Annabhagya Scheme: ಅನ್ನ ಭಾಗ್ಯ ಯೋಜನೆ ಯ ಕ್ಕೆ ಹಣ ಬಂದಿದೆ.! ನಿಮಗೆ ಹಣ ಜಮಾ ಆಗಿಲ್ಲಾ ಅಂದರೆ ಕೂಡಲೇ ಈ ಕೆಲಸ ಮಾಡಿ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಜುಲೈ ತಿಂಗಳಿನ ಅಕ್ಕಿ ಹಣ ಜಮಾ ಆಗಿದೆ ಯಾರಿಗೆಲ್ಲ ಜಮಾ ಆಗಿಲ್ಲವು ಅವರು ಏನು ಮಾಡಬೇಕು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು ಘೋಷಣೆ ಮಾಡಿದ ಹಾಗೆ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಚಾಲನೆ ಮಾಡಲಾಯಿತು. ಆ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಯ ಬದಲಿಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಜುಲೈ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣವು ಈಗ ಜಮಾ ಮಾಡಲಾಗಿದೆ. ಈ ಯೋಜನೆಯ ಹಣವು ನಿಮಗೆ ಬಂದಿಲ್ಲ ಅಂದರೆ ನೀವು ಏನು ಮಾಡಬೇಕು ಎಂಬ ಮಾಹಿತಿಯು ಈ ಲೇಖನದಲ್ಲಿದೆ ಪೂರ್ತಿಯಾಗಿ ಓದಿರಿ.

ಜುಲೈ 2024 ಅನ್ನಭಾಗ್ಯ ಯೋಜನೆಯ ಹಣ.!!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಲ್ಲಿ ಈ ಅನ್ನಭಾಗ್ಯ ಯೋಜನೆಯು ಪ್ರಮುಖವಾಗಿದೆ. ಒಟ್ಟು 10 ಕೆಜಿ ಅಕ್ಕಿಯನ್ನು ಈ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ನೀಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅಕ್ಕಿಯನ್ನು ನೀಡಲು ಸರ್ಕಾರಕ್ಕೆ ಅಕ್ಕಿಯ ಕೊರತೆ ಉಂಟಾದುದರಿಂದ 5 ಕೆಜಿ ಅಕ್ಕಿಯ ಬದಲು ಪ್ರತಿ ಅಭ್ಯರ್ಥಿಗೆ 34 ರೂ ಅಂತೆ 175 ರೂ ಹಣವನ್ನು ಫಲಾನುಭವಿ ಜನರಿಗೆ ಡಿ ಬಿ ಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳಿನ ಹಣ ಜಮಾ ಆಗಿದೆ.!!

ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ 10 ಕಂತಿನವರೆಗೆ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ನಿಮ್ಮ ಒಂದು ಮೊಬೈಲ್ ನಲ್ಲಿ ಅಕ್ಕಿ ಹಣವು ಜಮಾ ಆಗುವುದರ ಬಗ್ಗೆ ಡಿ ಬಿ ಟಿ ಆಪ್ ಮೂಲಕ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣದ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಆದರೆ ತಾಂತ್ರಿಕ ತೊಂದರೆಯಿಂದ ಹಾಗೂ ದಾಖಲೆಗಳ ವಿವರದ ಕೊರತೆಯಿಂದಾಗಿ ಕೆಲವು ಕಂತಿನ ಹಣವು ಫಲಾನುಭವಿಯರ ಬ್ಯಾಂಕ್ ಖಾತೆಗೆ ಜಮಾ ಆಗದೆ ಪೆಂಡಿಂಗ್ ನಲ್ಲಿ ಉಳಿದಿದೆ. ಅಂತಹ ಫಲಾನುಭವಿಗಳು ಏನು ಕೆಲಸ ಮಾಡಬೇಕು ಎನ್ನುವ ಮಾಹಿತಿಯು ಈ ಕೆಳಗೆ ಇದೆ ನೋಡಿರಿ.

ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗದೇ ಇದ್ದವರು ಹೀಗೆ ಮಾಡಿ.!!

• ಈ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ನಿಮಗೆ ಜಮಾ ಆಗದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಇಕೆವೈಸಿ ಆಗಿರುವುದನ್ನು ಖಚಿತ ಮಾಡಿಕೊಳ್ಳಿ.

• ನೀವು ರೇಷನ್ ಕಾರ್ಡ್ ಇಕೆವೈಸಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಆಹಾರ ಇಲಾಖೆಯ ಅಧಿಕೃತವಾದ ವೆಬ್ ಸೈಟಿಗೆ ಭೇಟಿಯನ್ನು ನೀಡುವುದರ ಮುಖಾಂತರ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

• ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡು ಲಿಂಕ್ ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.

• ಬ್ಯಾಂಕ್ ಖಾತೆಯಲ್ಲಿ ಮತ್ತು ನಿಮ್ಮ ರೇಷನ್ ಕಾರ್ಡ್ ನಲ್ಲಿ ಎರಡರಲ್ಲೂ ನಿಮ್ಮ ಹೆಸರು ವ್ಯತ್ಯಾಸವಾಗಿ ಇದೆಯಾ ಎಂಬುದನ್ನು ಪರಿಶೀಲಿಸಿ.

• ನಿಮ್ಮ ಹತ್ತಿರ ಇರುವ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಿಂದಿನದ್ದಾಗಿದ್ದರೆ ಕೂಡಲೇ ಅಪ್ಡೇಟ್ ಮಾಡಿಸಿ.

• ನಿಮ್ಮ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿದೆಯೇ ಎನ್ನುವುದನ್ನು ಚೆಕ್ ಮಾಡಿರಿ.

• ನಿಮ್ಮ ಹತ್ತಿರ ಇರುವ ಬಿಪಿಎಲ್ ರೇಶನ್ ಕಾರ್ಡು ಅದು ಎಪಿಎಲ್ ಕಾರ್ಡ್ ಆಗಿ ಬದಲಾವಣೆ ಆಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಿರಿ. ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ನಕಲಿ ದಾಖಲೆಗಳನ್ನು ಕೊಟ್ಟು ಹಲವಾರು ಜನರು ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗಾಗಿ ಅಂತಹ ಕಾಡುಗಳನ್ನು ರದ್ದು ಮಾಡಲಾಗುತ್ತಿದೆ.

ಸ್ನೇಹಿತರೆ, ಈ ಒಂದು ಲೇಖನವು ಜುಲೈ ತಿಂಗಳಿನ ಅಕ್ಕಿ ಹಣ ಜಮಾ ಆಗಿದೆ ಯಾರಿಗೆಲ್ಲ ಜಮಾ ಆಗಿಲ್ಲವು ಅವರು ಏನು ಮಾಡಬೇಕು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment