Labour card scholarship 2024: ಲೇಬರ್ ಕಾರ್ಡ್ ಹೊಂದಿರುವವರಿಗೆ ₹11,000 ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್.!
Labour card scholarship 2024: ಎಲ್ಲ ಸ್ನೇಹಿತರಿಗೂ ನಮಸ್ಕಾರ, ರಾಜ್ಯ ಸರ್ಕಾರವು ಅರ್ಹ ಜನರಿಗೆ ಲೇಬರ್ ಕಾರ್ಡನ್ನು ನೀಡುವುದರ ಮೂಲಕ ಅಂಥವರಿಗೆ ಹಲವಾರು ರೀತಿಯ ಸಹಾಯವನ್ನು ಮಾಡಲಾಗುತ್ತಿದೆ. ಅದೇ ರೀತಿ ಲೇಬರ್ ಕಾರ್ಡ್ ಹೊಂದಿರುವವರಿಗೆ 1,100 ರೂ ಇಂದ 11,000 ರೂ ವರೆಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣವನ್ನು ನೀಡಲಾಗುತ್ತಿದೆ. ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ತಪ್ಪದೇ ಓದಿರಿ.
ಕಾರ್ಮಿಕ ವರ್ಗದವರು ಹಾಗೂ ಕಾರ್ಮಿಕರ ಕಾರ್ಡ್ ಹೊಂದಿರುವಂತಹ ವಿದ್ಯಾರ್ಥಿಗಳು ಮಾತ್ರ ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಹಣವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಸರ್ಕಾರವು ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯೋಗವಾಗಲಿ ಎಂದು ಮತ್ತು ಆರ್ಥಿಕ ಶಿಕ್ಷಣವು ಸುಧಾರಿಸಲು ಎನ್ನುವುದಕ್ಕಾಗಿ ನೀಡಲಾಗುತ್ತಿದೆ.
ಈ ಸ್ಕಾಲರ್ಶಿಪ್ ಹಣವನ್ನು ಪಡೆದುಕೊಳ್ಳಲು ಅರ್ಹತೆ ಏನು.!
- ಮುಖ್ಯವಾಗಿ ಕರ್ನಾಟಕದ ನಿವಾಸಿ ಆಗಿರಬೇಕು.
- SCST ವರ್ಗಕ್ಕೆ ಸೇರಿರುವಂತಹ ವಿದ್ಯಾರ್ಥಿಗಳು 45% ಅಂಕಗಳನ್ನು ಪಡೆದಿರಬೇಕು.
- ಮತ್ತು ಉಳಿದ ಎಲ್ಲಾ ವರ್ಗದ ವಿದ್ಯಾರ್ಥಿಗಳು 50% ಅಂಕಗಳನ್ನು ಪಡೆದಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 35,000 ರೂ ಗಿಂತ ಒಳಗಿರಬೇಕು.
- ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಅನ್ನು ಹೊಂದಿರಬೇಕು.
ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು.?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಶೈಕ್ಷಣಿಕ ಪ್ರಮಾಣ ಪತ್ರ
- ಪೋಷಕರ ಕಾರ್ಮಿಕರ ಕಾರ್ಡ್
- ಜಾತಿ ಪ್ರಮಾಣ ಪತ್ರ
- ನಿವಾಸದ ಪ್ರಮಾಣ ಪತ್ರ
- ವಾರ್ಷಿಕ ಆದಾಯದ ಪುರಾವೆಗಳು
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನ ಹಣ.???
- 1 ರಿಂದ 4 ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ: 1,100 ರೂ.
- 5 ರಿಂದ 8 ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 1,250 ರೂ.
- 9 ಮತ್ತು 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ: 3,000 ರೂ.
- 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 4,600 ರೂ.
- ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ: 10,000 ರೂ.
- ಬಿ ಟೆಕ್ ಮತ್ತು ಬಿ ಇ ಓದುವವರಿಗೆ: 10,000 ರೂ.
- ಐಟಿಐ ಅನ್ನು ಓದುತ್ತಿರುವಂತವರಿಗೆ: 4,600 ರೂ.
- ಬಿಎಸ್ಸಿ ಹಾಗೂ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಅವರಿಗೆ: 10,000 ರೂ.
- ವೈದ್ಯಕೀಯ ಶಿಕ್ಷಣದಲ್ಲಿ ಇರುವವರಿಗೆ: 11,000 ರೂ.
- ಪಿ ಎಚ್ ಡಿ ಹಾಗೂ ಎಂ ಪಿಲ್ ಅವರಿಗೆ: 11,000 ರೂ.
- ಬಿ ಎಡ್ ದವರಿಗೆ: 6,000 ರೂ.
- ಎಲ್ ಎಲ್ ಬಿ ಮತ್ತು ಎಲ್ ಎಲ್ ಎಂ ಅವರಿಗೆ: 10,000 ರೂ.
- ಹಾಗೂ ಡಿ ಎಡ್ ದವರಿಗೆ: 4,600 ರೂ.
ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿಯನ್ನು ಹೇಗೆ ಸಲ್ಲಿಸುವುದು.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಈ ಅಧಿಕೃತವಾದ http://klwbapps.karnataka.gov.in ವೆಬ್ಸೈಟ್ಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಕೆಗಾಗಿ ಕೇಳಿರುವಂತಹ ಎಲ್ಲ ದಾಖಲೆಗಳ ವಿವರವನ್ನು ಭರ್ತಿ ಮಾಡಿ ಅರ್ಜಿ ನಮೂನೆಯನ್ನು ಪೂರ್ತಿಗೊಳಿಸಿ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ನೇಹಿತರೆ, ಈ ಒಂದು ಲೇಖನವು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಹಣವನ್ನು ಪಡೆದುಕೊಳ್ಳಲು ಯಾರು ಅರ್ಹರು, ಇಸ್ ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಂತಹ ದಾಖಲೆಗಳು ಯಾವವು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯು ನಿಮಗೆ ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.