ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ Basav Vasati ಯೋಜನೆ ಅಡಿಯಲ್ಲಿ ಉಚಿತವಾಗಿ ಮನೆ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ Basav Vasati ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಮತ್ತು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆಯ ಸ್ಥಿತಿಯನ್ನು ಚೆಕ್ ಮಾಡುವುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
Basav Vasati ಯೋಜನೆಯ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ವಸತಿ ಯೋಜನೆಗಲ್ಲಿ ಪ್ರಮುಖವಾಗಿದೆ. ಒಂದು ಯೋಜನೆಯ ನಮ್ಮ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ಹೊಂದಿರುವಂತಹ ಜನರಿಗೆ ಉತ್ತಮವಾದ ಬೆಲೆಯಲ್ಲಿ ವಸತಿ ಸೌಲಭ್ಯಗಳನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರವು ತೀರ್ಮಾನ ಮಾಡಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಆರ್ಥಿಕವಾಗಿ ದುರ್ಬಲ ಹೊಂದಿರುವಂತಹ ಜನರಿಗೆ ಕರ್ನಾಟಕ ಸರ್ಕಾರವು ಮೂಲಭೂತ ಅಗತ್ಯಗಳಲ್ಲಿ ಒಂದಾಗಿರುವ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆಯನ್ನು ಕಟ್ಟಿಸಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಜಾರಿಗೆ ತಂದಿರುವ ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲದಿಂದ ಜನರು ಹೊರಗೆ ಬರಲಿ ಎಂದು ಉತ್ತಮ ಬೆಲೆಯಲ್ಲಿ ಈ ವಸತಿ ಸೌಲಭ್ಯಗಳನ್ನು ಒದಗಿಸಬೇಕೆಂದಿದೆ.
ಈ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರವು ಒಟ್ಟು 2,500 ಕೋಟೆಯನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಡೆಸುತ್ತಿರುವ ಈ ಯೋಜನೆ ಅಡಿಯಲ್ಲಿ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ವಸತಿ ಯೋಜನೆ ಅಡಿಯಲ್ಲಿ ಸುಮಾರು 2 ಲಕ್ಷ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈ ಬಸವ ವಸತಿ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಜನರು ರಾಜ್ಯ ಸರ್ಕಾರದಿಂದ ಮನೆಯ ನಿರ್ಮಾಣಕ್ಕಾಗಿ 85% ಕಚ್ಚಾ ವಸ್ತುಗಳನ್ನು ಪಡೆದುಕೊಳ್ಳಲು ತಯಾರಾಗಿರಬೇಕು. ರಾಜ್ಯದಲ್ಲಿ ಅನುಸ್ತಾನಗೊಂಡಿರುವಂತಹ ಆರು ವಸತಿ ಯೋಜನೆಗಳಲ್ಲಿ RGRHCL ಎಂದು ಕರೆಸಿಕೊಳ್ಳುವ ಬಸವ ವಸತಿ ಯೋಜನೆಯ ಕೂಡ ಈಗ ಒಂದಾಗಿದೆ.
Basav Vasati Scheme 2024: ಹಳೆ ಮನೆ ಮತ್ತು ಮನೆ ಇಲ್ಲದವರಿಗೆ ಉಚಿತವಾಗಿ ಮನೆ ಕಟ್ಟಿಕೊಳ್ಳಲು ಅವಕಾಶ.!
ಈ ಯೋಜನೆಗೆ ಬೇಕಾಗುವಂತಹ ದಾಖಲೆಗಳು.??
• ಆಧಾರ್ ಕಾರ್ಡ್.
• ವಯಸ್ಸಿನ ಪುರಾವೆ.
• ಆದಾಯದ ಪುರಾವೆ.
• ವಿಲಾಸದ ಪುರಾವೆ.
• ಮತ್ತು ಪಾಸ್ಪೋರ್ಟ್ ಸೈಜ್ ಫೋಟೋ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ.??
• ಸರ್ಕಾರದ ಅಧಿಕೃತ ವೆಬ್ಸೈಟ್ ಆದಂತಹ https://ashraya.karnataka.gov.in/index.aspx ವೆಬ್ ಸೈಟ್ ಗೆ ಭೇಟಿ ನೀಡಿ.
• ವೆಬ್ಸೈಟ್ನ ಮೊದಲ ಪೇಜಿನಲ್ಲಿ ಆನ್ಲೈನ್ ಅಪ್ಲಿಕೇಶನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
• ಅರ್ಜಿಯನ್ನು ಸಲ್ಲಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ನಿಮ್ಮ ಹೆಸರು ಡಿಒಬಿ ನಿಮ್ಮ ತಂದೆಯ ಹೆಸರು ನಿಮ್ಮ ವಾರ್ಷಿಕ ಆದಾಯ ಇನ್ನು ಅರ್ಜಿಗೆ ಕೇಳುವಂತಹ ಎಲ್ಲ ದಾಖಲೆಗಳನ್ನು ಭರ್ತಿ ಮಾಡಿ ಇನ್ನು ಹೆಚ್ಚಿನ ವಿವರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ .
• ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಎಂಬುವ ಆಯ್ಕೆ ಮೇಲೆ ಕ್ಲಿಕ್ ಮಾಡಿರಿ.
ಈ ಬಸವ ವಸತಿ ಯೋಜನೆಯ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವುದು ಹೇಗೆ.??
ಅರ್ಜಿ ಸಲ್ಲಿಸಿರುವವರು RGRHCL ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡಿ Beneficiary Information ಆಯ್ಕೆಯನ್ನು ಆರಿಸಿಕೊಂಡು ನೀವು ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ಸ್ನೇಹಿತರೆ, ಈ ಒಂದು ಲೇಖನವು Basav Vasati ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಮತ್ತು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆಯ ಸ್ಥಿತಿಯನ್ನು ಚೆಕ್ ಮಾಡುವುದರ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.