ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಮಳೆಯಿಂದ ಉಂಟಾದ ಬೆಳೆ ಹಾನಿ ಪರಿಹಾರವಾಗಿ ಬಿಡುಗಡೆ ಮಾಡಿರುವ ಹಣದಲ್ಲಿ ಯಾರಿಗೆ ಎಷ್ಟು ಸಿಗಲಿದೆ ಎಂದು ಚೆಕ್ ಮಾಡುವ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಮಳೆಯಿಂದಾಗಿ ಬೆಳೆ ನಾಶ ಆದವರಿಗೆ ಸಹಾಯಧನ ಮೀಸಲಿಡಲಾಗಿದೆ ಮತ್ತು ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ ಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ನಮ್ಮ ರಾಜ್ಯದಲ್ಲಿ ಈಗಾಗಲೇ ನೆರೆ ಪರಿಹಾರ ಮತ್ತು ಬರ ಪರಿಹಾರ ಇನ್ನು ಮುಂತಾದ ಕಾರ್ಯಕ್ರಮಗಳಿಗೆ ಒಟ್ಟು 777 ಕೋಟಿ ಹಣವನ್ನು ಬಿಡುಗಡೆಯನ್ನು ಮಾಡಿದ್ದಾರೆ. ಉದಾಹರಣೆಗೆ 23 ಕೋಟಿ ಹಣವನ್ನು ಹಾಸನ ಜಿಲ್ಲೆಗೆ ಸರ್ಕಾರ ನೀಡಿದೆ ಎಂದು ಕಂದಾಯ ಸಚಿವರಾಗಿರುವಂತಹ ಕೃಷ್ಣಬೈರೇಗೌಡ ಅವರು ಹೇಳಿಕೆ ನೀಡಿದ್ದಾರೆ. ನೆರೆ ಮತ್ತು ಬರ ಪರಿಹಾರ ಯೋಜನೆ ಅಡಿಯಲ್ಲಿ ಬಿಡುಗಡೆಯಾಗಿರುವ ಹಣದಲ್ಲಿ ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಹಣವನ್ನು ನೀಡಲಾಗಿದೆ ಎಂದು ತಿಳಿದುಕೊಳ್ಳಲು ಈ ಲೇಖನದಲ್ಲಿ ತಿಳಿಸಿದ್ದೇವೆ ಆದ ಕಾರಣ ಈ ಲೇಖನವನ್ನು ಸಂಪೂರ್ಣವಾಗಿ ನೋಡಿರಿ.
ನದಿಯ ದಂಡೆಯಲ್ಲಿ ಹಾಗೂ ಜನರಿರುವ 200 ಬದಿಯಲ್ಲ ನೆರೆ ಇಲ್ಲದಾಗ ರೈತರು ಬೆಳೆಯನ್ನು ಬೆಳೆಯುತ್ತಾರೆ ಮತ್ತು ನೆರೆಯು ಬಂದ ಸಮಯದಲ್ಲಿ ಬೆಳೆಯನ್ನು ಮಾಡುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ನೆರೆಯು ಬಂದ ಸಮಯದಲ್ಲಿ ಪ್ರಾಣಕ್ಕೆ ಹಾನಿಯನ್ನು ಉಂಟು ಮಾಡಬಹುದು ಆದ ಕಾರಣದಿಂದ ಅಲ್ಲಿ ಬೆಳೆಯುವಂತಹ ಬೆಳೆಗಳಿಗೆ ಬೆಳೆ ಹಾನಿ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ಮಳೆಯಿಂದಾಗಿ ಬೆಳೆ ನಾಶ ಆಗಿರುವವರಿಗೆ ಸಹಾಯಧನ.??
ರಾಜ್ಯದಲ್ಲಿ ಒಟ್ಟು 777 ಕೋಟಿ ಹಣವನ್ನು ವಿಪತ್ತು ನಿರ್ವಹಣೆಗಾಗಿ ಎಲ್ಲಾ ಜಿಲ್ಲೆ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಲು ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರವು ಎಲ್ಲ ತಾಲೂಕುಗಳಿಗೆ 25 ಲಕ್ಷ ಹಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಚಿಕ್ಕ ಹಾನಿ ಆಗಿರುವಾಗ ರಾಜ್ಯ ಸರ್ಕಾರ ಈ ಒಂದು ತೊಂದರೆಯನ್ನು ನಿಭಾಯಿಸುತ್ತದೆ. ದೊಡ್ಡಮಟ್ಟ ಹಾನಿಯೂ ರಾಜ್ಯದಲ್ಲಿ ಆದರೆ ಆವಾಗ ಮಾತ್ರ ಎನ್ ಡಿ ಆರ್ ಎಫ್ ತಂಡಗಳಿಗೆ ತಿಳಿಸಬೇಕೆಂದು ಹೇಳಿದ್ದಾರೆ. ಒಟ್ಟು 777 ಕೋಟಿ ಹಣವನ್ನು ನೆರೆ ಪರಿಹಾರ ಹಾಗೂ ಬರ ಪರಿಹಾರ ಮತ್ತು ಮುಂತಾದ ಕಾರ್ಯಕ್ರಮಗಳಿಗೋಸ್ಕರ ಈ ಹಣವು ಬಿಡುಗಡೆಯಾಗಿದೆ.
ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ.??
• ಮೊದಲು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿ ಬಿ ಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ ಕೊಳ್ಳಿ.
• ಓಪನ್ ಮಾಡಿ ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಅನ್ನು ಹಾಕಿ Get OTP ಮೇಲೆ ಒತ್ತಿರಿ.
• ನಂತರ ನಿಮಗೆ ಮೊಬೈಲ್ ಗೆ ಬರುವಂತಹ OTP ಯನ್ನು ಹಾಕಿ Verify OTP ಎಂಬ ಆಯ್ಕೆಯನ್ನು ಆರಿಸಿ.
• ಮುಂದೆ ನಿಮಗೆ ಬೇಕಾಗುವಂತಹ ಯಾವುದಾದರೂ ನಾಲ್ಕು ಅಂಕಿಯ mPin ಕ್ರಿಯೇಟ್ ಮಾಡಿಕೊಂಡು ಮತ್ತು ಅದನ್ನು Conform mPin ಅನ್ನುವಲ್ಲಿ ಕೂಡ ಹಾಕಿ Submit ಆಯ್ಕ ಮೇಲೆ ಪ್ರೆಸ್ ಮಾಡಿ.
• ಮುಂದೆ ಪೇಮೆಂಟ್ ಸ್ಟೇಟಸ್ ಎಂಬುದರ ಮೇಲೆ ಒತ್ತಿರಿ.
• ನಂತರ Seeding Status Of Adhar In Bank Account ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಆಧಾರ್ ಲಿಂಕ್ ಮಾಹಿತಿಯು ನಿಮಗೆ ಕಾಣುತ್ತದೆ.
• ನಿಮ್ಮ ಆಧಾರ್ ಕಾರ್ಡ್ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದರ ಬಗೆಗಿನ ಮಾಹಿತಿ ನಿಮಗೆ ಸಿಗುತ್ತದೆ.
• ನೆರೆ ಪರಿಹಾರದ ಸ್ಟೇಟಸ್ ಅನ್ನು ನೀವು ಈ ರೀತಿಯಾಗಿ ಪರಿಶೀಲನೆ ಮಾಡಿಕೊಳ್ಳಬಹುದು.
ಸ್ನೇಹಿತರೆ, ಈ ಒಂದು ಲೇಖನವು ಮಳೆಯಿಂದಾಗಿ ಬೆಳೆ ನಾಶ ಆದವರಿಗೆ ಸಹಾಯಧನ ಮೀಸಲಿಡಲಾಗಿದೆ ಮತ್ತು ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ ಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.