Gruhalakshmi Scheme: ಮನೆ ಯಜಮಾನಿಯರಿಗೆ ಸಿಹಿ ಸುದ್ದಿ ಗೃಹಲಕ್ಷ್ಮಿ ಒಟ್ಟು 4,000 ರೂ‌. ಹಣ ಜಮಾ ಆಗುವ ದಿನಾಂಕ ಘೋಷಣೆ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ 11 ಮತ್ತು 12ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ ಕಳೆದು ಎರಡು ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡಲಿದ್ದಾರೆ ಮತ್ತು ಬಿಡುಗಡೆ ಮಾಡುವ ದಿನಾಂಕ ಯಾವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ರಾಜ್ಯ ಸರ್ಕಾರವು ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿ ಮಹಿಳೆಯರುಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ. ಆದರೆ ಇವಾಗ ರಾಜ್ಯ ಸರ್ಕಾರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಹಿಂದೆ ಹೇಳಿರುವ ಹಾಗೆ ಆಗಸ್ಟ್ ಮೊದಲ ವಾರದಲ್ಲಿ ಹಣ ಜಮಾ ಮಾಡುತ್ತೀವಿ ಎಂದು ಹೇಳಿದ್ದರು ಹೇಳಿಕೆಯ ಅನುಗುಣವಾಗಿ ನಾಳೆ ಅಥವಾ ನಾಡಿದ್ದು ಎರಡು ದಿನಗಳ ಒಳಗೆ ಬರಬೇಕಿರುವ 11 ಮತ್ತು 12ನೇ ಕಂತಿನ ಒಟ್ಟು 4,000 ರೂ. ಹಣವನ್ನು ಜಮಾ ಮಾಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಇವಾಗ ಹಲವಾರು ಹಗರಣಗಳು ಕಂಡು ಬರುತ್ತಿದ್ದು ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಹಣವು ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಾಧ್ಯವಾಗಿದ್ದಿಲ್ಲ. ಆದರೆ ಇದೀಗ ಇನ್ನು ಎರಡು ದಿನಗಳಲ್ಲಿ ಬಾಕಿ ಇರುವ ಎರಡು ಕಂತಿನ ಹಣವನ್ನು ಒಟ್ಟಿಗೆ ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ.!!

ಹೌದು ಸ್ನೇಹಿತರೆ, ರಾಜ್ಯ ಸರ್ಕಾರವು 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿರುವ ಫಲಾನುಭವಿ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದನ್ನಬಹುದು. ಬಾಕಿ ಇರುವ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಕರೆದೆರಡು ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅಗಸ್ಟ್ ತಿಂಗಳಿನ ಮೊದಲ ವಾರದೊಳಗೆ ಒಟ್ಟಿಗೆ ಎರಡು ಕಂತಿನ 4,000 ರೂ. ಹಣವನ್ನು ಜಮಾ ಮಾಡುತ್ತಿವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಮತ್ತು ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ.??

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಕಲ್ಬುರ್ಗಿ, ಗದಗ್, ರಾಯಚೂರ್, ಬಳ್ಳಾರಿ, ಯಾದಗಿರಿ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಕೋಲಾರ್, ಬೆಂಗಳೂರು ಈ ಎಲ್ಲ ಜಿಲ್ಲೆಗಳಿಗೆ ಅಗಸ್ಟ್ 7 ರಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡುವುದಾಗಿ ತಿಳಿಸಿದೆ ಮತ್ತು ಉಳಿದಿರುವಂತಹ ಎಲ್ಲ ಜಿಲ್ಲೆಗಳಿಗೆ ಅಗಸ್ಟ್ 8 ರಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡುವುದಾಗಿ ತಿಳಿಸಿದ್ದಾರೆ.

ಈ ಮೂಲಕ ರಾಜ್ಯ ಸರ್ಕಾರವು ಇರುವ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಈ ಒಂದು ಯೋಜನೆಯ ಫಲಾನುಭವಿಗಳಿಗೆ ಅನುಕೂಲವಾಗಲೆಂದು ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 11 ಮತ್ತು 12ನೇ ಕಂತಿನ ಹಣವನ್ನು ಆಗಸ್ಟ್ ಮೊದಲ ವಾರದೊಳಗೆ ಎಲ್ಲ ಫಲಾನುಭವಿಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವುದಾಗಿ ತಿಳಿಸಿದೆ.

ಸ್ನೇಹಿತರೆ, ಈ ಒಂದು ಲೇಖನವು ಗೃಹಲಕ್ಷ್ಮಿ ಯೋಜನೆಯ ಕಳೆದು ಎರಡು ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡಲಿದ್ದಾರೆ ಮತ್ತು ಬಿಡುಗಡೆ ಮಾಡುವ ದಿನಾಂಕ ಯಾವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment