PM Kisan Samman Nidhi: ಪಿಎಂ ಕಿಸಾನ್ ಯೋಜನೆಯ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು! ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಹಣ ಜಮಾ ಆಗುತ್ತದೆ! ಹೀಗೆ ಚೆಕ್ ಮಾಡಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ರೈತರಿಗೆ ಆರ್ಥಿಕ ಅಭಿವೃದ್ಧಿಗೋಸ್ಕರ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಎಲ್ಲಾ ಅರ್ಹ ರೈತರಿಗೆ 17ನೇ ಕಂತಿನವರೆಗೆ ಈ ಪಿಎಂ ಕಿಸಾನ್ ಯೋಜನೆಯ ಹಣವನ್ನು ಜಮಾ ಮಾಡಲಾಗಿದೆ. ಇನ್ನೂ ಬರಬೇಕಿರುವ 18ನೇ ಕಂತಿನ ಹಣಕ್ಕಾಗಿ ರೈತರುಗಳು ಎದುರು ನೋಡುತ್ತಿದ್ದಾರೆ. 18ನೇ ಕಂತಿನ ಹಣ ಜಮಾ ಆಗುವವರ ಪಟ್ಟಿ ಬಿಡುಗಡೆಯಾಗಿದ್ದು. ಈ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಎಲ್ಲ ಸ್ನೇಹಿತರು ಈ ಒಂದು ಲೇಖನವನ್ನು ಕೊನೆ ತನಕ ತಪ್ಪದೆ ಓದಿರಿ.
PM Kisan Samman Nidhi 2024: ದೇಶದ ಪ್ರಧಾನಿ ಆಗಿರುವಂತಹ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರತಿ ವರ್ಷ ಅರ್ಹ ರೈತರುಗಳಿಗೆ 6,000 ರೂ ಅನ್ನು 3 ಕಂತುಗಳ ರೂಪದಲ್ಲಿ ಅಂದರೆ 4 ತಿಂಗಳಿಗೊಮ್ಮೆ 2,000 ರೂ ಹಣವನ್ನು ಕೇಂದ್ರ ಸರ್ಕಾರವು ನಮ್ಮ ದೇಶದ ಎಲ್ಲ ಅರ್ಹ ಫಲಾನುಭವಿ ರೈತರುಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಈ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಬರುವ ಹಣದಿಂದ ರೈತರುಗಳು ಬೀಜಗಳು ಮತ್ತು ಕೀಟನಾಶಕ ಔಷಧಿಗಳು ಕೃಷಿಗೆ ಉಪಯೋಗ ಆಗುವಂತಹ ಮುಂತಾದ ಕೆಲಸಗಳಿಗೆ ಈ ಹಣವನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
PM Kisan Samman Nidhi 18th Installment 2024: ಎಪಿಎಂ ಕಿಸಾನ ಯೋಜನೆಯ 18ನೇ ಕಂತಿನ ಹನವು ಜಮಾ ಆಗಲು ನಾಲ್ಕು ತಿಂಗಳು ಕಾಯಬೇಕಿರುತ್ತದೆ. ಬಂದಿರುವ ಮಾಹಿತಿಯ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣವನ್ನು ಜಮಾ ಮಾಡಲಾಗುವುದು. ಈ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಜಮಾ ಆಗಬೇಕೆಂದರೆ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದು ಕಡ್ಡಾಯ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಮತ್ತು ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಈ ಕೆಳಗಡೆ ತೀರಿಸಲಾಗಿದೆ ನೋಡಿರಿ.
ಪಿಎಂ ಕಿಸಾನ್ ಪಟ್ಟಿ ಪರಿಶೀಲನೆ!
- ಈ ಪಿಎಂ ಕಿಸಾನ್ ಯೋಜನೆಯ ಬಿಡುಗಡೆ ಮಾಡಲಾಗಿರುವ ಪಟ್ಟಿಯನ್ನು ಪರಿಶೀಲನೆ ಮಾಡಲು ನೀವು ಮೊದಲಿಗೆ ನಾವು ಈ ಕೆಳಗಡೆ ನೀಡಲಾಗಿರುವ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ತೆರಳಿರಿ.
- Beneficiary List Check
- ಅಧಿಕೃತ ಜಾಲತಾಣವನ್ನು ತೆರೆದ ನಂತರ ಅಲ್ಲಿ ರಾಜ್ಯ, ಜಿಲ್ಲೆ ಹಾಗೂ ಉಪಜಿಲ್ಲೆ ಮತ್ತು ಬ್ಲಾಕ್, ಗ್ರಾಮ ಎನ್ನುವಂತಹ ಆಯ್ಕೆಗಳನ್ನು ನೋಡುವಿರಿ.
- ನಂತರ ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು Get Report ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿರಿ.
- ಮುಂದೆ ಈ ಪಿಎಮ್ ಕಿಸಾನ್ ಯೋಜನೆಯ ಅರ್ಹ ಫಲಾನುಭವಿ ರೈತರುಗಳ ಹೆಸರು ABCD ಅನುಗುಣವಾಗಿ ಇರುತ್ತವೆ. ಅಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.
PM Kisan Samman Nidhi EKYC: ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ 18ನೇ ಕಂತಿನ ಹಣ ಜಮಾ ಆಗುತ್ತದೆ. ಒಂದು ವೇಳೆ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇಲ್ಲದಿದ್ದರೆ ನೀವು ಪಿಎಂ ಕಿಸಾನ್ ಯೋಜನೆಯ EKYC ಅನ್ನು ಮಾಡಿಸುವುದು ಕಡ್ಡಾಯ. 18ನೇ ಕಂತಿನ ಹಣ ಜಮಾ ಆಗಬೇಕೆಂದರೆ ಕೂಡಲೇ ನೀವು EKYC ಮಾಡಿಸಿಕೊಳ್ಳಿರಿ.