Post Office Recruitment 2024: ಅಂಚೆ ಇಲಾಖೆಯಲ್ಲಿ GDS ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.! ಇಲ್ಲಿದೆ ಪೂರ್ತಿ ವಿವರ.!
ಎಲ್ಲಾ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸ ಹೊರಟಿರುವ ವಿಷಯವೇನೆಂದರೆ ಇತ್ತೀಚಿಗೆ ಅಂಚೆ ಇಲಾಖೆಯು 44,228 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆ ಅರ್ಜಿ ಸಲ್ಲಿಸಲು ಯಾರು ಅರ್ಹರು, ವೇತನ ಎಷ್ಟು, ಆಯ್ಕೆ ಪ್ರಕ್ರಿಯೆ ಹೇಗೆ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು ಯಾವವು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿರಿ.
ಅರ್ಹತೆ ಏನು: ಕಳೆದ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲಾಗಿರುವ ಪೋಸ್ಟಲ್ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಸ್ತುತ ಎಲ್ಲ ರಾಜ್ಯಗಳಿಗೆ ಹೊಸ ಜೆಡಿಎಸ್ ಡ್ರೈವ್ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 10ನೇ ತರಗತಿಯನ್ನು ಪಾಸಾಗಿರಬೇಕಾಗಿರುತ್ತದೆ.
ವಯಸ್ಸಿನ ಮಿತಿ: ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷದ ಒಳಗಡೆ ಇರಬೇಕಾಗಿರುತ್ತದೆ. 5 ವರ್ಷದವರೆಗೆ SC, ST ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಾಗುವುದು. OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇದೆ. ಮತ್ತು PWD ಅಭ್ಯರ್ಥಿಗಳಿಗೆ 10 ರಿಂದ 15 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಈ ಹುದ್ದೆಯ ವೇತನ: ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ 18,500 ರೂ ವೇತನವನ್ನು ನೀಡಲಾಗುವುದು. ಹಾಗೂ ಬತ್ತೆಗಳು ಕೂಡ ಇರುತ್ತದೆ. ಸಹಾಯಕ ಟ್ರಾನ್ಸ್ ಪೋಸ್ಟ ಮಾಸ್ಟರ್ ಆಗಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ 14,500 ರೂ ವೇತನವನ್ನು ನೀಡಲಾಗುವುದು. ಮತ್ತು ಇತರ ಬತ್ತಿಗಳು ಕೂಡ ಇರುತ್ತದೆ.
ಆಯ್ಕೆ ಪ್ರಕ್ರಿಯೆ: ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳು ತಮ್ಮ 10ನೇ ತರಗತಿಯಲ್ಲಿ ಪಡೆದ ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ನಲ್ಲಿ ಬಂದಿರುವಂತಹ ಅಭ್ಯರ್ಥಿಗಳ ದಾಖಲೆಗಳ ವಿವರವನ್ನು ಪರಿಶೀಲನೆ ಮಾಡಿ ಮತ್ತು ನೀವು ಕೆಲಸ ಪಡೆದ ಜಾಗದಲ್ಲಿ ಪೋಸ್ಟಿಂಗನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ.!
- SC, ST ಮತ್ತು PWD ಹಾಗೂ ಟ್ರಾನ್ಸ್ ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ.
- ಉಳಿದ ಎಲ್ಲಾ OBC, UR, EWS ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 100 ರೂ ಶುಲ್ಕವನ್ನು ಪಾವತಿ ಮಾಡಬೇಕಾಗಿರುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು.?
- 30 ಆಗಸ್ಟ್ 2024 ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕವಾಗಿರುತ್ತದೆ.
- 3 ಸಪ್ಟೆಂಬರ್ 2024 ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ.?
ಅರ್ಹ ಅಭ್ಯರ್ಥಿಗಳು ನಾವು ಈ ಕೆಳಗಡೆ ನೀಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡುವುದರ ಮುಖಾಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.!
https://indiapostgdsonline.gov.in./website