ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಈ ಹಿಂದೆ ಯಾರ ಹೆಸರಿನಲ್ಲಿತ್ತು.! ಎನ್ನುವ ಪೂರ್ತಿಯಾದ ಇತಿಹಾಸವನ್ನು ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿರಿ.
ಎಲ್ಲಾ ಸ್ನೇಹಿತರಿಗೂ ನಮಸ್ಕಾರ, ಇತ್ತೀಚೆಗೆ ಹೊಸದಾಗಿ ಯಾರದ್ದಾದರೂ ಜಮೀನನ್ನು ಖರೀದಿ ಮಾಡಿಕೊಂಡಿದ್ದಾರೆ ಮತ್ತು ರೈತರುಗಳು ನಿಮ್ಮ ಹೆಸರಿನಲ್ಲಿ ಇರುವಂತಹ ಸ್ವಂತ ಜಮೀನು ಯಾರ ಹೆಸರಿನಲ್ಲಿ ಇತ್ತು ಮತ್ತು ಯಾರ ಹೆಸರಿನಿಂದ ನಿಮ್ಮ ಹೆಸರಿಗೆ ನಿಮಗೆ ವರ್ಗಾವಣೆ ಮಾಡಲಾಗಿದೆ ಎನ್ನುವಂತಹ ನಿಮ್ಮ ಭೂಮಿಯ ಸಂಪೂರ್ಣವಾದ ಮಾಹಿತಿಯ ವಿವರವನ್ನು ನಿಮ್ಮ ಮೊಬೈಲ್ ಮೂಲಕವೇ ಪರಿಶೀಲನೆ ಅಥವಾ ಚೆಕ್ ಮಾಡಿಕೊಳ್ಳಬಹುದಾಗಿದೆ. ಚೆಕ್ ಮಾಡಿಕೊಳ್ಳುವುದರ ಕುರಿತಾದ ಮಾಹಿತಿಯನ್ನು ಈ ಕೆಳಗಡೆ ತಿಳಿಸಿದ್ದೇವೆ ಆದ ಕಾರಣದಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
- ಮೊದಲಿಗೆ ನೀವು ನಾವು ಈ ಕೆಳಗಡೆ ನೀಡಿರುವಂತಹ ಅಧಿಕೃತ ವೆಬ್ಸೈಟ್ ಗೆ ಹೋಗಿ.
- https://landrecords.karnataka.gov.in/service40/PendcySurveyNoWiseRpt
- ನೀವು ವೆಬ್ ಸೈಟ್ ಗೆ ಭೇಟಿ ನೀಡುತ್ತಿದ್ದಂತೆ ಭೂಮಿ ರಿಪೋರ್ಟ್ ಎಂಬುವ ಪೇಜ್ ಒಂದು ಓಪನ್ ಆಗುತ್ತದೆ.
- ನಂತರ ಆ ಪೇಜ್ ನಲ್ಲಿ ನೀವು ನಿಮ್ಮ ಒಂದು ಜಿಲ್ಲೆಯನ್ನು ಆಯ್ಕೆ ಮಾಡಿ ಮತ್ತು ತಾಲೂಕು ಕೂಡ ಆರಿಸಿರಿ ಹಾಗೆ ಹೋಬಳಿ ಮತ್ತು ನಿಮ್ಮ ಗ್ರಾಮವನ್ನು ಆಯ್ಕೆಮಾಡಿಕೊಳ್ಳಿರಿ.
- ಮುಂದೆ ಸರ್ವೇ ನಂಬರನ್ನು ಭರ್ತಿ ಮಾಡಿ g6et Report ಎನ್ನುವ ಆಯ್ಕೆ ಮೇಲೆ ಒತ್ತಿರಿ ನಂತರ ಒಂದು ಪೇಜ್ ತೆರೆದುಕೊಳ್ಳುತ್ತದೆ.
- ಆ ಪೇಜ್ ನಲ್ಲಿ ಸರ್ವೆ ನಂಬರಿನ ಹಿಸ್ಸಾ ನಂಬರ ನಲ್ಲಿ ನಿಮ್ಮ ಒಂದು ಜಮೀನು ಯಾವ ರೀತಿಯಾಗಿ ವರ್ಗಾವಣೆ ಆಗಿದೆ ಮತ್ತು ಯಾವಾಗ ವರ್ಗಾವಣೆ ಆಗಿದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯು ನಿಮಗೆ ದೊರಕುತ್ತದೆ.
ಸ್ನೇಹಿತರೆ, ಈ ಒಂದು ಲೇಖನವು ಹೊಸದಾಗಿ ಜಮೀನು ಖರೀದಿಸಿರುವಂತವರು ಮತ್ತು ತಮ್ಮ ಹೆಸರಿನಲ್ಲಿರುವ ಅಂಥವರಿಗೆ ನಿಮ್ಮ ಜಮೀನು ಯಾರ ಹೆಸರಿನಲ್ಲಿತ್ತು ಯಾರ ಹೆಸರಿನಲ್ಲಿದೆ ಹೇಗೆ ವರ್ಗಾವಣೆ ಆಗಿದೆ ಯಾವಾಗ ವರ್ಗಾವಣೆ ಆಗಿದೆ ಎನ್ನುವುದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪರಿಶೀಲನೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.