ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಕೇಂದ್ರ ಸರ್ಕಾರದಿಂದ ಉಚಿತ ಮನೆ ಪಡೆದುಕೊಳ್ಳುವುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಹರು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಹಲವಾರು ಜನರಿಗೆ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಆಸೆ ಇರುತ್ತದೆ ಆ ಆಸೆಯನ್ನು ನನಸು ಮಾಡಿಕೊಳ್ಳಲು ಹೋದರೆ ಹಣ ಎಂಬ ಸಮಸ್ಯೆ ಎದುರಾಗುತ್ತದೆ. ಹಣದ ಕಾರಣದಿಂದ ತಮ್ಮ ಆಸೆಯನ್ನು ನನಸು ಮಾಡಿಕೊಳ್ಳಲು ಹಲವಾರು ಜನರಿಗೆ ಸಾಧ್ಯವಾಗಿರುವುದಿಲ್ಲ. ಅದಕ್ಕಾಗಿ ಅಂತಹ ಜನರಿಗೆ ಹೊಸ ಮನೆ ಒಂದನ್ನು ಕಟ್ಟಿಕೊಳ್ಳಲು ಪ್ರಧಾನಮಂತ್ರಿಯ ಆವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಉಚಿತ ಮನೆಗಳನ್ನು ನೀಡಲಾಗುತ್ತಿದೆ. ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿರಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ.!!
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ನರೇಂದ್ರ ಮೋದಿಯವರು 2015 ರಲ್ಲಿ ಬಡತನದಲ್ಲಿ ಇರುವವರಿಗೆ ಹಾಗೂ ತೀರಾ ಬಡತನದಲ್ಲಿ ಇರುವಂತವರಿಗೆ ಆರ್ಥಿಕ ನೆರವು ನೀಡಲೆಂದು ಉಚಿತ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ನೀಡುತ್ತಿದೆ. ಎಲ್ಲ ವರ್ಗದಲ್ಲಿ ಇರುವಂತಹ ಬಡವರಿಗೆ ಉಚಿತ ಮನೆಗಳನ್ನು ನೀಡುವುದು ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ ಆಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು.??
- ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯ ವಯಸ್ಸು 18 ವರ್ಷದ ಮೇಲೆ ಇರುವುದು ಕಡ್ಡಾಯ.
- 3 ಲಕ್ಷದಿಂದ 6 ಲಕ್ಷದ ಒಳಗೆ ಕುಟುಂಬದ ಆದಾಯ ಇರಬೇಕು.
- ರೇಷನ್ ಕಾರ್ಡ್ ಕೂಡ ಬೇಕು.
- ಈ ಹಿಂದೆ ನೀವು ಯಾವುದೇ ಉಚಿತ ಮನೆಯನ್ನು ಪಡೆದುಕೊಂಡಿರಬಾರದು.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ.??
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವಂತಹ https://pmaymis.gov.in/ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
- ಆಮೇಲೆ ಪ್ರಧಾನ ಮಂತ್ರಿಯ ಆವಾಸ್ ಯೋಜನೆಗಾಗಿ ಡಾಟಾ ಎಂಟ್ರಿ ಆರಿಸಿ ಹಾಗೆ ರಾಜ್ಯ ಮತ್ತು ಜಿಲ್ಲೆಯನ್ನು ಕೂಡ ಆಯ್ಕೆ ಮಾಡಿರಿ.
- ಆದಮೇಲೆ ನಿಮ್ಮ ಒಂದು ಹೆಸರು ಹಾಗೂ ಪಾಸ್ವರ್ಡ್ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಿರಿ.
- ಮುಂದೆ ಕೇಳಿರುವಂತಹ ನೊಂದಣಿ ಫಾರ್ಮ್ ನಲ್ಲಿ ನಿಮ್ಮ ವೈಯಕ್ತಿಕವಾದಂತಹ ಎಲ್ಲ ವಿವರಗಳನ್ನು ಸರಿಯಾಗಿ ಹಾಕಿರಿ.
- ಮತ್ತೆ ಬ್ಯಾಂಕ್ ಖಾತೆಯ ವಿವರವನ್ನು ಪಿಲ್ ಮಾಡಿ.
- ನಂತರ ಸಬ್ಮಿಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ನ ಮಾಡಿರಿ.
ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮಗೇನಾದರೂ ಅಡಚಣೆ ಉಂಟಾದರೆ ನೀವು ನಿಮ್ಮ ಹತ್ತಿರದ ಸಿ ಎಸ್ ಸಿ ಕೇಂದ್ರಕ್ಕೆ ಭೇಟಿಯನ್ನು ನೀಡಿ ಅರ್ಜಿಯನ್ನು ಸಲ್ಲಿಸಿಕೊಳ್ಳಿರಿ.
ಸ್ನೇಹಿತರೆ, ಈ ಒಂದು ಲೇಖನವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಹರು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.