಕೆ ಅದರ ಮೇಲೆ ಕ್ಲಿಕ್ ನಾ ಮಾಡಿರಿ.
ಹಂತ 10:- ಅಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಹಣದ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ ಹಾಗೆ ಅಲ್ಲಿ ಯಾವ ದಿನಾಂಕದಂದು ಮತ್ತು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವದರ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲನೆಯನ್ನು ಮಾಡಿಕೊಳ್ಳಬಹುದು.