Gruhalakshmi Scheme: ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಬಿಡುಗಡೆಯಾಗಿದೆ.! ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ.!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಕಾಂಗ್ರೆಸ್ ಸರ್ಕಾರದ 5 ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಯ 10ನೇ ಕಂತಿನವರೆಗೂ ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಎಲ್ಲಾ ಫಲಾನುಭವಿ ಮಹಿಳೆಯರು 11 ಮತ್ತು 12ನೇ ಕಂತಿನ ಹಣಕ್ಕಾಗಿ ಎದುರು ನೋಡುತ್ತಿದ್ದರು ಈಗ 11 ಮತ್ತು 12ನೇ ಕಂತಿನ ರೂ 2,000 ಹಣವನ್ನು ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ರಾಜ್ಯ ಸರ್ಕಾರ ಡಿ ಬಿ ಟಿ ಮುಖಾಂತರ ಜಮಾ ಅನ್ನು ಮಾಡಲಾಗಿದೆ. ಇನ್ನೂ ಬರಬೇಕಾಗಿರುವ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆ ನೀಡಿದ್ದಾರೆ. ಈ ವಿಷಯದ ಕುರಿತಾದ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ತಪ್ಪದೆ ಓದಿರಿ.
ಹೌದು ಸ್ನೇಹಿತರೆ, ಈಗಾಗಲೇ ಫಲಾನುಭವಿ ಮಹಿಳೆಯರ ಖಾತೆಗೆ 11 ಮತ್ತು 12ನೇ ಕಂತಿನ ಹಣ ಬರಬೇಕಾಗಿತ್ತು ಆದರೆ ಈಗ 11ನೇ ಕಂತಿನ ರೂ 2,000 ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇನ್ನೂ 11ನೇ ಕಂತಿನ ಹಣ ಜಮಾ ಆಗದೇ ಇರುವಂತಹವರಿಗೆ ಮುಂದೆ ಜಮಾ ಮಾಡುವಂತಹ 12ನೇ ಕಂತಿನ ಹಣವನ್ನು ಒಟ್ಟಿಗೆ ಎರಡು ಕಂತಿನ ರೂ 4,000 ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈಗ ಈ ಗ್ರಹಲಕ್ಷ್ಮಿ ಯೋಜನೆಯ ಜಮಾ ಆಗುವಂತಹ ಹಣವನ್ನು ಅರ್ಹ ಪಲಾನುಭವಿಗಳು ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ಮೊಬೈಲ್ ಫೋನಿನಲ್ಲಿ ಜಮಾ ಆಗಿರುವಂತಹ ಹಣದ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪರಿಶೀಲನೆ ಮಾಡಿಕೊಳ್ಳಲು ಈ ಕೆಳಗಡೆ ನೀಡಿರುವ ಹಂತಗಳನ್ನು ಅನುಸರಿಸಿರಿಸುವ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ DBT Status ಅನ್ನು ಪರಿಶೀಲನೆ ಮಾಡುವುದು ಹೇಗೆ.?
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಗೂಗಲ್ ಪ್ಲೇ ಸ್ಟೋರ್ ಎಂಬ ಅಪ್ಲಿಕೇಶನ್ ಅನ್ನು ತೆರೆಯಿರಿ.
- ಗೂಗಲ್ ಪ್ಲೇ ಸ್ಟೋರ್ ನಲ್ಲಿ DBT Karnataka ಎನ್ನುವಂತಹ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿರಿ.
- ಇನ್ಸ್ಟಾಲ್ ಮಾಡಿದ ನಂತರ ಡಿ ಬಿ ಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
- ಓಪನ್ ಮಾಡಿದ ಮೇಲೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯ ಆಧಾರ್ ಸಂಖ್ಯೆಯನ್ನು ಅಲ್ಲಿ ಹಾಕಿರಿ.
- ಆ ಆಧಾರ್ ಕಾರ್ಡಿಗೆ ಲಿಂಕ್ ಮಾಡಿಸಿರುವಂತಹ ಮೊಬೈಲ್ ಸಂಖ್ಯೆಗೆ OTP ಬರಲಾಗುವುದು ಆ ಒಟಿಪಿಯನ್ನು ನಮೂದಿಸಿರಿ.
- ಮುಂದೆ ನಾಲ್ಕು ಅಂಕಿಯ mPIN ಅನ್ನು ಕ್ರಿಯೇಟ್ ಮಾಡಿಕೊಂಡು ಅದನ್ನು ನೆನಪಿನಲ್ಲಿಡಿ.
- ನಂತರ ಅಲ್ಲಿ ತೆರೆಯುವಂತಹ ಪೇಜ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಮತ್ತು ಅಣ್ಣ ಭಾಗ್ಯ ಯೋಜನೆಯ ಎಲ್ಲಾ ಕಂತಿನ ಹಣದ ಸಂಪೂರ್ಣವಾದ ಮಾಹಿತಿಯನ್ನು ನೀವು ಕಾಣಬಹುದು.
ಸ್ನೇಹಿತರೆ, ಈ ಒಂದು ಲೇಖನವು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವನ್ನು ಈಗಾಗಲೇ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಮತ್ತು 12ನೇ ಕಂತಿನ ಹಣದ ಬಗ್ಗೆಗಿನ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಏನು ಹಾಗೂ ಜಮಾ ಆಗುವ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.