SSC GD ಹುದ್ದೆಗಳ ನೇಮಕಾತಿ ಅಧಿಸೂಚನೆ 2024 | ಆನ್ಲೈನ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ಪೂರ್ತಿ ಮಾಹಿತಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಸ್ಟಾಪ್ ಸೆಲೆಕ್ಷನ್ ಕಮಿಷನ್ ತನ್ನ ಇಲಾಖೆಯಿಂದ 39,841 ಉದ್ಯೋಗಗಳ ಬರ್ತಿಗಾಗಿ ಅಧಿಕೃತವಾದ ಅಧಿಸೂಚನೆಯನ್ನು ಹೊರಡಿಸಿದೆ. ಈ ಈ ಹುದ್ದೆಗಳಿಗೆ ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಈ ಈ ಉದ್ಯೋಗಗಳಿಗೆ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನೀವು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ. ಆದ ಕಾರಣದಿಂದ ಎಲ್ಲರೂ ಲೇಖನವನ್ನು ಪೂರ್ತಿಯಾಗಿ ಓದಿರಿ.
- ಸಂಸ್ಥೆಯ ಹೆಸರು: ಸಿಬ್ಬಂದಿ ಆಯ್ಕೆ ಆಯೋಗ
- ಹುದ್ದೆಗಳ ಹೆಸರು: ITBP, ಮತ್ತು ಜನರಲ್ ಡ್ಯೂಟಿ, GD ಕಾನ್‌ಸ್ಟೆಬಲ್ ಮುಂತಾದವುಗಳು.
- ಖಾಲಿ ಹುದ್ದೆಗಳು: 39,841
- ವರ್ಗ: ನೇಮಕಾತಿ
- ಈ ಹುದ್ದೆಗಳಿಗೆ ನೀವು ಆನ್ಲೈನ್ ನಲ್ಲಿಯೇ ಅರ್ಜಿಯನ್ನು ಹಾಕಬೇಕಾಗಿರುತ್ತದೆ.
ಶೈಕ್ಷಣಿಕ ಅರ್ಹತೆ:
ಸ್ಟಾಪ್ ಸೆಲೆಕ್ಷನ್ ಕಮಿಷನ್ ಬಿಡುಗಡೆ ಮಾಡಲಾಗಿರುವ ಹುದ್ದೆಗಳ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು 10ನೇ ತರಗತಿ ಪಾಸ್ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ. ಆಗ ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಹಾಗೆ ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳಿಗೂ ಕೂಡ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. GEN/OBC/EWS ವರ್ಗದವರಿಗೆ ₹100 ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿರುತ್ತದೆ.
ಅಗತ್ಯ ದಾಖಲೆಗಳು?
- ಗುರುತಿನ ಪುರಾವೆ (ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವರ್ ಲೈಸೆನ್ಸ್, ಅಥವಾ ಶಾಲೆ, ಕಾಲೇಜು, ಉದ್ಯೋಗದಾತ ಐಡಿ ಮುಂತಾದ ಪರ್ಯಾಯ ಫೋಟೋ ಐಡಿ)
- ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿ
- ಮೊಬೈಲ್ ನಂಬರ್
ಅರ್ಜಿ ದಿನಾಂಕಗಳು?
- 5 ಸಪ್ಟೆಂಬರ್ 2024 ಈ ದಿನಾಂಕವು ಈ ಸ್ಟಾಪ್ ಸೆಲೆಕ್ಷನ್ ಕಮಿಷನ್ ಉದ್ಯೋಗಗಳಿಗೆ ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕವಾಗಿದೆ.
- 14 ಅಕ್ಟೋಬರ್ 2024 ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು?
ಮೊದಲು ನೀವು ಈ ಕೆಳಗಡೆ ನಾವು ನೀಡಲಾಗಿರುವಂತಹ ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿರಿ. ನಂತರ ಹೊಸ ಬಳಕೆದಾರರಾಗಲು ಮಾಹಿತಿಯನ್ನು ಹಾಕಿ ನೊಂದಾಯಿಸಿ, ಕೇಳುವ ಅಗತ್ಯ ದಾಖಲೆಗಳನ್ನು ಭರ್ತಿ ಮತ್ತು ಅಪ್ಲೋಡ್ ಮಾಡಿರಿ. ಅರ್ಜಿಯನ್ನು ಪರಿಶೀಲಿಸಿ, ಅರ್ಜಿ ಶುಲ್ಕವನ್ನು ಪಾವತಿಸಿ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಜಿ ನಮೂನೆಯನ್ನು ಉಳಿಸಿಕೊಳ್ಳಿರಿ.