NSP Scholarship 2024: ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಸ್ಕಾಲರ್ಶಿಪ್! ಇಲ್ಲಿದೆ ಪೂರ್ತಿ ವಿವರ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸ ಹೊರಟಿರುವ ವಿಷಯವೇನೆಂದರೆ ರಾಷ್ಟ್ರೀಯ ಸ್ಕಾಲರ್ಶಿಪ್ ಅಧಿಕೃತ ಪೋರ್ಟಲ್ ರಾಜಮಟ್ಟದ, ಕೇಂದ್ರ ಮಟ್ಟದ ಎನ್ ಎಸ್ ಪಿ ವಿದ್ಯಾರ್ಥಿ ವೇತನವನ್ನು ಮತ್ತು ಯುಜಿಸಿ ವಿದ್ಯಾರ್ಥಿ ವೇತನವನ್ನು ಸೇರಿದಂತೆ ಇನ್ನೂ ಹಲವು ರೀತಿಯ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. NSP ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಲು ಅಪ್ಲಿಕೇಶನ್ ಪ್ರಕ್ರಿಯೆ ತೆರೆಯಲಾಗಿದೆ. ನ್ಯಾಷನಲ್ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ ವೇತನಕ್ಕಾಗಿ ಅರ್ಹ ಅಭ್ಯರ್ಥಿಗಳು ತಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
NSP Scholarship 2024: ಈ ಎನ್ ಎಸ್ ಪಿ ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಅರ್ಹತೆ ಏನಿರಬೇಕು, ಆಯ್ಕೆಯನ್ನು ಹೇಗೆ ಮಾಡಿಕೊಳ್ಳಲಾಗುವುದು, ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು ಹಾಗೂ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು ಮತ್ತು ಹೇಗೆ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿದೆ ಆದಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ತಪ್ಪದೆ ಓದಿರಿ.
ಅರ್ಹತೆ ಏನು: ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳು, ಪದವಿ ಪೂರ್ವ, ಸ್ನಾತಕೋತ್ತರ, ಡಿಪ್ಲೋಮಾ ಕೋರ್ಸ್ ಗಳನ್ನು ವಿದ್ಯಾಭ್ಯಾಸ ಮಾಡುತ್ತಿರುವಂತಹ ಅಭ್ಯರ್ಥಿಗಳು ಈ ಎನ್ ಎಸ್ ಪಿ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
NSP ನೋಂದಣಿ!
- ನೀವು ಮೊದಲು ನಾವು ಈ ಕೆಳಗೆ ನೀಡಿರುವಂತಹ ಅಧಿಕೃತ ವೆಬ್ಸೈಟ್ ಗೆ ತೆರಳಿರಿ.
- http://scholarships.gov.in
- ಅಲ್ಲಿ ವಿದ್ಯಾರ್ಥಿಗಳು ಎನ್ನುವಂತಹ ಆಯ್ಕೆಯನ್ನು ಆರಿಸಿರಿ.
- ನಂತರ OTR ಎಂಬುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನೀವು ಹೊಸ ಬಳಕೆದಾರರಾಗಿದ್ದರೆ ಓ ಟಿ ಆರ್ ನೋಂದಣಿಯನ್ನು ಮಾಡಿಕೊಳ್ಳಿರಿ. ಮೊದಲೇ ಓಟಿಆರ್ ಮಾಡಿಕೊಂಡಿದ್ದರೆ ಡೈರೆಕ್ಟ್ ಲಾಗಿನ್ ಮಾಡಿಕೊಳ್ಳಿ.
- ನಂತರದಲ್ಲಿ ಮೊಬೈಲ್ ನಂಬರ್ ಅನ್ನು ಹಾಕಿರಿ. ಅದಾದಮೇಲೆ ನಂತರದ ಹಂತಕ್ಕೆ ಹೋಗುವಿರಿ.
- ಮುಂದೆ ನಿಮ್ಮ ಹೆಸರು, ಜನ್ಮ ದಿನಾಂಕ, ರಾಜ್ಯ ಮತ್ತು ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯ ವಿವರವನ್ನು ಹಾಕಿ EKYC ಪೂರ್ತಿ ಗೊಳಿಸಿರಿ.
- ಮತ್ತೆ ನೀವು ಲಾಗಿನ್ ಪೇಜ್ ಗೆ ಮರಳಿರಿ. OTR ಐಡಿ ಹಾಗೂ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.
- ನಂತರ ಲಾಗಿನ್ ಮಾಡಿದ ಮೇಲೆ ನೀವು ಯಾವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಿರಿ ಅದರ ಮೇಲೆ ಕ್ಲಿಕ್ ಮಾಡಿರಿ. ಬ್ಯಾಂಕ್ ಖಾತೆಯ ವಿವರಗಳನ್ನು ಅಲ್ಲಿ ಹಾಕಿರಿ.
- ಮತ್ತೆ ಕೇಳಿರುವಂತಹ ಅಗತ್ಯ ದಾಖಲೆಗಳ ವಿವರಗಳನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿರಿ.
- ನೀವು ಎಲ್ಲ ದಾಖಲೆಗಳ ವಿವರವನ್ನು ಭರ್ತಿ ಮಾಡಿದ ನಂತರ ಈ ಎನ್ ಎಸ್ ಪಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು?
31 ಆಗಸ್ಟ್ 2024 ಈ ದಿನಾಂಕವು ಮೆಟ್ರಿಕ್ ಪೂರ್ವದ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
31 ಅಕ್ಟೋಬರ್ 2024 ಈ ದಿನಾಂಕವು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.