SBI Bank Recruitment: SBI ಬ್ಯಾಂಕ್ ನಲ್ಲಿ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ SBI ಬ್ಯಾಂಕ್ ನಲ್ಲಿ ಉದ್ಯೋಗವಕಾಶಕ್ಕಾಗಿ ಅರ್ಜಿ ಸಲ್ಲಿಸುವುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ SBI Bank ನಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಆ ಅರ್ಜಿಗೆ ಬೇಕಾಗುವಂತಹ ದಾಖಲೆಗಳೇನು ಹಾಗೂ ಯಾವ ಹುದ್ದೆಗಳು ಖಾಲಿಯಿದೆ ಎಂಬುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ವಿವಿಧ ಸ್ಪೆಷಲ್ ಕೆಡರ್ ಆಫೀಸರ್ ಎಸ್ ಸಿ ಒ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಅರ್ಜಿ ಸಲ್ಲಿಕೆಗೊಂದು ಇರುವ ಅಧಿಕೃತ ವೆಬ್ಸೈಟ್ ಗೇ ಹೋಗಿ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 8 ಅಗಸ್ಟ್ 2024 ರಂದು ಕೊನೆಯ ದಿನಾಂಕ ವಾಗಿರುತ್ತದೆ ಆದ ಕಾರಣದಿಂದ ಆ ಕೊನೆಯ ದಿನಾಂಕದೊಳಗೆ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಗಳಿಗೆ ಸಂಬಂಧ ಪಟ್ಟ ಹಾಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಏನಿರಬೇಕು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಅಭ್ಯರ್ಥಿಯೂ ಮುಗಿಸಿರಬೇಕು. ಸಂಬಂಧಪಟ್ಟರುವ ಕ್ಷೇತ್ರದಲ್ಲಿ 3 ರಿಂದ 5 ವರ್ಷದಷ್ಟು ಕೆಲಸ ಮಾಡಿರುವ ಅನುಭವವನ್ನು ಪಡೆದುಕೊಂಡಿರಬೇಕು. ಹಾಗೆ ಅಭ್ಯರ್ಥಿಗಳು ಕೆಲಸದ ಗುತ್ತಿಗೆಯ ಅವಧಿಯು 5 ವರ್ಷ ಎನ್ನುವುದನ್ನು ಗಮನಿಸಿ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಅರ್ಜಿಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿರುವಂತಹ ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್, VP ಸಂಪತ್ತು, ಕೇಂದ್ರೀಯ ಸಂಶೋಧನಾ ತಂಡ, ಪ್ರಾದೇಶಿಕ ಮುಖ್ಯಸ್ಥರು, ಹೂಡಿಕೆ ಅಧಿಕಾರಿ, ಸಂಬಂಧ ನಿರ್ವಾಹಕರು ಮತ್ತು ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಸೇರಿ ಇನ್ನು ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಹಾಕಬಹುದು.

ಹಣಕಾಸು, ವಾಣಿಜ್ಯ, ನಿರ್ವಹಣೆ, ಗಣಿತ, ಅರ್ಥಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಪದವಿ ಮತ್ತು ಪದವಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಭರ್ತಿ ಭಾಗವಾಗಿ ಖಾಲಿ ಇರುವ ಒಟ್ಟು 1,040 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

 

ವಯಸ್ಸಿನ ಮಿತಿ ಎಷ್ಟಿರಬೇಕು.??

ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷದ ಒಳಗಿನವರು ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು. ವಯಸ್ಸಿನ ಸಡಿಲಿಕೆಯನ್ನು SBI ಬ್ಯಾಂಕ್ ಹುದ್ದೆಗಳ ನೇಮಕಾತಿ ನಿಯಮಗಳ ಅಡಿಯಲ್ಲಿ ಅನುಮತಿಯನ್ನು ನೀಡಲಾಗಿದೆ.

 

ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು.??

ಒಟ್ಟು 1,040 ಸ್ಪೆಷಲಿಸ್ಟ್ ಕೆಡರ್ ಆಫೀಸರ್ ಎಸ್ ಸಿ ಒ ಹುದ್ದೆಗಳು ಖಾಲಿ ಇವೆ ಗುತ್ತಿಗೆ ಆಧಾರ ಮೇಲೆ 5 ವರ್ಷದ ಕಾಲ ಭರ್ತಿ ಮಾಡುವ ಸಲುವಾಗಿ ಅಭಿಯಾನ ಪ್ರಯತ್ನ ಮಾಡುತ್ತಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

• VP ಸಂಪತ್ತು – 600.

• ರಿಲೇಷನ್ಶಿಪ್ ಮ್ಯಾನೇಜರ್ – 273.

• ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್ – 56.

• ಇನ್ವೆಸ್ಟ್ಮೆಂಟ್ ಆಫೀಸರ್ – 49.

• ರಿಲೇಶನ್ಶಿಪ್ ಟೀಮ್ ಲೀಡರ್ ಮ್ಯಾನೇಜರ್ – 32.

• ಪ್ರಾದೇಶಿಕ ಮುಖ್ಯಸ್ಥ – 6.

• ಮತ್ತು ಸೆಂಟ್ರಲ್ ರಿಸರ್ಚ್ ಟೀಮ್ ಪ್ರಾಡಕ್ಟ್ ಲೀಡ್ ಹುದ್ದೆಗಳು – 2.

• ಕೇಂದ್ರ ಸಂಶೋಧನಾ ತಂಡ – 2.

• ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್, ಬ್ಯುಸಿನೆಸ್ – 2.

• ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್, ಟೆಕ್ನಾಲಜಿ – 1.

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ.??

• ( sbi.co.in ) ಅಧಿಕೃತ ವೆಬ್ ಸೈಟಿಗೆ ಭೇಟಿಯನ್ನು ನೀಡಿರಿ.

• ಅಪ್ಲಿಕೇಶನ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

• ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

• ನೋಂದಣಿಯ ಸಂಖ್ಯೆ ಹಾಗೂ ಪಾಸ್ವರ್ಡ್ ಅನ್ನು ಉಪಯೋಗಿಸಿ ಲಾಗಿನ್ ಮಾಡಿರಿ.

• ಅರ್ಜಿ ಸಲ್ಲಿಕೆಗೆ ಕೇಳಿರುವಷ್ಟು ಪಾವತಿ ಹಣವನ್ನು ನೀಡಿ.

• ನಂತರ ಅರ್ಜಿ ಸಲ್ಲಿಕೆ ಪ್ರಿಂಟ್ ಔಟ್ ಅನ್ನು ತೆಗೆದಿಟ್ಟುಕೊಳ್ಳಿ.

 

ಅರ್ಜಿ ಸಲ್ಲಿಕೆಯ ದಿನಾಂಕಗಳು.??

• ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ 19 ಜುಲೈ 2024.

• ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 8 ಅಗಸ್ಟ್ 2024.

 

ಸ್ನೇಹಿತರೆ, ಈ ಒಂದು ಲೇಖನವು SBI ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಈ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳಿಗೆ ಬೇಕಾಗುವಂತಹ ದಾಖಲೆಗಳೆನು ಮತ್ತು ಖಾಲಿ ಇರುವ ಹುದ್ದೆಗಳ ಬಗ್ಗೆ ಹಾಗೂ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು ಎನ್ನುವುದನ್ನು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment