RRB Recruitment 2024: ರೈಲ್ವೆ ಇಲಾಖೆಯಲ್ಲಿ 1,376 ಹುದ್ದೆಗಳ ಬರ್ತಿಗಾಗಿ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ.!
RRB Recruitment 2024: ಎಲ್ಲ ಸ್ನೇಹಿತರಿಗೂ ನಮಸ್ಕಾರ, ಆಸಕ್ತ ಮತ್ತು ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಇರುವಂತಹ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಕ್ಕಿಂತ ಮುಂಚೆ ಈ ಹುದ್ದೆಗಳ ವಿವರ, ಹುದ್ದೆಯ ವೇತನ, ಈ ಒಂದು ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಲಾಗುವುದು, ಈ ಹುದ್ದೆಗೆ ಪಾವತಿಸಬೇಕಾದ ಅರ್ಜಿ ಶುಲ್ಕ ಎಷ್ಟು ಮತ್ತು ಈ ಹುದ್ದೆಗಳ ಮುಂತಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಇಲಾಖೆ ಹೆಸರು: ರೈಲ್ವೆ ಇಲಾಖೆ ಮಂಡಳಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ಹೆಸರು: ನರ್ಸಿಂಗ್, ಸೂಪರಇನ್ಟೆಂಡೆಂಟ್, ಫಾರ್ಮಸಿಸ್ಟ್.
ಒಟ್ಟು ಹುದ್ದೆಗಳು: 1,376 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಉದ್ಯೋಗ ಸ್ಥಳ: ಭಾರತದಾದ್ಯಂತ ಈ ಹುದ್ದೆಗಳಿಗೆ ಕಾರ್ಯನಿರ್ವಹಿಸಬೇಕಾಗಿರುತ್ತದೆ.
ನೀವು ಆನ್ಲೈನ್ ನಲ್ಲಿಯೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
ಹುದ್ದೆಗಳ ವಿವರ: ರೈಲ್ವೆ ಇಲಾಖೆ ಮಂಡಳಿ ವಿವಿಧ ರೀತಿಯ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ವಯಸ್ಸಿನ ಮಿತಿ: 19 ವರ್ಷದಿಂದ 35 ವರ್ಷದ ಒಳಗಿನ ಅಭ್ಯರ್ಥಿಗಳು ರೈಲ್ವೆ ಇಲಾಖೆ ಮಂಡಳಿ ಅಧಿಸೂಚನೆ ಪ್ರಕಾರ ವಯಸ್ಸಿನ ಮಿತಿ ಇರಬೇಕು.
ಈ ಹುದ್ದೆಯ ಸಂಬಳ: ಪ್ರತಿ ತಿಂಗಳು 19,900 ರೂ. ದಿಂದ 24,900 ರೂ. ವರೆಗೆ ರೈಲ್ವೆ ಇಲಾಖೆ ಮಂಡಳಿಯು ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡುತ್ತದೆ.
ಅರ್ಜಿ ಶುಲ್ಕ:
- ರೂ 500: OBC ಅಭ್ಯರ್ಥಿಗಳಿಗೆ ಇರುತ್ತದೆ.
- ರೂ 250: ಉಳಿದಂತಹ ಎಲ್ಲಾ ಅಭ್ಯರ್ಥಿಗಳಿಗೆ ಇರುತ್ತದೆ.
- ಆನ್ಲೈನ್ ಮುಖಾಂತರ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗಿರುತ್ತದೆ.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯನ್ನು ರೈಲ್ವೆ ಇಲಾಖೆಯ ಮಂಡಳಿ ಅಧಿ ಸೂಚನೆ ಪ್ರಕಾರ ಇರಬೇಕಾಗಿರುತ್ತದೆ.
ಆಯ್ಕೆ ವಿಧಾನ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಂಪ್ಯೂಟರ್ ಮೂಲಕ ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ಸಂದರ್ಶನ ನಡೆಸಿ ಆಯ್ಕೆಯನ್ನು ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆಯ ದಿನಾಂಕ ಆರಂಭವಾಗಿದೆ.
- 16 ಅಕ್ಟೋಬರ್ 2024 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಿರುವ ಲಿಂಕ್
https://indianrailways.gov.in/railwayboard/view_section.jsp?lang=0&id=0,7,1281