NF Scholarship 2024: ಇಂತಹ ವಿದ್ಯಾರ್ಥಿಗಳಿಗೆ ₹35,000 ಸ್ಕಾಲರ್ಶಿಪ್ ಸಿಗಲಿದೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ.!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸ ಹೊರಟಿರುವ ಮಾಹಿತಿಯು ಏನೆಂದರೆ 2024 ಮತ್ತು 25ನೇ ಸಾಲಿನ ನ್ಯಾಷನಲ್ ಫೆಲೋಶಿಪ್ ಸ್ಕಾಲರ್ಶಿಪ್ ಅಂಡ್ ಹೈಯರ್ ಎಜುಕೇಶನ್ ಆಫ್ ಎಸ್ ಟಿ ಗಳಿಗೆ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಈ ಸ್ಕಾಲರ್ಶಿಪ್ ಹಣವನ್ನು ನೀಡಲಾಗುತ್ತಿದೆ. ಈ ಸ್ಕಾಲರ್ಶಿಪ್ ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆ ಏನು ಹಾಗೂ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಲು ಇರುವಂತಹ ಪ್ರಮುಖ ದಿನಾಂಕಗಳು ಯಾವವು ಎನ್ನುವುದನ್ನು ತಿಳಿದುಕೊಳ್ಳಲು ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿರಿ.
NF Scholarship 2024: ನ್ಯಾಷನಲ್ ಫೆಲೋಶಿಪ್ ಸ್ಕಾಲರ್ಶಿಪ್ ಫಾರ್ ಹೈಯರ್ ಎಜುಕೇಶನ್ ಎಸ್ ಟಿ ವಿಧ್ಯಾರ್ಥಿಗಳ 2024 ಮತ್ತು 25ನೇ ಸಾಲಿನ ಬುಡಕಟ್ಟು ಜನಾಂಗದ ವ್ಯವಹಾರಗಳ ಅಧಿಕೃತ ಸಚಿವಾಲಯವು ನೀಡುತ್ತಿರುವ ಅವಕಾಶವಾಗಿದ್ದು. ಈ ಒಂದು ಸ್ಕಾಲರ್ಶಿಪ್ ವೇತನವನ್ನು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಫಿಲೋಸಿಪ್ಗಳು ಮತ್ತು ಈ ಸ್ಕಾಲರ್ಶಿಪ್ ವೇತನವನ್ನು ಭಾರತ ಸರ್ಕಾರ ನೀಡಲಾಗುತ್ತಿದೆ. ಈ ಒಂದು ಸ್ಕಾಲರ್ ಶಿಪ್ ವೇತನದ ಮುಖ್ಯ ಉದ್ದೇಶ ಏನೆಂದರೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಒದಗಿಸುವ ಸಲುವಾಗಿ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಮುಂದೆ ಬರಲಿ ಮತ್ತು ತಮ್ಮ ವೃತ್ತಿಪರ ಜೀವನವನ್ನು ನಡೆಸಿಕೊಳ್ಳಲಿ ಎನ್ನುವ ಸಲುವಾಗಿ ಈ ಸ್ಕಾಲರ್ಶಿಪ್ ವೇತನವನ್ನು ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಬಹುದು.
NF Scholarship 2024: ಈ ಸ್ಕಾಲರ್ಶಿಪ್ ಗೆ ಇರಬೇಕಾದ ಅರ್ಹತೆ ಏನು.!
- ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವೇತನವನ್ನು ಪಡೆದುಕೊಳ್ಳಲು ಪದವಿ ಪೂರ್ವ ಅಥವಾ ಸ್ನಾತಕೋತ್ತರ ಪದವಿಗಳನ್ನು ಓದುತ್ತಿರಬೇಕು.
- ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ವಯಸ್ಸಿನ ಮಿತಿಯು ನ್ಯಾಷನಲ್ ಫೆಲೋಶಿಪ್ ಸ್ಕಾಲರ್ಶಿಪ್ ಅಂಡ್ ಹೈಯರ್ ಎಜುಕೇಶನ್ ಆಫ್ ಎಸ್ ಟಿ ಗಳ ಅಧಿ ಸೂಚನೆ ಪ್ರಕಾರ ಇರಬೇಕು.
- ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು NF ಸಚಿವಾಲಯದ ಅಧಿಕೃತ ಸಂಸ್ಥೆಗಳಲ್ಲಿ ಮತ್ತು ಪಿ ಎಚ್ ಡಿ ಕಾರ್ಯಕ್ರಮಗಳಲ್ಲಿ ಕನಿಷ್ಠ 55 ಅಂಕಗಳೊಂದಿಗೆ ದಾಖಲೆ ಹೊಂದಿರಬೇಕಾಗಿರುತ್ತದೆ.
- ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕೆಳಗಿರಬೇಕು.
ಈ ಸ್ಕಾಲರ್ಶಿಪ್ ನ ವೇತನ ಎಷ್ಟು.??
ರೂ 35,000 ವರೆಗೆ ಸರ್ಕಾರ ಅನುದಾನವನ್ನು ನೀಡಲಾಗುವುದು ಮತ್ತು ವಾರ್ಷಿಕ ಅನುದಾನವಾಗಿ ರೂ 25,000 ವರೆಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು.??
- ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಈಗಾಗಲೇ ದಿನಾಂಕ ಆರಂಭವಾಗಿದೆ.
- 31 ಅಕ್ಟೋಬರ್ 2024 ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಹಾಕಲು ಕೊನೆಯ ದಿನಾಂಕವಾಗಿದೆ.
ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ.?
ಮೊದಲು ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಈ ಅಧಿಕೃತವಾದ http://www.b4s.in/nwmd/NFTS2 ವೆಬ್ಸೈಟ್ಗೆ ಹೋಗಿ ಕೇಳಿದಂತಹ ವೈಯಕ್ತಿಕ ದಾಖಲೆಗಳ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕವೇ ಈ ಸ್ಕಾಲರ್ಶಿಪ್ಗೆ ಅರ್ಜಿಯನ್ನು ಹಾಕಬಹುದಾಗಿದೆ.