Indian Navy Recruitment 2024: ಭಾರತೀಯ ನೌಕಾಪಡೆಯಲ್ಲಿ ಹುದ್ದೆಗಳ ನೇಮಕಾತಿ! 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು! ಇಲ್ಲಿದೆ ಪೂರ್ತಿ ವಿವರ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಾವು ಈ ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಭಾರತೀಯ ನೌಕಾಪಡೆಯಲ್ಲಿ ಎಸ್ಎಸ್ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಹಾಕಬಹುದು ಆಗಿದೆ. ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಿಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ಸಂಬಳದ ವಿವರ, ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳಲಾಗುವುದು, ಪ್ರಮುಖ ದಿನಾಂಕಗಳು ಯಾವುವು ಮತ್ತು ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆಲ್ಲರಿಗೂ ತಿಳಿಸಿದ್ದೇವೆ ಆದ ಕಾರಣದಿಂದ ಈ ಒಂದು ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿರಿ.
- ಇಲಾಖೆ: ಭಾರತೀಯ ನೌಕಾಪಡೆಯ ಇಲಾಖೆ.
- ಹುದ್ದೆಗಳ ವಿವರ: ಭಾರತೀಯ ನೌಕಾಪಡೆಯ ಎಸ್ ಎಸ್ ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳು.
- ಆಯ್ಕೆಯಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಭಾರತದಾದ್ಯಂತ ಕಾರ್ಯವನ್ನು ನಿರ್ವಹಿಸಬಹುದಾಗಿದೆ.
- ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬೇಕಾಗಿರುತ್ತದೆ.
ಶೈಕ್ಷಣಿಕ ಅರ್ಹತೆ: ಅರ್ಜಿಯನ್ನು ಆಹ್ವಾನಿಸಲಾಗಿರುವ ಭಾರತೀಯ ನೌಕಾಪಡೆಯ ಎಸ್ಎಸ್ ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳಿಗೆ 12ನೇ ತರಗತಿಯನ್ನು ಪಾಸ್ ಆಗಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಆಗಿದೆ.
ವಯಸ್ಸಿನ ಮಿತಿ: ಈ ಎಸ್ಎಸ್ ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು ವಯಸ್ಸು 18 ರಿಂದ 24 ವರ್ಷದ ಒಳಗಿರುವಂಥವರು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಈ ಎಸ್ಎಸ್ ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಯಾವುದೇ ಅರ್ಜಿ ಶುಲ್ಕವನ್ನು ನೀಡುವುದು ಬೇಕಾಗಿಲ್ಲ.
ಸಂಬಳದ ವಿವರ: ಭಾರತೀಯ ನೌಕಾಪಡೆಯ ಎಸ್ಎಸ್ಆರ್ ವೈದಕೀಯ ಸಹಾಯಕರು ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ರೂ 14,600 ರಿಂದ 69,100 ರೂ ವರೆಗೆ ಮಾಸಿಕ ವೇತನವನ್ನು ಭಾರತೀಯ ನೌಕಾಪಡೆಯು ಸಂಬಳವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಈ ಭಾರತೀಯ ನೌಕಾಪಡೆಯ ಎಸ್ಎಸ್ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪದವಿ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಮೂಲಕ ಮೆರಿಟ್ ಲಿಸ್ಟ್ ತಯಾರಿಸಿ, ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಮಾಡಿ ಸಂದರ್ಶನ ನಡೆಸುವುದರ ಮೂಲಕ ಈ ನೇಮಕಾತಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸುವುದು?
ನಾವು ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಹೋಗುವುದರ ಮೂಲಕ ಎಲ್ಲ ದಾಖಲೆಗಳ ವಿವರವನ್ನು ಭರ್ತಿ ಮಾಡಿಕೊಂಡ ಈ ಭಾರತೀಯ ನೌಕಾಪಡೆಯ ಎಸ್ ಎಸ್ ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದಾಗಿದೆ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ!
ಪ್ರಮುಖ ದಿನಾಂಕಗಳು?
- 7 ಸಪ್ಟೆಂಬರ್ 2024 ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಅಭ್ಯರ್ಥಿಗಳಿಗೆ ಆರಂಭದ ದಿನಾಂಕವಾಗಿರುತ್ತದೆ.
- 17 ಸಪ್ಟಂಬರ್ 2024 ಈ ದಿನಾಂಕವು ಭಾರತೀಯ ನೌಕಾಪಡೆಯ ಎಸ್ ಎಸ್ ಆರ್ ವೈದ್ಯಕೀಯ ಸಹಾಯಕರು ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಕೊನೆಯ ದಿನಾಂಕವಾಗಿರುತ್ತದೆ.