ರೈಲ್ವೆ ಇಲಾಖೆಯಲ್ಲಿ 3,115 ಹೊಸ ಉದ್ಯೋಗಗಳ ಅಧಿ ಸೂಚನೆ 2024 | ಅರ್ಜಿ ಸಲ್ಲಿಸುವ ಪೂರ್ತಿ ಮಾಹಿತಿ ಇಲ್ಲಿದೆ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಹೊರಟಿರುವಂತಹ ಮಾಹಿತಿಯು ಏನೆಂದರೆ, ಪೂರ್ವ ರೈಲ್ವೆ ಇಲಾಖೆಗೆ ಸಂಬಂಧಿಸಿದ 3,115 ಅಪ್ರೆಂಟಿಸ್ ಉದ್ಯೋಗಗಳನ್ನು ಭರ್ತಿ ಮಾಡುವ ಸಲುವಾಗಿ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮುನ್ನ ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ವಯಸ್ಸಿನ ಮಿತಿ, ಅಗತ್ಯ ಪ್ರಮಾಣ ಪತ್ರಗಳು, ಆಯ್ಕೆ ವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ತಾವೆಲ್ಲರೂ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ವಿದ್ಯಾರ್ಹತೆ, ವಯಸ್ಸಿನ ಮಿತಿ:
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯು ಏನಾಗಿರಬೇಕೆಂದರೆ, 10ನೇ ತರಗತಿ ವಿದ್ಯಾರ್ಹತೆ ಮತ್ತು ITI ವಿದ್ಯಾರ್ಹತೆಯು ಈ ಉದ್ಯೋಗಗಳಿಗೆ ಅರ್ಜಿ ಹಾಕಲು ಹೊಂದಿರಬೇಕಾಗಿರುತ್ತದೆ. 15 ರಿಂದ 24 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಎಸ್ ಸಿ ಎಸ್ ಟಿ 5 ವರ್ಷ, ಓಬಿಸಿ 3 ವರ್ಷ ವಯೋಮಿತಿ ಸಡಿಲಿಕೆಯು ಇರಲಾಗುವುದು.
ಆಯ್ಕೆ ಪ್ರಕ್ರಿಯೆ:
ಈ ಉದ್ಯೋಗಗಳಿಗೆ ಅರ್ಜಿ ಹಾಕಿರುವಂತಹ ಅಭ್ಯರ್ಥಿಗಳ 10ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ತಯಾರಿಸಲಾಗುತ್ತದೆ. ಮೆರಿಟಲ್ಲಿ ಬಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ವೈದ್ಯಕೀಯ ಪರೀಕ್ಷೆ:
ರೈಲ್ವೆ ಇಲಾಖೆಯಲ್ಲಿ ಪ್ರತಿ ಹುದ್ದೆಗಳಿಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಉದ್ಯೋಗಗಳಿಗೆ ಕೂಡ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು. ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಈ ಉದ್ಯೋಗಗಳನ್ನು ಪಡೆದುಕೊಳ್ಳಬಹುದು.
ಅರ್ಜಿ ಶುಲ್ಕ:
ಈ ಅರ್ಜಿ ಸಲ್ಲಿಸಿರುವಂತಹ UR, OBC ,EWS ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 100 ರೂ ಅನ್ನು ಪಾವತಿಸಬೇಕು. ಎಸ್ ಸಿ ಎಸ್ ಟಿ ಮಹಿಳಾ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿ ಹಾಕಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ.
ಸಂಬಳದ ವಿವರ:
ಈ ಉದ್ಯೋಗಗಳಿಗೆ ಆಯ್ಕೆಯಾಗಿರುವಂತಹ ಅರ್ಹ ಅಭ್ಯರ್ಥಿಗಳಿಗೆ 1 ವರ್ಷ ತರಬೇತಿಯನ್ನು ನೀಡಲಾಗುತ್ತದೆ. ಆ ತರಬೇತಿಯಲ್ಲಿ 15,000 ರೂ ಸಂಬಳವನ್ನು ನೀಡಲಾಗುತ್ತದೆ. ಇದರ ಜೊತೆಗೆ ಬೇರೆ ಯಾವುದೇ ಭತ್ಯೆ ಇರುವುದಿಲ್ಲ.
ಅಗತ್ಯ ದಾಖಲೆಗಳು:
- 10ನೇ ತರಗತಿ ಮಾರ್ಕ್ಸ್ ಕಾರ್ಡ್
- ITI, NCVT/SCVT ಪ್ರಮಾಣ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿ ಹೊಂದಿರಬೇಕು
- ಮೊಬೈಲ್ ನಂಬರ್
ಅರ್ಜಿ ದಿನಾಂಕಗಳು:
- 24 ಸಪ್ಟೆಂಬರ್ 2024 ಆನ್ಲೈನ್ ನಲ್ಲಿ ಈ ಉದ್ಯೋಗಗಳಿಗೆ ಅಪ್ಲಿಕೇಶನ್ ಹಾಕಲು ಆರಂಭದ ದಿನಾಂಕವಾಗಿರುತ್ತದೆ.
- 23 ಅಕ್ಟೋಬರ್ 2024 ಈ ದಿನಾಂಕ ಅಪ್ಲಿಕೇಶನ್ ಹಾಕಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು:
ಮೊದಲಿಗೆ ನಾವು ಈ ಕೆಳಗೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತೆರಳಿ. ಮೇಲೆ ತಿಳಿಸಲಾಗಿರುವ ಪ್ರಮುಖ ನಿಗದಿ ಮಾಡಲಾಗಿರುವ ದಿನಾಂಕಗಳಲ್ಲಿ ನೀವು ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.