ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಆಗಲೇ ಇರುವ ರೈತರ ಪಟ್ಟಿ ಬಿಡುಗಡೆ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಕೆವೈಸಿ ಆಗದೆ ಇರುವವರು ಪಟ್ಟಿ ಯನ್ನು ನೋಡುವುದು ಹೇಗೆ ಮತ್ತು ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಅನ್ನು ಹೇಗೆ ಮಾಡಿಕೊಳ್ಳುವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಪೂರ್ತಿಯಾಗಿ ಓದಿರಿ.
17ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣವು ರೈತರ ಖಾತೆಗಳಿಗೆ ಜಮಾ ಆಗಿಲ್ಲ ಎಂದು ತುಂಬಾ ಜನ ರೈತರ ದೂರು ಕೇಳಿ ಬಂದಿತ್ತು. ಪಿಎಂ ಕಿಸಾನ್ ಇಕೆವೈಸಿ ಆಗದೇ ಇರುವುದು ಮುಖ್ಯ ಕಾರಣವಾಗಿದೆ ಎಂದು ಹೇಳಬಹುದು. ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವೋ ಎಂದು ಮತ್ತು ಪಿಎಂ ಕಿಸಾನ್ ಇಕೆವೈಸಿ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿದೆ ನೋಡಿರಿ.
ಪಿಎಂ ಕಿಸಾನ್ ಇಕೆವೈಸಿ ಆಗದೆ ಇರುವ ರೈತರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ.??
• ನೀವು ಮೊದಲು ನಾವು ಇಲ್ಲಿ https://fruitspmk.karnataka.gov.in/MISReport/EKYCPendingList.aspx ನೀಡಿರುವ ಅಧಿಕೃತ ಸರ್ಕಾರದ ವೆಬ್ಸೈಟ್ಗೆ ಭೇಟಿಯನ್ನು ನೀಡಿ.
• ಮುಂದೆ ಪೆಂಡಿಂಗ್ ಇರುವ ಜಿಲ್ಲಾ ವಾರು ಇಕೆವೈಸಿ ಸಂಖ್ಯೆ ಇರುತ್ತದೆ. ನಿಮ್ಮ ಒಂದು ಜಿಲ್ಲೆಯ ಮುಂದಿನ ಸಂಖ್ಯೆಯ ಮೇಲೆ ಕ್ಲಿಕ್ ನಾ ಮಾಡಿ.
• ಹಾಗೆ ಮಾಡಿದ ನಂತರ ಎಕ್ಸೆಲ್ ಫೈಲ್ ಡೌನ್ಲೋಡ್ ಆಗುವುದನ್ನು ನೀವು ನೋಡುತ್ತೀರಿ.
• ಎಕ್ಸಲ್ ಫೈಲ್ ಡೌನ್ಲೋಡ್ ಆದ ನಂತರ ಅದನ್ನು ಓಪನ್ ಮಾಡಿರಿ.
• ಮುಂದೆ ನಿಮ್ಮ ಜಿಲ್ಲೆಯಲ್ಲಿ ಪೆಂಡಿಂಗ್ ಇರುವಂತಹ ಇಕೆವೈಸಿ ರೈತರ ಪಟ್ಟಿಯು ಕಾಣಬಹುದು. ಆ ಜಿಲ್ಲೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.
• ನಿಮ್ಮ ಮೊಬೈಲ್ ನಲ್ಲಿ ನೀವು ಈ ರೀತಿ ಇಕೆವೈಸಿ ಆಗದೇ ಇರುವುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.
ಈ ಇಕೆವೈಸಿ ಆಗದೇ ಇರುವ ರೈತರ ಪಟ್ಟಿಯಲ್ಲಿ ಒಂದು ವೇಳೆ ನಿಮ್ಮ ಹೆಸರು ಇದ್ದರೆ ನಿಮ್ಮ ಇಕೆವೈಸಿ ಆಗಿರುವುದಿಲ್ಲ. ಪಿಎಂ ಕಿಸಾನ್ ಇಕೆವೈಸಿ ಮಾಡಿಸುವುದು ಕಡ್ಡಾಯ ಅದಕ್ಕೆ ನೀವು ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಯಾವ ರೀತಿ ಇಕೆವೈಸಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಸಿದ್ದೇವೆ ಓದಿರಿ.
ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಅನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಮಾಡಿಕೊಳ್ಳುವುದು.
• ನೀವು ಮೊದಲು ನಾವು ಇಲ್ಲಿ https://exlink.pmkisan.gov.in/aadharekyc.aspx ನೀಡಿರುವ ಅಧಿಕೃತ ಸರ್ಕಾರದ ವೆಬ್ಸೈಟ್ಗೆ ಭೇಟಿಯನ್ನು ನೀಡಿ.
• ಮುಂದೆ ನಿಮಗೆ ಒಂದು ಪೇಜ್ ಕಾಣುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಭರ್ತಿ ಮಾಡಿ ಸರ್ಚ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
• ಪಿಎಂ ಕಿಸನ್ ಯೋಜನೆಯ ನಿಮ್ಮ ಇಕೆವೈಸಿ ಹಾಗಿದ್ದರೆ Your EKYC Completed Already ಅಂತ ಬರುತ್ತೆ. ನಿಮ್ಮ ಕಿಸಾನ್ ಇಕೆವೈಸಿ ಆಗಿರದಿದ್ದಲ್ಲಿ ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ನಂಬರನ್ನು ಹಾಕಿ ಪಿಎಂ ಕಿಸಾನ್ ಇಕೆವೈಸಿಯನ್ನು ಮಾಡಿಕೊಳ್ಳಬಹುದಾಗಿದೆ.
ಸ್ನೇಹಿತರೆ, ಈ ಒಂದು ಲೇಖನವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಕೆವೈಸಿ ಆಗದೆ ಇರುವವರು ಪಟ್ಟಿ ಯನ್ನು ನೋಡುವುದು ಹೇಗೆ ಮತ್ತು ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಅನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾದಂತಹ ಮಾಹಿತಿಯು ನಿಮಗೆ ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.